ಮೋದಿ ಅವರು ಮತ ಚಲಾಯಿಸಲು ತೆರಳುವ ಮೊದಲು ಮನೆಗೆ ತೆರಳಿ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮೋದಿ ಅವರಿಗೆ ಆಶಿರ್ವದ ಮಾಡಿದ ತಾಯಿ ಹೀರಾ ಬೇನ್, ತೆಂಗಿನಕಾಯಿ, ಶಾಲು ಜೊತೆಗೆ ಐದುನೂರು ರೂಪಾಯಿ ಹಣ ನೀಡಿ ಚುನಾವಣೆಯಲ್ಲಿ ಗೆಲ್ಲುವಂತೆ ಹಾರೈಸಿದರು. ಮಗನಿಗೆ ಸಿಹಿ ತಿನ್ನಿಸಿ ತಾವೂ ಸಿಹಿ ತಿಂದರು.
ಇತ್ತ ಮೋದಿ ಅವರು ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದರು. ಮತಚಲಾಯಿಸಿ ಟ್ವೀಟ್ ಮಾಡಿರುವ ಮೋದಿ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಕಾರ್ಯದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇಂದು ಮೂರನೇ ಹಂತದ ಲೋಕಸಭೆ ಚುನಾವಣೆಯು ನಡೆಯುತ್ತಿದ್ದು ಗುಜರಾತ್ ಸೇರಿದಂತೆ 15 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.