ಡಿಸ್ಕೋ ಶಾಂತಿ ಪುತ್ರ ತೆರೆಮೇಲೆ..!

Date:

ಒಂದು ಕಾಲದಲ್ಲಿ ಅದ್ಭುತ ನೃತ್ಯದ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಚೆಲುವೆ ಅಂದ್ರೆ ಡಿಸ್ಕೋ ಶಾಂತಿ. ಈಕೆ ತೆರೆ ಮೇಲೆ ಬಂದ್ರೆ ಸಾಕು ಯುವಕರು ಎದೆ ಬಡಿತ ಜೋರಾಗಿ ಬಡಿದುಕೊಳ್ಳುತ್ತೆ. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ರಾಣಿಯಾಗಿ ಮೆರೆದ ಪ್ರತಿಭಾನ್ವಿತ ನಟಿ ಈಕೆ. ಬಳುಕೋ ಬಳ್ಳಿಯಂತೆ, ಚೆಲುವಿನ ಮೈಮಾಟದ ನೃತ್ಯಗಳ ಮೂಲಕ ನೋದುಗರ ಮೈ ಬಿಸಿಯೇರುವಂತೆ ಮಾಡ್ತಿದ್ದ ಬೆಡಗಿ. ಅಂಜದ ಗಂಡು, ಕುರುಕ್ಷೇತ್ರ, ಸಾಂಗ್ಲಿಯಾನ, ಯುದ್ಧಕಾಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಡಿಸ್ಕೋ ನೃತ್ಯದ ಮೂಲಕವೇ ಸಿನಿರಸಿಕರ ಮನಗೆದ್ದವರು ಶಾಂತಿ. ಬಳಿಕ ಡಿಸ್ಕೋ ಶಾಂತಿ ಅಂತಾನೇ ಫೇಮಸ್ ಆಗಿದ್ರು. ಅನಂತರ ತೆಲುಗು ರಿಯಲ್ ಸ್ಟಾರ್ ಶ್ರೀಹರಿಯನ್ನು ಮದುವೆಯಾಗೋ ಮೂಲಕ ಡ್ಯಾನ್ಸ್ ಹಾಗೂ ನಟನೆಯಿಂದ ಸ್ವಲ್ಪ ದೂರವಾಗಿದ್ರು. ಇದೀಗ ಡಿಸ್ಕೋಶಾಂತಿಯ ಪುತ್ರ ಮೇಘಾಂಶ್ ಸಿನಿ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.

ಡಿಸ್ಕೋಶಾಂತಿ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರಿದಂದ ಸೈ ಎನಿಸಿಕೊಂಡಿದ್ದಾರೆ. ಇದೀಗ ಪುತ್ರ ಮೇಘಾಂಶ್ ಟಾಲಿವುಡ್ನ ‘ರಾಜಧೂತ್’ ಅನ್ನೋ ಸಿನಿಮಾದ ಮೂಲಕ ನಾಯಕನಾಗಿ ಬಣ್ಣದ ಲೋಕಕ್ಕೆ ಕಾಲಿಡ್ತಿದ್ದಾರೆ. ಅಂದ್ದಾಗೆ ಇದೊಂದು ಮಾಸ್, ಸೆಂಟಿಮೆಂಟ್ ಚಿತ್ರವಾಗಿದ್ದು ಪಕ್ಕಾ ಲವರ್ ಬಾಯ್ ಗೆಟಪ್ನಲ್ಲಿ ಮಿಂಚಲಿದ್ದಾರೆ. ಲಕ್ಷ್ಯ ಬ್ಯಾನರ್ನಲ್ಲಿ ಸತ್ಯನಾರಾಯಣ ನಿರ್ಮಾಣದಲ್ಲಿ ರಾಜ್ಧೂತ್ ಸಿನಿಮಾ ಸೆಟ್ಟೇರೆಲಿದ್ದು ಕಾರ್ತಿಕ್ ಮತ್ತು ಅರ್ಜುನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಬಾಲನಟನಾಗಿ ನೃತ್ಯ, ಡ್ಯಾನ್ಸ್ ಕಲೆಯನ್ನು ಕರಗತ ಮಾಡಿಕೊಂಡಿರೋ ಮೇಘಾಂಶ್ ರಾಜಧೂತ್ ಹೇಗೆಲ್ಲ ಕಾಣಿಸಲಿದ್ದಾರೆ ಅನ್ನೋದು ಕುತೂಹಲ ಹೆಚ್ಚಿಸಿದೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...