ಡ್ರಗ್ಸ್ ಕೇಸ್ : ಬಿಗ್ ಬಾಸ್ ಸ್ಪರ್ಧಿ ಮನೆ ಮೇಲೆ ಪೊಲೀಸ್ ದಾಳಿ

Date:

ಸೆಲೆಬ್ರೆಟಿಗಳಿಗೆ ಡ್ರಗ್ಸ್ ಮಾರಾಟ ಸರಬರಾಜು ಆರೋಪ ಹಿನ್ನೆಲೆ ಬಿಗ್​ಬಾಸ್ ಸ್ಪರ್ಧಿಯಾಗಿದ್ದ ಮಸ್ತಾನ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಸೆಲೆಬ್ರೆಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದಡಿ ಕನ್ನಡದ ಬಿಗ್​ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಮಸ್ತಾನ್ ಮನೆ ಮೇಲೆ ಗೋವಿಂದಪುರ ಪೊಲೀಸರು ದಾಳಿ ಮಾಡಿದ್ದಾರೆ.

ಡ್ರಗ್ಸ್ ಸಾಗಾಟ ಆರೋಪ ಮೇರೆಗೆ ಇಂದು ಬೆಳಗ್ಗೆ ಬಾಣಸವಾಡಿ ಉಪವಿಭಾಗದ ಎಸಿಪಿ ಸಕ್ರಿ ನೇತೃತ್ವದ ತಂಡ ಸಂಜಯ್ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ.

ಸದ್ಯ ಮಸ್ತಾನ್​ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲಿ ನೋಡಿದ್ರೂ ‘ಯುವರತ್ನ’ನದ್ದೇ ಮಾತು – ಇದು ರೀ ಪವರ್ ಸ್ಟಾರ್ ಖದರ್!

ಕೊರೋನಾ ನಂತರ ಇದೀಗ ಎಲ್ಲಾ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆ. ಸಿನಿ ಹಬ್ಬಕೂಡ ಶುರುವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಕಡೆ ಎಲ್ಲರ ಚಿತ್ತ ನೆಟ್ಟಿದೆ.‌ ಕ್ಲಾಸ್ & ಮಾಸ್ ಎಂಟರ್ ಟೈನರ್ ಅಪ್ಪು ಯುವರತ್ನನಾಗಿ ಮಿಂಚುತ್ತಿದ್ದಾರೆ. ಸಿನಿಮಾ ಸೆಟ್ಟೇರಿದಲ್ಲಿಂದಲೂ ಸದ್ದು ಮಾಡುತ್ತಿರುವ ಯುವರತ್ನನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅಭಿಮಾನಿಗಳು ಚಿತ್ರ ರಿಲೀಸ್ ಗೆ ವ್ಹೈಟ್ ಮಾಡ್ತಿದ್ದಾರೆ. ಯುವರತ್ನನ ಹಾಡು ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದೆ.

ಯುವರತ್ನ (Yuvarathnaa) ಏಪ್ರಿಲ್​ 1ರಂದು ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಊರಿಗೊಬ್ಬ ರಾಜ, ಆ ರಾಜಂಗೊಬ್ಬಳು ರಾಣಿ, ಇಬ್ರೂ ಮದುವೆ ಆದ್ರೆ ಹಾಲು-ಜೇನು ಹಾಡು ರಿಲೀಸ್ ಆಗಿದೆ. ಜಾನಿಯವರ ಕೊರಿಯಾಗ್ರಫಿ ಸಖತ್ ಹಿಡಿಸುತ್ತದೆ.

‘ಊರಿಗೊಬ್ಬ ರಾಜಾ, ಆ ರಾಜಂಗೊಬ್ಬಳು ರಾಣಿ’ ಹಾಡು ಹೊಂಬಾಳೆ ಫಿಲ್ಮ್ಸ್​​ನ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ.
3.40 ಸೆಕೆಂಡ್​ಗಳ ಹಾಡು ಬಿಡುಗಡೆಯಾಗಿದ್ದು, ಪವರ್​ ಸ್ಟಾರ್​ ಪುನೀತ್​ ಅವರು ಅಷ್ಟೇ ಪವರ್​ಫುಲ್​ ಆಗಿ ಸ್ಟೆಪ್​ ಹಾಕಿದ್ದಾರೆ. ಊರಿಗೊಬ್ಬ ರಾಜ ಹಾಡಿನ ಸಾಹಿತ್ಯವನ್ನು ಚಿತ್ರ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರೇ ರಚಿಸಿದ್ದು, ತಮನ್.ಎಸ್​ ಸಂಗೀತ ನೀಡಿದ್ದಾರೆ. ರಮ್ಯಾ ಬೆಹರಾ ಜೊತೆಗೆ ಪುನೀತ್​ ರಾಜ್​ಕುಮಾರ್ ಅವರೇ ಧ್ವನಿಯಾಗಿದ್ದು ವಿಶೇಷ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...