ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!
ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ. ಸಾಂಬಾರು, ಪಲಾವ್‌ಗೂ ಸೇರಿ ಕ್ಯಾರೆಟ್, ಟೊಮಾಟೋ, ಬೀಟ್ರೂಟ್, ಸೌತೆಕಾಯಿ ಹೀಗೆ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಸಾಮಾನ್ಯ. ಆದರೆ ಆರೋಗ್ಯಕ್ಕೆ ಹಾನಿ ಮಾಡುವ ಕಾರಣದಿಂದ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.
ತರಕಾರಿ ಹಸಿಯಾಗಿ ತಿನ್ನುವುದರಿಂದ ಪೌಷ್ಟಿಕಾಂಶ ಸಿಗುತ್ತದೆಯಾದರೂ, ಕೆಲವು ತರಕಾರಿಗಳಲ್ಲಿ ವಿಷಕಾರಕ ಅಂಶಗಳು, ಬ್ಯಾಕ್ಟೀರಿಯಾ ಹಾಗೂ ಪರಾವಲಂಬಿ ಕೀಟಗಳು ಇರುವುದರಿಂದ ಅಪಾಯ ಉಂಟಾಗಬಹುದು. ಲಾಡಿಹುಳು ಮತ್ತು ಅದರ ಮೊಟ್ಟೆಗಳೂ ಕೂಡ ದೇಹಕ್ಕೆ ಸೇರುವ ಸಂಭವ ಇರುತ್ತದೆ.
ಹಸಿಯಾಗಿ ತಿನ್ನಬಾರಾದ ತರಕಾರಿಗಳು:
ಬದನೆಕಾಯಿ: ಬೀಜಗಳಲ್ಲಿ ಲಾಡಿಹುಳುವಿನ ಮೊಟ್ಟೆಗಳು ಇರಬಹುದಾದ ಕಾರಣ, ಚೆನ್ನಾಗಿ ಬೇಯಿಸಿ ತಿನ್ನಬೇಕು.
ಕ್ಯಾಬೇಜ್ (ಎಲೆಕೋಸು): ಹೆಚ್ಚು ಪ್ರಮಾಣದಲ್ಲಿ ಕ್ರಿಮಿ, ಕೀಟಗಳು ಇರುತ್ತವೆ. ಹೀಗಾಗಿ ಬಿಸಿ ನೀರಿನಲ್ಲಿ ಬೇಯಿಸಿ ಮಾತ್ರ ಸೇವಿಸಬೇಕು.
ಕೆಸುವಿನ ಎಲೆ, ಪಾಲಕ್, ಬಸಳೆ ಸೊಪ್ಪು: ಬಿಸಿ ನೀರಿನಲ್ಲಿ ಬೇಯಿಸಿದ ನಂತರ ಮಾತ್ರ ಸಾಂಬಾರು ಅಥವಾ ಸೊಪ್ಪುಸಾರು ತಯಾರಿಸಬೇಕು.
ಕ್ಯಾಪ್ಸಿಕಾಂ (ದೊಣ್ಣೆ ಮೆಣಸಿನಕಾಯಿ): ಬೀಜ ಭಾಗದಲ್ಲಿ ಲಾಡಿಹುಳುವಿನ ಮೊಟ್ಟೆಗಳು ಇರಬಹುದು. ಅದನ್ನು ಸ್ವಚ್ಛವಾಗಿ ತೆಗೆದು, ಬಿಸಿ ನೀರಿನಲ್ಲಿ ಮುಳುಗಿಸಿ ಬಳಿಕ ಉಪಯೋಗಿಸಬೇಕು.
ತಜ್ಞರ ಸಲಹೆಯಂತೆ, ಈ ತರಕಾರಿಗಳನ್ನು ಹಸಿಯಾಗಿ ತಿನ್ನುವುದನ್ನು ತಪ್ಪಿಸಿದರೆ ಹುಳು, ಬ್ಯಾಕ್ಟೀರಿಯಾ ಹಾಗೂ ಸೋಂಕುಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬಹುದು.