ಟ್ಯೂನ ಮೀನು: ಆರೋಗ್ಯ, ಕೂದಲು, ಮೂಳೆಗಳಿಗೊಂದು ಸೂಪರ್‌ಫುಡ್! ತಪ್ಪದೇ ಸೇವಿಸಿ
ಮೀನು ಪ್ರಿಯರಿಗೆ ಶುಭ ಸುದ್ದಿ ಸಿಕ್ಕಿದೆ. ವಾರಕ್ಕೆ ಕೇವಲ ಎರಡು ಬಾರಿ ಟ್ಯೂನ ಮೀನು ತಿಂದರೆ ಸಾಕು — ಕೂದಲು ಉದುರೋದಿಲ್ಲ, ಮೂಳೆಗಳು ಬಲವಾಗುತ್ತವೆ, ಚರ್ಮವೂ ಹೊಳೆಯುತ್ತದೆ!
ಮೀನು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳ ಖಜಾನೆ. ಅದರಲ್ಲೂ ಟ್ಯೂನ ಮೀನು ಅಂದರೆ ಪೌಷ್ಟಿಕಾಂಶದ ಗಣಿ. ಈ ಮೀನು ನೋಟಕ್ಕೆ ಚಿಕ್ಕದಾದರೂ ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ.
ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರದಲ್ಲಿ ದೊರೆಯುವ ಈ ಮೀನು ದೇಹಕ್ಕೆ ಬೇಕಾದ ವಿಟಮಿನ್ D ಮತ್ತು ಓಮೆಗಾ-3 ಫ್ಯಾಟಿ ಆಸಿಡ್‌ನ ಉತ್ತಮ ಮೂಲ. ಈ ಅಂಶಗಳು ಮೂಳೆಗಳನ್ನು ಬಲಪಡಿಸುತ್ತವೆ, ಹೃದಯದ ಆರೋಗ್ಯ ಕಾಪಾಡುತ್ತವೆ ಮತ್ತು ಚರ್ಮಕ್ಕೆ ತೇಜಸ್ಸು ನೀಡುತ್ತವೆ.
ಆಹಾರ ತಜ್ಞರ ಪ್ರಕಾರ, ವಾರಕ್ಕೆ ಎರಡು ಬಾರಿ ಟ್ಯೂನ ಮೀನು ತಿನ್ನುವುದು ಅಥವಾ ಅದರ ಎಣ್ಣೆಯನ್ನು ಬಳಸುವುದು ವಿಟಮಿನ್ D ಕೊರತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಆಸ್ಟಿಯೋಪೊರೋಸಿಸ್ ಅಪಾಯವೂ ಕಡಿಮೆಯಾಗುತ್ತದೆ.
ಟ್ಯೂನ ಮೀನುಗಳಲ್ಲಿ ಇರುವ ಪೌಷ್ಠಿಕಾಂಶ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಹಾಗೂ ಉದುರುವ ಸಮಸ್ಯೆ ತಡೆಯುತ್ತದೆ. ದೃಷ್ಟಿ ದುರ್ಬಲತೆ, ಮಾನಸಿಕ ಒತ್ತಡ ಮತ್ತು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲೂ ಇದು ಸಹಾಯಕ.
ರುಚಿಗೂ ಆರೋಗ್ಯಕ್ಕೂ ಉಪಯುಕ್ತವಾದ ಈ ಮೀನು ಅಗ್ಗದ ಬಜೆಟ್‌ನಲ್ಲೇ ಸಿಗುತ್ತದೆ. ಮಂಗಳೂರು ಶೈಲಿಯಲ್ಲಿ ಸಾರು ಅಥವಾ ಫ್ರೈ ಮಾಡಿಕೊಳ್ಳಬಹುದು ರುಚಿ ಡಬಲ್ ಆಗತ್ತೆ ಎನ್ನಲಾಗಿದೆ.