ತೆಲುಗು – ತಮಿಳು ಚಿತ್ರರಂಗಗಳನ್ನು ಆಳುತ್ತಿರುವ ಕನ್ನಡತಿಯರು

0
51

ಸೌಂದರ್ಯ ಕಾಲದಿಂದಲೂ ಸಹ ಕನ್ನಡದ ನಟಿಯರು ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಆಳುತ್ತಿದ್ದಾರೆ. ತೆಲುಗಿನ ನಟಿಯರಿಗೂ ಸಹ ಸಿಗದಷ್ಟು ಮನ್ನಣೆ ಅಭಿಮಾನಿ ಬಳಗ ಮತ್ತು ಸಂಭಾವನೆ ಕನ್ನಡತಿಯರಿಗೆ ತೆಲುಗು ಚಿತ್ರರಂಗದಲ್ಲಿ ಸಿಕ್ಕಿದೆ ಮತ್ತು ಸಿಗುತ್ತಿದೆ.

 

ಪ್ರಸ್ತುತ ತೆಲುಗು ಚಿತ್ರರಂಗವನ್ನು ನಾಲ್ವರು ಕನ್ನಡತಿಯರು ಆಳುತ್ತಿದ್ದು ಈ ನಾಲ್ವರನ್ನು ಹೊರತುಪಡಿಸಿ ಬೇರೆ ಯಾವ ನಟಿಯರಿಗೂ ಸಹ ಅಷ್ಟೊಂದು ಕ್ರೇಜ್ ಮತ್ತು ಅವಕಾಶಗಳು ಬರುತ್ತಿಲ್ಲ. ಸದ್ಯ ತೆಲುಗು ಚಿತ್ರರಂಗವನ್ನು ಆಳುತ್ತಿರುವ ಆ ನಾಲ್ವರು ನಟಿಯರೆಂದರೆ..

 

 

ಪೂಜಾ ಹೆಗ್ಡೆ :

ಒಕ ಲೈಲಾ ಕೋಸಂ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ತನ್ನ ಜರ್ನಿಯನ್ನು ಆರಂಭಿಸಿ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಇದೀಗ ತೆಲುಗು ಚಿತ್ರರಂಗದ ನಂಬರ್ ಒನ್ ನಟಿಯಾಗಿ ನಿಂತಿದ್ದಾರೆ. ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್, ಪ್ರಭಾಸ್, ಮಹೇಶ್ ಬಾಬು ರಂತಹ ದೊಡ್ಡ ದೊಡ್ಡ ನಟರು ಗಳಿಗೆ ಪೂಜಾ ಹೆಗ್ಡೆಯೇ ನಾಯಕಿಯಾಗಬೇಕೆಂದು ನಿರ್ಮಾಪಕರು ಕೋಟಿ ಕೋಟಿ ಸುರಿದು ಪೂಜಾ ಹೆಗ್ಡೆ ಕಾಲ್ ಶೀಟ್ ತಡೆಯುತ್ತಿದ್ದಾರೆ.

 

 

ಅನುಷ್ಕಾ ಶೆಟ್ಟಿ

ಕಳೆದ ದಶಕದಿಂದ ತೆಲುಗು ಚಿತ್ರರಂಗವನ್ನು ಆಳಿದ ಅನುಷ್ಕಾ ಶೆಟ್ಟಿ ಅವರಿಗೆ ಇಂದಿಗೂ ಸಹ ತೆಲುಗು ಚಿತ್ರರಂಗದಲ್ಲಿ ಉತ್ತಮ ಮಾರ್ಕೆಟ್ ಇದೆ. ಈಗಾಗಲೇ ತೆಲುಗು ಚಿತ್ರರಂಗಗಳಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿರುವ ಅನುಷ್ಕಾ ಶೆಟ್ಟಿ ಅವರ ತೆಲುಗು ಕ್ರೇಜ್ ಬಗ್ಗೆ ನಿಮಗೆ ಹೆಚ್ಚೇನೂ ಹೇಳಬೇಕಿಲ್ಲ.

 

 

ನಭಾ ನಟೇಶ್

ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ ನಭಾ ನಟೇಶ್ ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನ್ನು ಹೊಂದಿದ್ದಾರೆ.

 

 

ಕೃತಿ ಶೆಟ್ಟಿ

ಇತ್ತೀಚೆಗೆ ತೆರೆಕಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ತೆಲುಗು ಚಿತ್ರ ಉಪ್ಪೆನಾದಲ್ಲಿ ಮಿಂಚಿದ ನಟಿ ಕೃತಿ ಶೆಟ್ಟಿ ಅಪಾರವಾದ ಅಭಿಮಾನಿ ಬಳಗವನ್ನು ಕೇವಲ ಒಂದೇ ಚಿತ್ರದಲ್ಲಿ ಗಳಿಸಿಬಿಟ್ಟಿದ್ದಾರೆ. ಚಿತ್ರ ಬಿಡುಗಡೆಯಾದ ಮೇಲಂತೂ ಸಾಮಾಜಿಕ ಜಾಲತಾಣಗಳಲ್ಲಿ ಈ ನಟಿಯರದ್ದೇ ಕಾರುಬಾರು. ಒಂದೇ ಚಿತ್ರದ ಮೂಲಕ ದೊಡ್ಡ ಮಟ್ಟದ ಮಾರ್ಕೆಟ್ ಸಂಪಾದಿಸಿರುವ ಈ ಕೃತಿ ಶೆಟ್ಟಿ ತೆಲುಗು ಚಿತ್ರರಂಗದ ಮುಂದಿನ ದೊಡ್ಡ ಹೀರೋಯಿನ್.

 

 

ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ತದನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ದೇಶದಾದ್ಯಂತಹ ಪ್ರಸಿದ್ಧಿ ಪಡೆದಿದ್ದಾಳೆ. ತೆಲುಗಿನ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿರುವ ರಶ್ಮಿಕಾ ಮಂದಣ್ಣ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಗಳಿಸಿದ್ದಾಳೆ.

 

 

ಸದ್ಯ ಈ ಐವರು ನಾಯಕಿಯರು ತೆಲುಗು ಮತ್ತು ತಮಿಳು ಎರಡೂ ಚಿತ್ರರಂಗಗಳನ್ನು ಸಹ ಆಳುತ್ತಿದ್ದಾರೆ.

 

LEAVE A REPLY

Please enter your comment!
Please enter your name here