ಡಾ.ರಾಜ್ ಸಿನಿಮಾ ಟೈಟಲ್ ಮರು ಬಳಕೆಯ ವಿರುದ್ದ ಅಭಿಯಾನ..!!
ಡಾ.ರಾಜ್ ಕುಮಾರ್ ಅಭಿನಯದ ಪ್ರತಿಯೊಂದು ಸಿನಿಮಾ ಶೀರ್ಷಿಕೆಯು ಆ ಚಿತ್ರಗಳಿಗೆ ಒಪ್ಪುವಂತಿತ್ತು.. ಆದರೆ ಈಗ ಅದೇ ಸಿನಿಮಾ ಟೈಟಲ್ ಗಳನ್ನ ಮರು ಬಳಕೆ ಮಾಡಲಾಗ್ತಿದೆ.. ಇದು ಕಥೆಗೆ ಪೂರಕವೋ ಅಥವಾ ಅಣ್ಣಾವ್ರ ಸಿನಿಮಾ ಟೈಟಲ್ ಬಳಸಿದ್ರೆ ಬಿಟ್ಟಿ ಪ್ರಚಾರ ಸಿಗುತ್ತದೆ ಎಂಬ ಯೋಚನೆಯೋ ಗೊತ್ತಿಲ್ಲ ಹೀಗಾಗೆ ಬರುಬರುತ್ತ ಈ ರೀತಿ ಟೈಟಲ್ ಗಳನ್ನ ಬಳಸುವ ಪರಿ ಬೆಳೆದು ಬರುತ್ತಿದೆ.. ಇದರಿಂದ ರಾಜ್ ಅವರು ಅಭಿನಯಿಸಿದ ಸಿನಿಮಾ ಘನತೆಗೆ ದಕ್ಕೆಯುಂಟಾಗುತ್ತಿದೆ ಅಂತ ಅವರ ಅಭಿಮಾನಿಗಳು ಅಭಿಯಾನ ಮಾಡಲು ಮುಂದಾಗಿದ್ದಾರೆ…
ಇದಕ್ಕೆ ಅಣ್ಣಾವ್ರ ಮನೆಯವರಿಂದಲು ಒಪ್ಪಿಗೆ ಸಿಕ್ಕಿದೆ.. ಅಪ್ಪಾಜಿಯ ಸಿನಿಮಾ ಟೈಟಲ್ ಗಳನ್ನ ಮರು ಬಳಕೆ ಮಾಡದಿರಲು ರಾಘವೇಂದ್ರ ರಾಜ್ ಕುಮಾರ್ ಕೂಡ ಸ್ಪಂದಿಸಿದ್ದಾರೆ.. ಹೀಗಾಗೆ ಡಾ.ರಾಜ್ ಕುಮಾರ್ ಅಭಿಮಾನಿಗಳಿಂದ ಈ ಬಗ್ಗೆ ಅಭಿಯಾನ ಶುರುವಾಗಿದ್ದು ಇದರ ಮೊದಲ ಹೆಜ್ಜೆಯಾಗಿ, ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಮೊದಲ ಸಹಿ ಮಾಡಿದ್ದಾರೆ.. ನಂತರದಲ್ಲಿ ಈ ಬಗ್ಗೆ ವಾಣಿಜ್ಯ ಮಂಡಳಿಗೆ ಮನವಿ ಪತ್ರವನ್ನ ಸಲ್ಲಿಸಲಾಗುತ್ತಿದೆ..







