ಇಷ್ಟ ಅಂತಾಳೆ ಆದ್ರೂ ಲವ್ ಮಾಡಲ್ವಂತೆ..! ನಿಮ್ಗೂ ಹೀಗಾಗಿದ್ಯಾ?

0
308

ಇಷ್ಟ ಅಂತಾಳೆ ಆದ್ರೂ ಲವ್ ಮಾಡಲ್ವಂತೆ..! ನಿಮ್ಗೂ ಹೀಗಾಗಿದ್ಯಾ?

“ಹೇ..,ಏನೋ ಹೇಳ್ಬೇಕಿತ್ತು ಕಣೇ..”! ಎಂದು ರವಿ ಚೇತಾನಳಿಗೆ ಮೆಸೇಜ್ ಮಾಡಿದ್ದ! ಹ್ಞೂಂ ಹೇಳೋ, ಅಂತ ಆಕೆ ರಿಪ್ಲೆ ಕೂಡ ಮಾಡಿದ್ಲು! “ಹೇಗೆ ಹೇಳಬೇಕೋ ಗೊತ್ತಾಗ್ತಾ ಇಲ್ಲ ಕಣೇ” ಅಂತ ರವಿ ಇನ್ನೊಂದು ಮೆಸೇಜ್ ಮಾಡಿದ! “ಮಂಗ್ ಮಂಗನ ಥರ ಮಾಡ್ಬೇಡ ಮುಚ್ಕೊಂಡು ಏನು ಅಂತ ಹೇಳೋ..”! ಅಂತ ಚೇತನಾ ಮೆಸೇಜಲ್ಲೇ ಆವಾಜ್ ಹಾಕಿದ್ಲು! “ಸರಿ, ಹೇಳ್ತೀನಿ ಆದ್ರೆ ಯಾರಿಗೂ ಹೇಳಲ್ಲ, ನೀನು ಕೂಡ ಬೇಜಾರ್ ಆಗಲ್ಲ ಅಂತ ಪ್ರಾಮಿಸ್ ಮಾಡು” ಅಂದ ರವಿ! “ಸರಿ, ಯಾರಿಗೂ ಹೇಳಲ್ಲ, ಅದೇನು ಅಂತ ಹೇಳೋ.., ಎಷ್ಟೋ ದಿನದಿಂದ ಹಾಡಿದ್ದೇ ಹಾಡೋ ಕಿಸ್ಬೈದಾಸ ಅನ್ನೋರೀತಿ ಏನೋ ಹೇಳ್ಬೇಕಿತ್ತು, ಹೇಳ್ಬೇಕಿತ್ತು, ಹೇಳ್ಬೇಕಿತ್ತು ಅಂತ ಹೇಳ್ತಾನೆ ಇದ್ದಿಯಾ! ಏನು ಅಂತ ಹೇಳ್ತಾ ಇಲ್ಲ. ಈಗ ನೀನು ಹೇಳ್ದೇ ಹೋದ್ರೆ ನಾನು ನಮ್ ಮನೇಲಿ ಹೇಳ್ತೀನಿ, ರವಿ ಯಾಕೋ ಅವತ್ತಿಂದ ಏನೋ ಹೇಳ್ತೀನಿ ಅಂತಿದ್ದಾನೆ, ಏನೇನೂ ಹೇಳ್ತಾ ಇಲ್ಲ ಅಂತ”! ಎಂದು ಚೇತನಾ ಮಾರುದ್ದದ ಮೆಸೇಜ್ ಅನ್ನು ಹರಿಬಿಡ್ತಾಳೆ! ” ಹೇ.. ಹೇ.. ತಿಕ್ಲು, ಹಾಗೆ ಮಾಡ್ಬೇಡ, ಏನ್ ಗೊತ್ತಾ ಏನ್ ಗೊತ್ತಾ.., ನನಗೆ ನೀ ಅಂದ್ರೆ ತುಂಬಾ ಇಷ್ಟಕಣೇ..!ಅಂದೇ ಬಿಟ್ಟ ರವಿ! ಅವಳು ಯೋಚ್ನೆ ಮಾಡ್ತಾ, ಮಾಡ್ತಾ, ಮನಸ್ಸಲ್ಲೇ ಖುಷಿ ಸಂಭ್ರಮಿಸುತ್ತಾ ಮೆಸೇಜ್ ಗೆ ರಿಪ್ಲೆ ಮಾಡೋದು ತಡ ಮಾಡಿದ್ಲು ಚೇತನಾ..! ಸಾರಿ ಕಣೇ, ಸಾರಿ ಕಣೇ.. ಅಂತ ಹೆದರಿ ಕಂಗಾಲಾದ ಹನುಮಂತರಾಯ ರವಿ ಮತ್ತೆ ಮತ್ತೆ ತಿವಿದು ತಿವಿದು ಮೆಸೇಜ್ ಹಾಕ್ತಾನೆ! “ನಿಜವಾಗ್ಲು ನಾ” ಎಂದು ಚೇತನಾ ನೀನಂದ್ರೆ ಇಷ್ಟ ಅಂತ ರವಿ ಹೇಳಿದ್ನಲ್ಲಾ, ಆ ಮೆಸೇಜ್ ಗೆ ರಿಪ್ಲೆ ಮಾಡ್ತಾಳೆ! ಅಷ್ಟೇ ಅಲ್ಲ ರವಿ ಮತ್ತೊಂದು ಮೆಸೇಜ್ ಮಾಡುವುದರೊಳಗೆ “ಪರವಾಗಿಲ್ಲ”, “ಯಾರಿಗೂ ಹೇಳಲ್ಲ” “ಸರಿ ಬಿಡು” “ನನಗೆ ಸ್ವಲ್ಪ ಟೈಮ್ ಕೊಡು” ಅಂತೆಲ್ಲಾ ಮೆಸೇಜ್ ಮಾಡಿದ್ಲು ಚೇತನಾ..! “ಓಕೆ ಕಣೇ, ಟೈಮ್ ತಗೊಂಡು ಹೇಳು” ಅಂತಾನೆ ರವಿ! ಹೀಗೆ ರವಿ ಮತ್ತು ಚೇತನಾ ನಡುವೆ ಚಾಟಿಂಗ್ ನಡೆಯತ್ತೆ! ಇಷ್ಟೇ ಅಲ್ದೆ, ಚೇತನಾ ಯಾಕೆ ಇಷ್ಟವಾದ್ಲು ಅಂತಾನು ರವಿ ಹೇಳಬೇಕಾಗುತ್ತೆ! ಚೇತನಾಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಉತ್ತರಿಸಿ ಸಾಕಾದ ರವಿ ಯಾಕಾದ್ರೂ ಪ್ರಪೋಸ್ ಮಾಡಿದ್ನೇನೋ ಅನ್ನುವಷ್ಟಾದ! “ಹ್ಞೂಂ ಓಕೆ ಫೈನ್” ಅನ್ನೋ ಮೆಸೇಜ್ ಬಂದೊಡನೆ ರವಿಗೆ ಆಕಾಶ ಭೂಮಿಯೆಲ್ಲಾ ಒಂದಾದಂಗಾಯಿತು! ಅವತ್ತಿಗೆ ಅಷ್ಟೇ ಮೆಸೇಜ್ ಸಾಕಿತ್ತು! ಗುಡ್ ನೈಟ್, ಟೇಕ್ ಕೇರ್ ಅಂತ ಹೇಳಿ ಚಾಟಿಂಗ್ ಸ್ಟಾಪ್ ಮಾಡೋ ಬದ್ಲು ರವಿ ಏನ್ ಮಾಡ್ದಾ ಗೊತ್ತಾ? ಹೇ ಓಕೆ ಫೈನ್ ಅಂದ್ರೆ ಹೆಂಗೆ, ಸರಿ ಅರ್ಥ ಆಗೋಥರ ಹೇಳೇ ಅಂತಾನೆ! ಈಗ ಚೇತನಾ ನಿಧಾನಕ್ಕೆ ಉಲ್ಟಾ ಹೊಡೆದಳು! “ರವಿ ನನಗೆ ನೀನು ಇಷ್ಟ ಇಲ್ಲ ಅಂತೇನೂ ಅಲ್ಲ, ನೀನು ಲೈಫ್ ನಲ್ಲಿ ಸೆಟಲ್ ಆಗಿಲ್ಲ ಅಂತಾನೂ ಅಲ್ಲ. ಆದ್ರೆ ಮನೆಯಲ್ಲಿ ಒಪ್ಪಿಸೋದು ಕಷ್ಟಕಣೋ. ನಮ್ ಅಪ್ಪ ಹೈ ಲೆವೆಲ್ ಕ್ರಾಕು ಮಾರಾಯಾ” ಅಂತ ಕತೆ ಹೊಡೆಯೋಕೆ ಶುರು ಮಾಡಿದ್ಲು..!

ಈ ಚೇತನಾ ಗೆ ರವಿ ಇಷ್ಟವಂತೆ! ಆದ್ರೆ ಫ್ರೆಂಡ್ ಆಗಿ ಮಾತ್ರವಂತೆ! ಮುಂದೆ ಮನೆಯಲ್ಲಿ ಮದುವೆಗೆ ಒಪ್ಪಿದರೆ ಇವಳೂ ಒಪ್ಪುತ್ತಾಳಂತೆ! ಮುಂದೆ ಪ್ರೀತಿ ಹುಟ್ಟಬಹುದಂತೆ! ಆದ್ರೆ ಈಗ ಪ್ರೀತಿ ಇಲ್ವಂತೆ!
ಫ್ರೆಂಡ್ಸ್ ರವಿ ಸುಮಾರು ಐದಾರು ವರ್ಷದಿಂದ ಚೇತನಾಳನ್ನು ಪ್ರೀತಿಸುತ್ತಿದ್ದ! ಇವರಿಬ್ಬರು ದೂರದ ಸಂಬಂಧಿಗಳು! ಚೇತನಾಳ ತಾಯಿಯ ಅಣ್ಣ ಅಂದರೆ ಸೋದರ ಮಾವ ಮತ್ತು ರವಿಯ ತಾಯಿಯ ತಂಗಿ ಅಂದರೆ ರವಿಯ ಚಿಕ್ಕಮ್ಮ ಗಂಡ ಹೆಂಡತಿ! ಈ ಸಂಬಂಧದಲ್ಲಿ ರವಿ ಮತ್ತು ಚೇತನಾ ಒಬ್ಬರಿಗೊಬ್ಬರು ಮಾವನ ಮಕ್ಕಳೇ ಆಗುತ್ತಾರೆ! ರವಿ ಮತ್ತು ಚೇತನಾ ನೇರ ಭೇಟಿ ತುಂಬಾ ಅಪರೂಪ! ಆದರೆ ಫೇಸ್ ಬುಕ್, ಹೈಕ್, ವಾಟ್ಸ್ ಆಪ್ ನಲ್ಲಿ ಚಾಟಿಂಗ್ ಡೈಲಿ ಇದ್ದಿದ್ದೇ! ಐದಾರು ವರ್ಷದಿಂದ ಚೇತನಾಳ ಬಗೆಗಿನ ಪ್ರೀತಿಯನ್ನು ಹೇಳಲಾಗದೇ ಬಚ್ಚಿಟ್ಟು ಕೊಂಡಿದ್ದ ರವಿ ಈಗ ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗಿ! ಈಗ ದುಡಿಯುತ್ತೇನೆ, ಒಳ್ಳೆಯ ಸ್ಥಾನ-ಮಾನ ಹಣವನ್ನೂ ಗಳಿಸುತ್ತೇನೆಂಬ ನಂಬಿಕೆ ಬಂದ ಮೇಲೆಯೇ.. “ಚೇತನಾ ನೀ ಅಂದರೆ ನನಗೆ ಇಷ್ಟ ಕಣೇ” ಅಂತ ಅವನು ಹೇಳಿದ್ದು! ನಿಜ ಹೇಳಬೇಕಂದರೆ ಚೇತನಾಳಿಗೂ ಇವನ ಮೇಲೆ ಪ್ರೀತಿಯಿದೆ! ಒಂದು ವೇಳೆ ಅವಳಿಗೆ ಇವನ ಮೇಲೆ ಪ್ರೀತಿ ಇಲ್ಲದೇ ಇದ್ದಿದ್ದರೆ “ಮುಂದೆ ನೋಡೋಣ” ಅಂತ ಯಾಕೆ ಹೇಳ್ತಾ ಇದ್ದಳು? ಅವಳಿಗೂ ಇಷ್ಟ ಇದೆ! ಆದ್ರೆ ಮನೆಯಲ್ಲಿ ಅಪ್ಪ ಏನ್ ಅನ್ತಾರೋ ಎಂಬ ಭಯ! ಒಪ್ಪಿಸೋದು ಕಷ್ಟ ಅನ್ನೋ ಆತಂಕ! ಆದ್ದರಿಂದಲೇ ಚೇತನಾ ರವಿಗೆ ಫ್ರೆಂಡ್ಸ್ ಆಗಿ ಇರೋಣ, ಆಮೇಲೆ ನೋಡೋಣ ಅಂತ ಹೇಳ್ತಾ ಇದ್ದಾಳೆ! ಇನ್ನೇನು ಮುಂದಿನ ಮೇ ತಿಂಗಳ ಸುಮಾರಿಗೆ ಅವಳ ಇಂಜಿನಿಯರಿಂಗ್ ಕೋರ್ಸ್ ಕೂಡ ಮುಗಿಯುತ್ತೆ! ಹೇಗಿದ್ರು ಎರಡು ಮೂರು ವರ್ಷ ಬಿಟ್ಟು ಮದ್ವೆ ಅಂತು ಮಾಡೇ ಮಾಡ್ತಾರೆ! ಗುಣ ನಡೆತೆ ಯಾವುದರಲ್ಲೂ ಕೊರತೆ ಇರದ, ಅದಕ್ಕೂ ಮೇಲಾಗಿ ಚೇತನಾಳನ್ನು ಪ್ರೀತಿಸುವ ರವಿಯೊಡನೆಯೇ ಅವಳ ಮದುವೆ ಮಾಡಿದರೂ ಮಾಡ ಬಹುದು! ಆದ್ರೆ ಪ್ರೀತಿಸಿದ್ದೇ ತಪ್ಪು ಎಂದು ಅವರಿಬ್ಬರ ನಿಜವಾದ ಪ್ರೀತಿಯನ್ನು ಕೊಂದು ಇನ್ಯಾರ್ಯಾರೋ ಜೊತೆಯಲ್ಲಿ ಮದುವೆ ಮಾಡುವುದು ಸರಿಯೇ?


ಪ್ರೀತಿ ಮಾಡಿದ್ದಾರೆಂದರೆ ದೊಡ್ಡದಾದ ತಪ್ಪು ಎಂದು ಪ್ರೇಮಿಗಳಿಗೆ ಅಪರಾಧಿಗಳ ಪಟ್ಟ ಕಟ್ಟೋದು ಸರಿಯಲ್ಲ! ಇದು ಕೇವಲ ರವಿ, ಚೇತನಾರ ಪ್ರೇಮಾಯಣ ಅಲ್ಲ, ನಮ್ಮ ನಿಮ್ಮ ನಡುವೆ ಅದೆಷ್ಟೋ ಪ್ರೇಮಿಗಳ ತೊಳಲಾಟವೂ ಹೌದು!
ಚೇತನಾಳಿಗೆ ರವಿ ಎಂದರೆ ಇಷ್ಟವಿದ್ದು, ಮನಸಾರೆ ಪ್ರೀತಿಯನ್ನೂ ಮಾಡುತ್ತಿದ್ದರೂ ಮುಂದೆ ಮನೆಯಲ್ಲಿ ಸಮಸ್ಯೆ ಎಂಬ ಒಂದೇ ಉದ್ದೇಶದಿಂದ ಅವನನ್ನು ಈಗ ಪ್ರೇಮಿ ಆಗಿರುವುದು ಬೇಡ ಫ್ರೆಂಡ್ಸ್ ಆಗಿಯೇ ಇರೋಣ ಅಂತಿದ್ದಾಳೆ! ಪ್ರೀತಿಗೂ ಸ್ನೇಹಕ್ಕೂ ವ್ಯತ್ಯಾಸವಿಲ್ಲವೇ..? ಪ್ರೀತಿಸಿದ ಹುಡುಗ ಸ್ನೇಹಿತನಾಗಿ ಇರುವುದಾದರೂ ಹೇಗೆ?

 

LEAVE A REPLY

Please enter your comment!
Please enter your name here