ಜೇನುತುಪ್ಪ ಅಸಲಿಯೋ, ನಕಲಿಯೋ ಹೀಗೆ ಪತ್ತೆ ಹಚ್ಚಿ!
ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಜೇನುತುಪ್ಪಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನವಾಗುವ ಬದಲು ಹಾನಿ ಮಾಡಬಹುದು. ಹಾಗಾಗಿ ಜೇನುತುಪ್ಪ ಖರೀದಿಸುವ ಮೊದಲು ಅಸಲಿ ಮತ್ತು ನಕಲಿ ಜೇನುತುಪ್ಪ ಗುರುತಿಸೋದು ಬಹಳ ಮುಖ್ಯ. ಶುದ್ಧ ಜೇನುತುಪ್ಪ ಪರೀಕ್ಷಿಸುವುದು ಹೇಗೆಂದು ತಿಳಿಯೋಣವೇ?
• ಹೆಬ್ಬೆರಳಿನ ಮೇಲೆ ಒಂದೆರಡು ಹನಿ ಜೇನುತುಪ್ಪವನ್ನು ಹಾಕಿಕೊಳ್ಳಿ. ಜೇನುತುಪ್ಪ ಅಸಲಿಯಾಗಿದ್ದರೆ, ಬೆರಳಿನ ಮೇಲೆ ಉಳಿದುಕೊಳ್ಳುತ್ತದೆ. ಹೆಬ್ಬೆರಳಿನ ಮೇಲೆ ಹರಡಿಕೊಂಡರೆ ಜೇನು ತುಪ್ಪ ನಕಲಿಯಾಗಿದೆ ಎನ್ನುವುದು ಖಚಿತವಾಗುತ್ತದೆ.
• ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿಕೊಳ್ಳಿ. ಜೇನುತುಪ್ಪವು ನೀರಿನಲ್ಲಿ ತಕ್ಷಣ ಕರಗಿದರೆ, ಅದು ಕಲಬೆರಕೆವಾಗಿದೆ ಎಂದರ್ಥ. ಜೇನು ದಪ್ಪವಾದ ಎಳೆಯನ್ನು ಮಾಡಿ ಕೆಳಭಾಗದಲ್ಲಿ ಸೇರಿಕೊಂಡರೆ ಅದು ಶುದ್ಧ ಜೇನುತುಪ್ಪ.
• ಒಂದು ಟಿಶ್ಯೂ ಪೇಪರ್ ತೆಗೆದುಕೊಂಡು, ಒಂದೆರಡು ಹನಿ ಜೇನುತುಪ್ಪವನ್ನು ಹಾಕಿಕೊಳ್ಳಿ. ಶುದ್ಧ ಜೇನುತುಪ್ಪವಾಗಿದ್ದರೆ ಕಾಗದದ ಮೇಲೆ ಉಳಿಯುತ್ತದೆ. ಈ ಮೂಲಕ ನೀವು ಖರೀದಿಸಿದ ಜೇನುತುಪ್ಪವು ಅಸಲಿಯೇ ಎಂದು ಪತ್ತೆಹಚ್ಚಬಹುದು.
• ಬ್ರೆಡ್ ಬಳಸಿ ಜೇನುತುಪ್ಪ ಶುದ್ಧವಾಗಿದೆಯೇ ಎಂದು ಕಂಡುಹಿಡಿಯಬಹುದು. ಬ್ರೆಡ್ ಮೇಲೆ ಶುದ್ಧ ಜೇನುತುಪ್ಪ ಹಾಕಿದರೆ ಅದು ಗಟ್ಟಿಯಾಗುತ್ತದೆ. ಒಂದು ವೇಳೆ ಕಲಬೆರಕೆ ಜೇನತುಪ್ಪ ಹಾಕಿದ ಕೂಡಲೇ ಬ್ರೆಡ್ ಮೃದುವಾಗುತ್ತದೆ. ಈ ರೀತಿಯಾದರೆ ಜೇನುತುಪ್ಪ ಶುದ್ಧವಾಗಿಲ್ಲ ಎಂದರ್ಥ.
• ಒಂದು ಮರದ ಕಡ್ಡಿಗೆ ಹತ್ತಿಯನ್ನು ಸುತ್ತಿ ಅದರ ಮೇಲೆ ಜೇನುತುಪ್ಪವನ್ನು ಹಾಕಿಕೊಳ್ಳಿ. ಈಗ ಜೀನು ತುಪ್ಪ ಹಚ್ಚಿದ ಕಡ್ಡಿಯನ್ನು ಬೆಂಕಿಯ ಸಮೀಪ ತರುತ್ತಿದ್ದಂತೆ ತಕ್ಷಣ ಬೆಂಕಿ ಹೊತ್ತಿಕೊಂಡರೆ ಅದು ಶುದ್ದ ಜೇನು ಎಂದರ್ಥ. ಇಲ್ಲದಿದ್ದರೆ ಬೆಂಕಿಹೊತ್ತಿಕೊಳ್ಳಲು ಸಮಯ ತೆಗೆದುಕೊಂಡರೆ ಕಲಬೆರಕೆಯಾಗಿದೆ ಎನ್ನುವುದು ಖಚಿತವಾಗುತ್ತದೆ.