ತೇಟ್ ರಾಣಿ ರೀತಿ ಹೊಳೆಯುತ್ತಿರುವ ರಶ್ಮಿಕ

Date:

ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಅನಿಮಲ್ ಚಿತ್ರ ಬಂದ್ಮೇಲೆ ಅಲ್ಲಿ ಈ ಬೆಡಗಿಯನ್ನ ನೋಡೋ ಆ್ಯಂಗಲ್ ಬದಲಾಗಿದೆ. ಉರಿ ಚಿತ್ರ ಖ್ಯಾತಿಯ ನಟ ವಿಕ್ಕಿ ಕೌಶಲ್ ಜೊತೆಗೆ ರಶ್ಮಿಕಾ ಇತ್ತೀಚಿಗೆ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ. ಆ ಫೋಟೋ ಶೂಟ್‌ನಲ್ಲಿಯ ತಮ್ಮ ಕೆಲವು ಫೋಟೋಗಳನ್ನ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪರ್ಪಲ್ ಬ್ಯಾಗ್ರೌಂಡ್‌ನಲ್ಲಿ ಇಡೀ ಒಂದು ಫೋಟೋ ಶೂಟ್ ಮಾಡಲಾಗಿದೆ. ಈ ಒಂದು ಫೋಟೋ ಶೂಟ್‌ನಲ್ಲಿ ವಿಶೇಷವೊಂದಿದೆ. ಹೌದು, ಇಲ್ಲಿ ಹಿನ್ನೆಲೆಯಲ್ಲಿ ಅತಿ ದೊಡ್ಡ ಆನೆಯನ್ನ ಗೋಡೆಯಲ್ಲಿ ಬಿಡಿಸಲಾಗಿದೆ. ಅದು ಪರ್ಪಲ್ ಕಲರ್‌ನಲ್ಲಿಯೇ ಇದೆ. ಈ ಒಂದು ವಿಶೇಷ ಆನೆ ಮುಂದೆ ರಶ್ಮಿಕಾ ಫೋಟೋ ಶೂಟ್ ಮಾಡಿಸಿದ್ದಾರೆ.

ಇಲ್ಲಿ ಹಂಸ ಕೂಡ ಇದೆ. ಆ ಹಂಸದ ಮುಂದೆ ಕುಳಿತು ರಶ್ಮಿಕಾ ಮಂದಣ್ಣ ವಿವಿಧ ರೀತಿ ಪೋಸ್ ಕೊಟ್ಟಿದ್ದಾರೆ. ಆದರೆ, ಇಲ್ಲಿ ರಶ್ಮಿಕಾ ರಾಣಿ ರೀತಿ ಕಾಣಿಸುತ್ತಿದ್ದಾರೆ. ದುಷ್ಯಂತನ ಶಕುಂತಲೆ ರೀತಿನೇ ಕಾಯುತ್ತಿದ್ದಾರೆ ಅನಿಸುತ್ತದೆ.


ರಶ್ಮಿಕಾ ಮಂದಣ್ಣ ತಮ್ಮ ಈ ಒಂದು ಫೋಟೋ ಶೂಟ್‌ನಲ್ಲಿ ತೇಟ ರಾಣಿ ರೀತಿನೇ ಹೊಳೆಯುತ್ತಿದ್ದಾರೆ. ರಾಣಿ ರೂಪದ ಕಾಸ್ಟೂಮ್ ಧರಿಸಿಕೊಂಡಿದ್ದಾರೆ. ಧರಿಸಿರೋ ಬ್ಲೌಸ್‌ನಲ್ಲಿ ಮುತ್ತುಗಳು ಹೇರಳವಾಗಿಯೇ ಇವೆ. ಹೇರ್‌ ಸ್ಟೈಲ್‌ನಲ್ಲೂ ಮುತ್ತುಗಳ ಮಾಲೆ ಇದೆ. ಇವೆಲ್ಲವೂ ಈ ಬೆಡಗಿಯ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಿವೆ.

Share post:

Subscribe

spot_imgspot_img

Popular

More like this
Related

ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಸಿದರೆ ಬಿಜೆಪಿಗೆ ಜನಾಶೀರ್ವಾದ: ಬೊಮ್ಮಾಯಿ

ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಸಿದರೆ ಬಿಜೆಪಿಗೆ...

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಮತ್ತೊಮ್ಮೆ...

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ ಮಹಿಳೆಯರ...

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್ ಕುಮಾರಸ್ವಾಮಿ

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್...