ಜಾಧವ್ ಗೆ ‘ಲೋಕ’ ಟಿಕೆಟ್ ಫಿಕ್ಸ್.! ಪ್ರತಿಸ್ಪರ್ಧಿ ಯಾರು ಗೊತ್ತಾ?

0
269

ಕಲಬುರಗಿ : ಮೈತ್ರಿಯ ಮೊದಲ ವಿಕಟ್ ಪತವಾಗಿದೆ. ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಅವರ ರಾಜಕೀಯ ನಡೆಯ ಬಗೆಗಿನ ಪ್ರಹಸನ ಒಂದು ಮಟ್ಟಿಗೆ ಈಗ ಅಂತ್ಯವಾಗಿದೆ.
ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ರಾಜೀನಾಮೆ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಗೆ ‘ಕೈ’ ಕೊಟ್ಟಿದ್ದಾರೆ.
ಮಾರ್ಚ್ 6 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಆಗಮಿಸಲಿದ್ದಾರೆ. ಬಿಜೆಪಿ ಮಹಾ ಸಮಾವೇಶದಲ್ಲಿ ಉಮೇಶ್ ಜಾಧವ್ ಅವರನ್ನು ಅಧಿಕೃತವಾಗಿ ಮೋದಿ ಸಮ್ಮುಖದಲ್ಲಿ ಪಕ್ಷ ಸೇರಿಸಿಕೊಳ್ಳಲು ಕಮಲ ಪಾಳಯ ರೆಡಿಯಾಗಿದೆ.
ಮೋದಿ ಅವರ ಜನಪರ ಯೋಜನೆ, ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರುತ್ತಿರುವುದಾಗಿ ಹೇಳಿರುವ ಉಮೇಶ್ ಜಾಧವ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ನ ಹಿರಿಯ ಮುತ್ಸದ್ಧಿ , ಸಂಸದ. ಮಲ್ಲಿಕಾರ್ಜುನ ಖರ್ಗೆ ಪ್ರತಿಸ್ಪರ್ಧಿಯಾಗಿ ಜಾಧವ್ ಕಣಕ್ಕೆ ಇಳಿಯಲಿದ್ದಾರೆ.
9 ಬಾರಿ ಶಾಸಕರಾಗಿ 2 ಬಾರಿ ಸಂಸದರಾಗಿ ಜನಾದೇಶ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಸೆಣೆಸಲು ರೆಡಿಯಾಗಿರೋ ಉಮೇಶ್ ಜಾಧವ್ 2 ಬಾರಿ ಶಾಸಕರಾಗಿ ಜನಾದೇಶ ಪಡೆದಿದ್ದವರು. ಇದೀಗ ವಿಧಾನಸಭೆ ಸಾಕು ಅಂತ ಲೋಕಸಭೆಯತ್ತ ಚಿತ್ತ ಹರಿಸಿದ್ದು, ಅವರು ಅಂದುಕೊಂಡಂತಾ ಸುಲಭ ಗೆಲುವು ಅಂತು ಸಾಧ್ಯವೇ ಇಲ್ಲ.

LEAVE A REPLY

Please enter your comment!
Please enter your name here