ತುಂಬಾ ಸುಸ್ತು ಆಗ್ತಾ ಇದ್ಯಾ? ಹಾಗಾದ್ರೆ ತಪ್ಪದೇ ಈ ಆಹಾರಗಳನ್ನು ತಿನ್ನಿ!

Date:

ತುಂಬಾ ಸುಸ್ತು ಆಗ್ತಾ ಇದ್ಯಾ? ಹಾಗಾದ್ರೆ ತಪ್ಪದೇ ಈ ಆಹಾರಗಳನ್ನು ತಿನ್ನಿ!

ಮನುಷ್ಯನಿಗೆ ತನ್ನ ದೈಹಿಕ ಕಾರ್ಯ ಚಟುವಟಿಕೆ ಸೇರಿದಂತೆ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಪೂರೈಸಿಕೊಳ್ಳಲು ದೇಹದ ಪ್ರತಿಯೊಂದು ಭಾಗಕ್ಕೂ ಶಕ್ತಿ ಹಾಗೂ ಚೈತನ್ಯದ ಅಗತ್ಯವಿದೆ.

ನಮ್ಮಲ್ಲಿ ಅನೇಕರು ಆಯಾಸ, ಸುಸ್ತು ಹಾಗೂ ನಿಶ್ಯಕ್ತಿಯಿಂದ ಬಳಲುತ್ತಾರೆ. ಚಿಕ್ಕ ಪುಟ್ಟ ಕೆಲಸ ಮಾಡಿದರೂ ಹೆಚ್ಚು ಆಯಾಸಗೊಳ್ಳುತ್ತಾರೆ. ಯಾವಾಗಲೂ ಶಕ್ತಿಯ ಕೊರತೆಯನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣ ವಿವಿಧ ಆರೋಗ್ಯ ಸಮಸ್ಯೆಗಳು ಅಥವಾ ದೈಹಿಕ ಚಟುವಟಿಕೆಯ ಕೊರತೆಯಾಗಿರಬಹುದು. ಆದರೆ ನಮ್ಮ ಜೀವನಶೈಲಿ ಹಾಗೂ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ನೀರು ಕುಡಿಯುವುದನ್ನು ಮರೆಯದಿರಿ!
ನಿರ್ಜಲೀಕರಣದ ಸಮಸ್ಯೆಯಿಂದಲೂ ಕೂಡ ಬಳಲಿಕೆ, ಸುಸ್ತು ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ದಿನಕ್ಕೆ 2 ರಿಂದ 3 ಲೀಟರ್ ನೀರನ್ನು ಸೇವಿಸಿ.

ಬೇಯಿಸಿದ ಮೊಟ್ಟೆ
ನಮಗೆಲ್ಲಾ ಗೊತ್ತೇ ಇರುವ ಹಾಗೆ, ಮೊಟ್ಟೆಯಲ್ಲಿ ಕಂಡು ಬರುವ ಅಧಿಕ ಪ್ರಮಾಣದ ಪ್ರೋಟೀನ್, ಆರೋಗ್ಯಕಾರಿ ಕೊಬ್ಬಿನಾಂಶ ಗಳು ಹಾಗೂ ದೇಹಕ್ಕೆ ಬೇಕಾಗುವ ವಿಟಮಿನ್ಸ್ ಗಳು ಹಾಗೂ ಖನಿಜಾಂಶಗಳು, ಕಂಡು ಬರುವುದರಿಂದ, ದೇಹವು ಶಕ್ತಿಯನ್ನು ಉತ್ಪಾದಿಸಲು ನೆರವಾಗುತ್ತದೆ.

ಬಾಳೆಹಣ್ಣು ಸೇವನೆ ಮಾಡಿ..
ಬಾಳೆ ಹಣ್ಣಿನಲ್ಲಿ ಹಲವಾರು ಬಗೆಯ ವಿಟಮಿನ್ಸ್ ಗಳು, ಪೊಟ್ಯಾ ಸಿಯಮ್, ಅಂಶಗಳು ಯಥೇಚ್ಛವಾಗಿ ಕಂಡು ಬರುತ್ತದೆ. ಹೀಗಾಗಿ ಊಟದ ಬಳಿಕ ಬಾಳೆಹಣ್ಣನ್ನು ಸೇವನೆ ಮಾಡಿದರೆ, ದೇಹವನ್ನು ಶಕ್ತಿಯುತವಾಗಿ ಇರಿಸಿಕೊಳ್ಳಬಹುದು.

ಪ್ರೋಟೀನ್ ಅಂಶ ಇರುವ ಆಹಾರಗಳನ್ನು ಹೆಚ್ಚು ಸೇವನೆ ಮಾಡಿ
ಪ್ರೋಟೀನ್ ಭರಿತ ಆಹಾರಗಳಾದ ಡ್ರೈ ಫ್ರೂಟ್ಸ್, ಪನ್ನೀರ್, ಚೀಸ್ , ಮೊಳಕೆ ಭರಿಸಿದ ಕಾಳುಗಳು ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ.

ತಾಜಾ ಹಣ್ಣುಗಳನ್ನು ಸೇವಿಸಿ
ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುವಂತಹ ಹಣ್ಣು ಗಳಾದ ಸೀಬೆಹಣ್ಣು, ಸೇಬು, ಕಿತ್ತಳೆ, ಮೊಸಂಬಿಯಂತಹ ಹಣ್ಣು ಗಳನ್ನ ಸೇವನೆ ಮಾಡಿ, ಇಲ್ಲಾಂದ್ರೆ ಇದರಿಂದ ಮಾಡಿದ ಜ್ಯೂಸ್ ಅನ್ನು ಕುಡಿಯಿರಿ.

ಬೀಜಗಳು
ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ನೆನೆಸಿಟ್ಟ ಬಾದಾಮಿ ಬೀಜಗಳು, ವಾಲ್ ನಟ್ಸ್, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ಚಿಯಾ ಬೀಜಗಳು, ಅಗಸೆಬೀಜಗಳು ಇವುಗಳನ್ನೆಲ್ಲಾ ಸೇವನೆ ಮಾಡಿ…

Share post:

Subscribe

spot_imgspot_img

Popular

More like this
Related

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ ಬೆಂಗಳೂರು: ಮುಖ್ಯಮಂತ್ರಿಗಳು ವಾಸ್ತವಿಕ...

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...