ಪೈಲ್ವಾನ್ ಚಿತ್ರ ಬಿಡುಗಡೆಯಾದಾಗಿನಿಂದಲೂ ಸಹ ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ ವಾರ್ ಮುಗಿಲು ಮುಟ್ಟಿತ್ತು. ಬಿಡುಗಡೆಯ ದಿನವೇ ಪೈಲ್ವಾನ್ ಸಂಪೂರ್ಣ ಚಿತ್ರ ಪೈರಸಿ ಆಗಿ ವೆಬ್ ಸೈಟ್ ಗಳಲ್ಲಿ ಓಡಾಡತೊಡಗಿತ್ತು. ಫೈಲ್ ಚಿತ್ರ ಪೈರಸಿ ಆದ್ದರಿಂದ ಬೇಸರಕ್ಕೊಳಗಾದ ಚಿತ್ರತಂಡ ಎಲ್ಲೆಲ್ಲಿ ಪೈಲ್ವಾನ್ ಚಿತ್ರದ ಪೈರಸಿ ಅಪ್ ಲೋಡ್ ಆಗಿದೆಯೋ ಆ ಲಿಂಕ್ ಗಳನ್ನೆಲ್ಲ ಕಲೆ ಹಾಕಿ ಸೈಬರ್ ಕ್ರೈಂ ಪೊಲೀಸರಲ್ಲಿ ದೂರನ್ನು ಸಲ್ಲಿಸಿತ್ತು. ಇನ್ನು ಚಿತ್ರತಂಡ ಸಲ್ಲಿಸಿದ ದೂರನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡ ಸೈಬರ್ ಕ್ರೈಂ ಪೊಲೀಸರು ಇದೀಗ ಆರೋಪಿಯನ್ನು ಸೆರೆ ಪಡೆದಿದ್ದಾರೆ.
ಇನ್ನು ಪೈಲ್ವಾನ್ ಚಿತ್ರ ಪೈರಸಿ ಆದಾಗ ಸುದೀಪ್ ಅಭಿಮಾನಿಗಳು ದರ್ಶನ್ ಅಭಿಮಾನಿಗಳು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು ಈ ಆರೋಪದಿಂದ ಸ್ವತಃ ದರ್ಶನ್ ಅವರೇ ನನ್ನ ಅಭಿಮಾನಿಗಳ ತಂಟೆಗೆ ಬರಬೇಡಿ ಎಂದು ಟ್ವೀಟ್ ಕೂಡ ಮಾಡಿದ್ದರು. ಆದರೆ ಇದೀಗ ಆ ರೀತಿಯ ಟ್ವೀಟ್ ಮಾಡಿದ ದರ್ಶನ್ ಅವರು ತಲೆ ತಗ್ಗಿಸುವಂತಹ ಕೆಲಸವನ್ನು ಅವರ ಅಭಿಮಾನಿಯೊಬ್ಬ ಮಾಡಿದ್ದು ನೆಲಮಂಗಲದ ನಿವಾಸಿ ರಾಕೇಶ್ ವಿರಾಟ್ ಎಂಬಾತ ಪೈಲ್ವಾನ್ ಚಿತ್ರದ ಪೈರಸಿ ಲಿಂಕ್ ಗಳನ್ನು ತನ್ನ ಫೇಸ್ ಬುಕ್ ಖಾತೆ ಮೂಲಕ ಹಂಚಿಕೊಳ್ಳುವುದರ ಮೂಲಕ ವಿಕೃತಿ ಮೆರೆದಿದ್ದ.
ಇದೀಗ ದರ್ಶನ್ ಅಭಿಮಾನಿಯ ಪೈಲ್ವಾನ ಚಿತ್ರದ ಪೈರಸಿ ಲಿಂಕ್ ಗಳನ್ನು ಶೇರ್ ಮಾಡಿದ್ದಾನೆ ಎಂದು ಸಾಬೀತಾಗಿದ್ದು ವಶಕ್ಕೆ ಪಡೆದ ನಂತರ ಆತನೇ ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಅಭಿಮಾನಿಗಳನ್ನು ದರ್ಶನ್ ಅವರು ವಹಿಸಿಕೊಂಡಿದ್ದರು ಆದರೆ ಅವರ ಅಭಿಮಾನಿ ಮಾತ್ರ ದರ್ಶನ್ ಅವರ ನಂಬಿಕೆ ಹಾಳು ಮಾಡಿದ್ದು ಪೈರಸಿ ಲಿಂಕ್ ಗಳನ್ನು ಶೇರ್ ಮಾಡಿ ಕನ್ನಡ ಚಿತ್ರವೊಂದನ್ನು ಕೊಲ್ಲುವ ಯತ್ನ ಮಾಡಿದ್ದಾನೆ.