ತೊಂಡೆಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕಾದ ಅಗಾಧವಾದ ಪೌಷ್ಟಿಕ ಸತ್ವಗಳು ಸೇರಿವೆ. ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಉಂಟಾಗುತ್ತವೆ. ಅತ್ಯುತ್ತಮ ಆರೋಗ್ಯಕಾರಿ ತರಕಾರಿಗಳಲ್ಲಿ ತೊಂಡೆಕಾಯಿ ಕೂಡ ಒಂದು. ಏಕೆಂದರೆ ಇದರಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಹಾಗೆಯೇ ಎ, ಬಿ1, ಸಿ ಜೀವಸತ್ವಗಳು ಮತ್ತು ಕ್ಯಾಲ್ಸಿಯಂ ಕಂಡು ಬರುತ್ತವೆ.
ಸುಸ್ತು ಕಡಿಮೆ ಮಾಡುತ್ತದೆ.
ದೇಹದಲ್ಲಿ ಕಬ್ಬಿಣದಾಂಶ ಕಡಿಮೆ ಆದಾಗ ಸುಸ್ತು ಬೇಗ ಆಗುತ್ತದೆ. ತೊಂಡೆಕಾಯಿಯಲ್ಲಿ ಕಬ್ಬಿಣದಾಂಶ ಸಮೃದ್ಧವಾಗಿದೆ. ಹಾಗಾಗಿ ಫಿಟ್ನೆಸ್ ಬೇಕಾದರೆ ನಿಮ್ಮ ಡಯಟ್ ನಲ್ಲಿ ತೊಂಡೆಕಾಯಿ ಇರಲಿ.
ಸಾಕಷ್ಟು ಫೈಬರ್ ಸಿಗುತ್ತದೆ.
ಫೈಬರ್ ಆಹಾರದಲ್ಲಿದ್ದಾಗ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ತೊಂಡೆಕಾಯಿ ಫೈಬರ್ ನಿಂದಲೂ ಸಮೃದ್ಧ. ಹಾಗಾಗಿ ಹೊಟ್ಟೆ ಸಮಸ್ಯೆ ಬೇಗ ದೂರ ಆಗುತ್ತದೆ.
5. ಹೃದಯದ ಮಿತ್ರ
ತೊಂಡೆಕಾಯಿಯಲ್ಲಿ ಫ್ಲೆವನಾಯ್ಡ್ ಸಿಗುತ್ತದೆ. ಜೊತೆಗೆ ಅಂಟಿ ಆಕ್ಸಿಡೆಂಟ್ ಗುಣಯುಕ್ತವಾಗಿದೆ.. ಇದು ಹೃದಯಕ್ಕೆ ಸುರಕ್ಷೆ ಒದಗಿಸುತ್ತದೆ. ಹಾರ್ಟ್ ಸಮಸ್ಯೆ ಹೆಚ್ಚಿಸುವ ಪ್ರಿರಾಡಿಕಲ್ ಗಳನ್ನು ಕಡಿಮೆ ಮಾಡುತ್ತದೆ.
ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ
ತೊಂಡೆ ಕಾಯಿ ದೇಹದಲ್ಲಿ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಪ್ರಾಚೀನ ಕಾಲದಲ್ಲಿಯೂ ತೊಂಡೆಕಾಯಿ ಬಳಕೆ ಇತ್ತು. ತೊಂಡೆಕಾಯಿಯ ಕಾಂಡ ಮತ್ತು ಎಲೆ ಕೂಡಾ ಔಷಧಿಯ ರೂಪದಲ್ಲಿ ತಿನ್ನಲಾಗುತ್ತದೆ. ಅದು ಕೂಡಾ ಬ್ಲಡ್ ಶುಗರ್ ನಿಯಂತ್ರಣಕ್ಕೆ ದಿವ್ಯೌಷಧ.
ಬೊಜ್ಜು ಕರಗಿಸುತ್ತದೆ.
ಅಮೇರಿಕದ ಒಂದು ಸಂಶೋಧನೆ ಪ್ರಕಾರ ತೊಂಡೆಕಾಯಿ ಬೊಜ್ಜು ಕರಗಿಸುತ್ತದೆ. ದೇಹದ ಮೆಟಬಾಲಿಸಂ ಹೆಚ್ಚಿಸುತ್ತದೆ. ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ.
ತೊಂಡೆಕಾಯಿಯಲ್ಲಿ ಆರೋಗ್ಯ ಪ್ರಯೋಜನಗಳು ಸಾಕಷ್ಟು ಇವೆ..!
Date: