ಜಾಸ್ತಿ ಅನ್ನ ತಿಂದ್ರೆ ಆರೋಗ್ಯಕ್ಕೆ ಹಾನಿಕರವಂತೆ..!

1
130

ನೀವೇನಾದರೂ ಅತಿಯಾಗಿ ಅನ್ನ ತಿಂತೀರಾ.. ಹಾಗಿದ್ದರೆ ಸ್ವಲ್ಪ ಎಚ್ಚರಿಕೆಯಿಂದಿರಿ.. ಯಾಕಂದರೆ ನೂತನ ಸಂಶೋಧನೆಯ ಪ್ರಕಾರ ಅತಿ ಹೆಚ್ಚು ಅನ್ನ ತಿನ್ನುವುದು ಆರೋಗ್ಯಕ್ಕೆ ಹೆಚ್ಚಿನ ಅಪಾಯವಂತೆ.

ಹೌದು, ಅತಿಯಾಗಿ ಅನ್ನ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗ ಬಹುದು.. ಜೊತೆಗೆ ಇದೇ ಕಾಯಿಲೆಯಿಂದ ಸಾಯುವ ಸಂಭವವು ಹೆಚ್ಚು ‌ಎಂದು ನೂತನ ಸಂಶೋಧನೆಯೊಂದು ಎಚ್ಚರಿಸಿದೆ. ಬೆಳೆಯಲ್ಲಿ ನೈಸರ್ಗಿಕವಾಗಿ ಸಂಭವಿಸುವ ಆರ್ಸೆನಿಕ್ (ರಾಸಾಯನಿಕ ಅಂಶ) ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಅಕ್ಕಿ ಸೇವೆನೆಯಲ್ಲಿ ಶೇ 25ರೊಂದಿಗೆ ಬ್ರಿಟಬ್ ವಾದಿಗಳು ಅಗ್ರಸ್ಥಾನದಲ್ಲಿದ್ದಾರೆ. ಬ್ರಿಟನ್ ವಾಸಿಗಳು ಹೃದಯ ರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವೂ ಸಹ ಶೇ. 6 ರಷ್ಟು ಹೆಚ್ಚಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಇನ್ನೂ ಬೆಳೆಯಲ್ಲಿ ಸ್ವಾಭಾವಿಕವಾಗಿ ಒಟ್ಟುಗೂಡುವ ಕೆಮಿಕಲ್​ನಿಂದ ಅನಾರೋಗ್ಯ, ಆಹಾರ ಸಂಬಂಧಿತ ಕ್ಯಾನ್ಸರ್​ ಮತ್ತು ಲಿವರ್​ ಕ್ಯಾನ್ಸರ್​ ಸಂಭವಿಸುವ
ಸಾಧ್ಯತೆ ಹೆಚ್ಚಿದೆ. ಇನ್ನು ಗಂಭೀರ ಪ್ರಕರಣಗಳಲ್ಲಿ ಇದು ಸಾವನ್ನೂ ಉಂಟುಮಾಡಬಹುದು ಎಂದು ಹೇಳಲಾಗಿದೆ.‌

ಅಂದಹಾಗೆ ಅಕ್ಕಿ ಜಗತ್ತಿನಾದ್ಯಂತ ಪ್ರಧಾನ ಆಹಾರವಾಗಿದೆ, ಅಮೂಲ್ಯವಾದ ಕ್ಯಾಲೊರಿ ಮತ್ತು ಪೋಷಕಾಂಶಗಳನ್ನು ಒದಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ಅಕ್ಕಿಯನ್ನೇ ಅವಲಂಬಿಸಿದ್ದಾರೆ.

ಆದರೆ ಅಕ್ಕಿಯಲ್ಲಿರುವ ಆರ್ಸೆನಿಕ್​ನಿಂದಾಗಿ ಜಾಗತಿಕವಾಗಿ ವರ್ಷಕ್ಕೆ 50 ಸಾವಿರ ತಪ್ಪಿಸಬಹುದಾದಂತಹ ಅಕಾಲಿಕ ಮರಣಗಳು ಸಂಭವಿಸುತ್ತಿವೆ ಎಂದು ನೂತನ ಸಂಶೋಧನೆ ಎಚ್ಚರಿಸಿದೆ.

ಅಂದಹಾಗೆ ಆರ್ಸೆನಿಕ್​ ಸ್ವಾಭಾವಿಕವಾಗಿ ಮಣ್ಣಿನಲ್ಲಿ ಉತ್ಪತ್ತಿಯಾಗುತ್ತದೆ. ಆರ್ಸೆನಿಕ್ ಆಧಾರಿತ ಸಸ್ಯನಾಶಕಗಳು ಅಥವಾ ನೀರಾವರಿ ಉದ್ದೇಶಕ್ಕೆ ಬಳಸುವ ಟಾಕ್ಸಿನ್​ಯುಕ್ತ ನೀರಿನಲ್ಲಿ ಅರ್ಸೆನಿಕ್​ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತದೆ‌. ಜೊತೆಗೆ ಆಹಾರದೊಳಗೆ ಇದರ‌‌ ಅಂಶವು ಹೆಚ್ಚಾಗಿರುತ್ತದೆ.

ಭತ್ತ ಬೆಳೆಯಲು ನೀರಿನ ಪ್ರಮಾಣ ಅಧಿಕವಾಗಿ ಬೇಕಾಗಿರುವುದರಿಂದ ಬೆಳೆಯು ಮಣ್ಣಿನಲ್ಲಿರುವ ಆರ್ಸೆನಿಕ್​ ಅನ್ನು ಹೆಚ್ಚಾಗಿ ಹೀರಿಕೊಳ್ಳುತ್ತದೆ. ವಿಶೇಷವಾಗಿ ಅಕ್ಕಿ ದುರ್ಬಲವಾಗಿರುತ್ತದೆ.

ಏಕೆಂದರೆ ಭತ್ತದ ಸಸ್ಯವು ಅದರ ಬೇರಿನ ಮೂಲಕ ಹೀರಿಕೊಳ್ಳುವ ಇತರ ರಾಸಾಯನಿಕಗಳನ್ನು ಆರ್ಸೆನಿಕ್​ ಸುಲಭವಾಗಿ ಅನುಕರಿಸುತ್ತದೆ. ಇದರಿಂದಾಗಿಯೇ ಟಾಕ್ಸಿನ್​ ಸಸ್ಯದ ರಕ್ಷಣೆಯನ್ನು ಕಡೆಗಣಿಸಲು ಅನುವು ಮಾಡಿಕೊಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಮ್ಯಾಂಚೆಸ್ಟರ್​ ಮತ್ತು ಸಾಲ್ಫೋರ್ಡ್​ ಯೂನಿವರ್ಸಿಟಿಯ ಸಂಶೋಧಕರು ಇಂಗ್ಲೆಂಡ್​ ಮತ್ತು ವೇಲ್ಸ್​ ವಾಸಿಗಳ ಅಕ್ಕಿ ಸೇವನೆಯ ಮೇಲೆ ಅಧ್ಯಯನ ಮಾಡಿದ್ದರು‌. ಈ ಅಧ್ಯಯನದಲ್ಲಿ ಈ ಅಂಶ ಬಯಲಾಗಿದೆ. ಇದರಿಂದ ಆರ್ಸೆನಿಕ್​ನಿಂದ ಉಂಟಾಗುವ ಹೃದಯರಕ್ತನಾಳದ ಕಾಯಿಲೆಗಳ ಹರಡುವಿಕೆ ಪತ್ತೆಯಾಗಿದೆ. ತಮ್ಮ ಅಧ್ಯಯನವು ಸೀಮಿತವಾಗಿದ್ದು, ಇದರಲ್ಲಿನ ಯಾವುದೇ ಲಿಂಕ್ ಅನ್ನು ಧೃಢೀಕರಿಸಲು ಹೆಚ್ಚಿನ ವಿಶೇಷ ತನಿಖೆಯ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಆದರೂ ಜನರು ಹೆಚ್ಚಿನ ಅಕ್ಕಿ ಸೇವನೆ ಮಾಡಬೇಡಿ ಎಂದು ಸಲಹೆ ನೀಡಿದೆ.

ಇದರ ಬದಲಾಗಿ ಧಾನ್ಯಕ್ಕಿಂತ ಹೆಚ್ಚಾಗಿ ಬಾಸ್ಮ ತಿಯಂತಹ ಆರ್ಸೆನಿಕ್ ಮಟ್ಟ ಕಡಿಮೆ ಇರುವ ಅಕ್ಕಿ ಪ್ರಭೇದಗಳನ್ನು ಆರಿಸಿಕೊಳ್ಳಿ ಎಂದು ಜನರಿಗೆ ಸಂಶೋಧಕರು ಶಿಫಾರಸು ಮಾಡಿದ್ದಾರೆ.

 

1 COMMENT

LEAVE A REPLY

Please enter your comment!
Please enter your name here