ತೆಂಗಿನ ಹಾಲಿನ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?

Date:

ಸಾಮಾನ್ಯವಾಗಿ ನಾವೆಲ್ಲರೂ ಹಸು, ಎಮ್ಮೆ ಮತ್ತು ಮೇಕೆ ಇತ್ಯಾದಿಗಳ ಹಾಲು ಕುಡಿಯುವುದು ಎಷ್ಟು ಮುಖ್ಯ ಎಂಬುದನ್ನು ತಿಳಿದಿರುತ್ತೀವಿ. ಇದರ ಹೊರತಾಗಿ ತೆಂಗಿನ ಹಾಲನ್ನು ಆಗಾಗ್ಗೆ ಬಳಸಿರುತ್ತೇವೆ. ಆದರೆ ಅದರಿಂದ ಸಿಗುವ ಆರೋಗ್ಯಕಾರಿ ಲಾಭಗಳ ಬಗ್ಗೆ ಮಾತ್ರ ಯಾವುದೇ ಮಾಹಿತಿ ಪಡೆದುಕೊಂಡಿರುವುದಿಲ್ಲ. ಹಾಗಾಗಿ ತೆಂಗಿನ ಹಾಲಿನ ಬಳಕೆ ಕೂಡ ನಮ್ಮ ಜೀವನದಲ್ಲಿ ಅಷ್ಟಕಷ್ಟೇ. ತೆಂಗಿನ ಹಾಲಿನ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂಬ ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.

ಹಸಿ ತೆಂಗಿನ ಕಾಯಿಯಿಂದ ಸಿಗುವ ತೆಂಗಿನ ಹಾಲು ಸ್ವತಃ ಕೊಬ್ಬಿನ ಅಂಶವನ್ನು ಹೊಂದಿರುತ್ತದೆ. ಆದರೆ ಇದು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಒಳ್ಳೆಯ ಕೊಬ್ಬಿನಂಶ ಆಗಿರುತ್ತದೆ.
ಇದರಲ್ಲಿ ಮೀಡಿಯಂ ಚೈನ್ ಟ್ರೈಗ್ಲಿಸರೈಡ್ ಫ್ಯಾಟಿ ಆಮ್ಲಗಳು ಸಾಕಷ್ಟು ಕಂಡು ಬರುವುದರಿಂದ ಮತ್ತು ವಿವಿಧ ಬಗೆಯ ಪೌಷ್ಟಿಕ ಸತ್ವಗಳು ತೆಂಗಿನ ಹಾಲಿನಲ್ಲಿ ಲಭ್ಯ ಇರುವುದರಿಂದ ನಮ್ಮ ಮಾಂಸ – ಖಂಡಗಳ ಬೆಳವಣಿಗೆಯಲ್ಲಿ ಸಹಾಯ ಮಾಡುವುದು ಮಾತ್ರವಲ್ಲದೆ ನಮ್ಮ ದಿನ ನಿತ್ಯದ ವ್ಯಾಯಾಮ ಸಂದರ್ಭದಲ್ಲಿ ನಮ್ಮ ದೇಹದಿಂದ ಹಾನಿಯಾಗುವ ಶಕ್ತಿಯ ಪ್ರಮಾಣವನ್ನು ಮತ್ತೊಮ್ಮೆ ಸಮತೋಲನವಾಗಿಸುವ ಲಕ್ಷಣ ತೆಂಗಿನ ಹಾಲಿನಲ್ಲಿ ಕಂಡು ಬರುತ್ತದೆ.
ಒಳ್ಳೆಯ ಕೊಬ್ಬಿನ ಅಂಶಗಳು ನಮ್ಮ ದೇಹಕ್ಕೆ ಸೇರುವುದರಿಂದ ಹೆಚ್ಚು ಹೊತ್ತಿನ ತನಕ ಬೇರೆ ಆಹಾರ ಸೇವನೆ ಮಾಡಬೇಕು ಎನ್ನುವ ಬಯಕೆ ಉಂಟಾಗುವುದಿಲ್ಲ. ಇದರಿಂದ ನಮ್ಮ ದೇಹದ ತೂಕ ಕಡಿಮೆ ಆಗುವುದರ ಜೊತೆಗೆ ದೈಹಿಕ ಸದೃಡತೆ ಕೂಡ ನಮಗೆ ಸಿಗುತ್ತದೆ.
ಕೆಲವರಿಗೆ ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ. ಹಾಗಾಗಿ ಆಹಾರದಲ್ಲಿನ ಪೌಷ್ಟಿಕ ಸತ್ವಗಳು ಮತ್ತು ಎಲೆಕ್ಟ್ರೋಲೈಟ್ ಅಂಶಗಳು ದೇಹದ ಸರಿಯಾದ ಕಾರ್ಯ ನಿರ್ವಹಣೆಗೆ ಸಹಾಯಕ್ಕೆ ಬರುವುದಿಲ್ಲ. ಈ ಕಾರಣದಿಂದ ಮಲ ವಿಸರ್ಜನೆ ಸರಿಯಾದ ಸಮಯಕ್ಕೆ ಸರಿಯಾದ ರೀತಿ ಆಗುವುದಿಲ್ಲ.
ವಿಪರೀತ ಅಜೀರ್ಣತೆ ಕಾಡುತ್ತಿರುವ ಕಾರಣದಿಂದ ಕರುಳಿನ ಭಾಗದಲ್ಲಿ ರೋಗ – ರುಜಿನಗಳು ಕಂಡು ಬರುವ ಸಾಧ್ಯತೆ ಇರುತ್ತದೆ. ಅಂತಹವರಿಗೆ ತೆಂಗಿನ ಹಸಿಯಾದ ಹಾಲು ಒಳ್ಳೆಯ ಸ್ನೇಹಿತ ಎಂದು ಹೇಳಬಹುದು.
ಜೀರ್ಣ ನಾಳದಲ್ಲಿ ಹೆಚ್ಚು ಪೌಷ್ಟಿಕಾಂಶಗಳನ್ನು ಮತ್ತು ಎಲೆಕ್ಟ್ರೋಲೈಟ್ ಅಂಶಗಳನ್ನು ಒದಗಿಸುವುದರಿಂದ ಹಿಡಿದು ಅಜೀರ್ಣತೆ ಮತ್ತು ಮಲಬದ್ಧತೆಯನ್ನು ದೂರಗೊಳಿಸಿ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕರುಳಿನ ಭಾಗದಲ್ಲಿ ಉಂಟು ಮಾಡುತ್ತದೆ.
ಇತ್ತೀಚಿಗೆ ಸಕ್ಕರೆ ಕಾಯಿಲೆ ಹೊಂದಿರುವ ಜನರು ಎಲ್ಲಾ ಕಡೆ ಕಂಡು ಬರುತ್ತಾರೆ. ತಮ್ಮ ಆಹಾರ ಶೈಲಿಯಿಂದ ಅಥವಾ ಅನುವಂಶೀಯವಾಗಿ ಮಧುಮೇಹವನ್ನು ದತ್ತು ಪಡೆದು ಜೀವನ ನಡೆಸುತ್ತಿರುತ್ತಾರೆ.
ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೂ ತೊಂದರೆಯೇ ಮತ್ತು ಕಡಿಮೆಯಾದರೂ ತೊಂದರೆಯೇ. ಹಾಗಾಗಿ ಸರಿಯಾದ ಇನ್ಸುಲಿನ್ ಉತ್ಪತ್ತಿ ನಿರ್ವಹಣೆ ಮಾಡಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣ ಮಾಡಿಕೊಳ್ಳಬಹುದು.
ಮಧುಮೇಹ ಹೊಂದಿದ ವ್ಯಕ್ತಿಗಳಿಗೆ ತೆಂಗಿನ ಹಾಲು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಹರಿಯುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಮಧುಮೇಹ ಸಮಸ್ಯೆ ಏರುಪೇರಾಗದಂತೆ ನೋಡಿಕೊಳ್ಳುತ್ತದೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....