ತೆಲುಗಿನಲ್ಲೂ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡಲು ಅಲ್ಲಿನ ವಿತರಕರು ಅಡ್ಡಿ ಮಾಡುತ್ತಿದ್ದಾರೆ. ಆದರೆ ಈ ಆತಂಕಗಳು ನಿವಾರಣೆಯಾಗಿ ಸಿನಿಮಾ ನಿಗದಿತ ದಿನದಂದೇ ಬಿಡುಗಡೆಯಾಗಲಿದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡಕ್ಕಿತ್ತು ಹಾಗೆಯೇ
ತೆಲುಗು ಚಿತ್ರರಂಗದ 300 ಹೆಚ್ಚು ಹೆಸರಾಂತ ನಿರ್ಮಾಪಕರು ನಿನ್ನೆ ರಾತ್ರಿ ಹೈದರಾಬಾದಿನಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಸರ್ ಅವರನ್ನು ಸನ್ಮಾನಿಸಿದ್ದಾರೆ.

ರಾಬರ್ಟ್ ಚಿತ್ರ ತೆಲುಗಿನಲ್ಲಿ ಅತಿ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಗೆ ಸಂಪೂರ್ಣ ಬೆಂಬಲವನ್ನು ಎಲ್ಲಾ ನಿರ್ಮಾಪಕರು ಘೋಷಿಸಿದ್ದಾರೆ ಮಾರ್ಚ್ 11ರಂದು ಯಾವುದೇ ಸಮಸ್ಯೆಯಿಲ್ಲದೆ ಕನ್ನಡ ಮತ್ತು ತೆಲುಗು 2 ಭಾಷೆಯಲ್ಲೂ ಏಕಕಾಲದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ನಮ್ಮ ಹೆಮ್ಮೆಯ ರಾಬರ್ಟ್ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.






