ಇದೇ 6 ರಂದು ರಾಬರ್ಟ್ ಚಿತ್ರ ಮುಹೂರ್ತ ನಿಗದಿಪಡಿಸಲಾಗಿದೆ. ಇದು ದರ್ಶನ್ 53ನೇ ಸಿನಿಮಾವಾಗಲಿದ್ದು ಐದು ದಿನಗಳ ಕಾಲ ಫಸ್ಟ್ ಶೆಡ್ಯೂಲ್ , ಬೆಂಗಳೂರಿನಲ್ಲಿ ನಡೆಯಲಿದೆ. ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿಯೂ ಈ ಚಿತ್ರದ ಚಿತ್ರೀಕರಣ ನಡೆಯಲಿದೆ
ಇನ್ನು ರಾಬರ್ಟ್ ನಲ್ಲಿ ದರ್ಶನ್ ಜೊತೆಗೆ ನಾಯಕಿ ಯಾರಾಗ್ತಾರೆ ಎಂಬ ಕುತೂಹಲವೂ ಇರುತ್ತೆ. ಈಗಾಗಲೇ ‘ರಾಬರ್ಟ್’ ನಾಯಕಿಯ ಕುರಿತಾದ ಅಂತೆ-ಕಂತೆ ಶುರುವಾಗಿದೆ..
ಇನ್ನು ಈ ಚಿತ್ರದಲ್ಲಿ ಮಂಗಳೂರು ಬೆಡಗಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ನಟಿಸುತ್ತಾರೆ ಎಂಬ ಅಂತೆಕಂತೆಗಳು ಶುರುಬಾಗಿದೆ… ಇನ್ನು ಎರಡುವರೆ ದಶಕದಿಂದ ಐಶೂ ಒಂದೂ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ… ತುಂಬಾ ಹಿಂದೆ ಐಶೂ ಕನ್ನಡದಲ್ಲಿ ನಟಿಸುವ ಆಸೆ ಇದೆ ಎಂದು ಇಂಗಿತ ವ್ಯಕ್ತ ಪಡಿಸಿದ್ದರು… ಇನ್ನು ಇವರನ್ನು ಭೇಟಿ ಮಾಡಿಲ್ಲ..
ರಾಬರ್ಟ್ ಚಿತ್ರತಂಡ ಇದೀಗ ‘ ಕನ್ನಡಕ್ಕೆ ಕರೆತರುವ ಎಲ್ಲಾ ಪ್ಲಾನ್ ಮಾಡಿದೆ.. ಇಷ್ಟರಲ್ಲೇ ಚಿತ್ರ ತಂಡ ಐಶ್ವರ್ಯರನ್ನು ಭೇಟಿಯಾಗಿ, ಕಥೆಯನ್ನೂ ಒಪ್ಪಿಸಲಿದೆ. ಕೊಲ್ಕತ್ತಾದಲ್ಲಿ ‘ರಾಬರ್ಟ್’ ಕಥೆ ಸಾಗುವುದರಿಂದ, ಮುಂಬೈ ಬೆಡಗಿಯನ್ನೇ ಈ ಚಿತ್ರಕ್ಕೆ ತರುವ ಆಲೋಚನೆಯಲ್ಲಿದೆ ಚಿತ್ರತಂಡ!!