ದರ್ಶನ್ ಸುದೀಪ್ ನಡುವೆ ಮತ್ತೊಮ್ಮೆ ವಾರ್!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಮೊದಲಿಂದಲೂ ಸಹ ಉತ್ತಮ ಸ್ನೇಹಿತರು. ಆದರೆ ಇತ್ತೀಚಿನ ಕೆಲ ದಿನಗಳಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಬೇರೆ ಬೇರೆಯಾಗಿದ್ದಾರೆ. ಸ್ವತಃ ದರ್ಶನ್ ಅವರೇ ಬಹಿರಂಗವಾಗಿ ಸುದೀಪ್ ನನ್ನ ಸ್ನೇಹಿತನಲ್ಲ ಎಂದು ಹೇಳುವ ಮುಖಾಂತರ ಇಬ್ಬರ ನಡುವಿನ ಬಿರುಕನ್ನು ಬಹಿರಂಗಪಡಿಸಿದ್ದರು.

 

ಇನ್ನು ಇದಾದ ಬಳಿಕ ಇಬ್ಬರೂ ಸಹ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರ ಅಭಿಮಾನಿಗಳ ನಡುವೆಯೂ ಸಹ ಪೈಪೋಟಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಆಗಾಗ ನಡೆಯುತ್ತಲೇ ಇರುತ್ತದೆ.  ಇನ್ನು ಅಭಿಮಾನಿಗಳ ಕಾಳಗ ಇದೀಗ ದೊಡ್ಡ ಮಟ್ಟಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿವೆ. ಹೌದು ಇದಕ್ಕೆ ಕಾರಣ ರಾಬರ್ಟ್ ಮತ್ತು ಕೋಟಿಗೊಬ್ಬ 3 ಸಿನಿಮಾಗಳೆರಡು ಒಂದೇ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವುದು.

 

 

ಹೌದು ಏಪ್ರಿಲ್ ತಿಂಗಳಿನಲ್ಲಿ ರಾಬರ್ಟ್ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಘೋಷಣೆಯನ್ನು ಈಗಾಗಲೇ ಚಿತ್ರತಂಡ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕೋಟಿಗೊಬ್ಬ 3 ಸಿನಿಮಾದ ನಿರ್ಮಾಪಕರು ಸಹ ಏಪ್ರಿಲ್ 23 ರಂದು ಬೆಳ್ಳಿತೆರೆಗೆ ಕೋಟಿಗೊಬ್ಬ3 ಅಪ್ಪಳಿಸಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಂದಹಾಗೆ ಎರಡು ಸಿನೆಮಗಳು ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವುದರಿಂದ ಇಬ್ಬರ ಅಭಿಮಾನಿಗಳ ನಡುವೆ ದೊಡ್ಡ ಫ್ಯಾನ್ ವಾರ್ ಆಗುವುದಂತೂ ಪಕ್ಕ.. ಏನೋ ಬಾಕ್ಸಾಫೀಸ್ ನಲ್ಲಿ ದರ್ಶನ್ ಮತ್ತು ಸುದೀಪನ್ ನಡುವೆ ಘರ್ಷಣೆ ಏರ್ಪಡಲಿದ್ದು  ಯಾರು ಗೆಲ್ಲುತ್ತಾರೆ ಎಂಬುದನ್ನ ಕಾದು ನೋಡಬೇಕು.

 

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...