ಈ ನಟನ ಒಂದೇ ಒಂದು ಮಾತಿಗೆ 100% ಚಿತ್ರಮಂದಿರ ತೆರೆಯಲು ಒಪ್ಪಿದ ಸರ್ಕಾರ!

1
49

ಪ್ರಪಂಚದೆಲ್ಲೆಡೆ ಕರೋನವೈರಸ್ ತನ್ನ ಅಬ್ಬರವನ್ನು ಮೆರೆಯುತ್ತಿದೆ. ಭಾರತದಲ್ಲಿ ಚಿತ್ರಮಂದಿರಗಳು ಕರೋನವೈರಸ್ ಅಬ್ಬರದಿಂದಾಗಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಇನ್ನು ವೈರಸ್ ನಿಯಂತ್ರಣಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಮತ್ತೆ ಚಿತ್ರಮಂದಿರಗಳನ್ನು ತೆರೆದ ರಾಜ್ಯ ಸರ್ಕಾರಗಳು ಕೇವಲ ಅರ್ಧದಷ್ಟು ಜನರಿಗೆ ಮಾತ್ರ ಥಿಯೇಟರ್ ಗೆ ಬರಬೇಕು ಎಂಬ ಹೊಸ ನಿಯಮವನ್ನು ಹಾಕಿತು. ಇಂದಿಗೂ ಸಹ ದೇಶದಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಅರ್ಧದಷ್ಟು ಮಾತ್ರ ಜನರಿಗೆ ಅವಕಾಶ ಇದೆ.

 

ಆದರೆ ಒಬ್ಬ ನಟ ಮಾತ್ರ ತನ್ನ ಚಿತ್ರ ಬಿಡುಗಡೆಯಾಗುತ್ತಿರುವ ಕಾರಣಕ್ಕೆ ಇಡಿ ರಾಜ್ಯದಲ್ಲಿರುವ ಎಲ್ಲ ಚಿತ್ರಮಂದಿರಗಳು ಸಂಪೂರ್ಣವಾಗಿ ಭರ್ತಿಯಾಗುವಂತೆ ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಬಳಿ ಮನವಿಯನ್ನ ಮಾಡುತ್ತಾರೆ. ಹೀಗೆ ಮನವಿಯನ್ನ ಮಾಡಿದ್ದು ಬೇರೆ ಯಾರು ಅಲ್ಲ ತಮಿಳಿನ ತಳಪತಿ ವಿಜಯ್. ಹೌದು ಮಾಸ್ಟರ್ ಸಿನಿಮಾ 13ಕ್ಕೆ  ಬಿಡುಗಡೆಯಾಗುತ್ತಿರುವ ಕಾರಣಕ್ಕೆ ಪೂರ್ತಿ ಚಿತ್ರ ಮಂದಿರದಲ್ಲಿ ಅಭಿಮಾನಿಗಳಿಗೆ ಅವಕಾಶ ನೀಡಬೇಕು ಎಂದು ವಿಜಯ್ ಅವರು ರಾಜ್ಯ ಸರ್ಕಾರದ ಬಳಿ ಮನವಿ ಮಾಡಿದರು.

 

 

ಹೀಗೆ ವಿಜಯ್ ಮನವಿ ಮಾಡಿದ ನಂತರ ಕರೋನವೈರಸ್ ಇನ್ನೂ ಸಹ ಇದೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ ಬಿಡಿ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ನಡೆದದ್ದೇ ಬೇರೆ.. ವಿಜಯ್ ಮಾಡಿದ ಒಂದೇ ಒಂದು ಮನವಿಗೆ ತಮಿಳುನಾಡಿನ ರಾಜ್ಯ ಸರ್ಕಾರ ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ಸಹ ತುಂಬು ಪ್ರದರ್ಶನವನ್ನ ನಡೆಸಬಹುದು ಎಂಬ ಘೋಷಣೆಯನ್ನು ಹೊರಡಿಸಿತು.

 

ಇನ್ನು ತಮಿಳುನಾಡಿನ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಜನ ಶಾಕ್ ಆಗಿದ್ದಂತೂ ನಿಜ.. ಇನ್ನೂ ಸಹ ಪ್ರತಿನಿತ್ಯ ಸಾವಿರಾರು ಕರೋನವೈರಸ್ ಪ್ರಕರಣಗಳು ಬರುತ್ತಿದ್ದರೂ ನಟ ವಿಜಯ್ ಮಾತನ್ನು ತಳ್ಳಿಹಾಕದ ಆ ರಾಜ್ಯ ಸರ್ಕಾರ ತುಂಬು ಪ್ರದರ್ಶನ ನಡೆಸಲು ಅನುಮತಿಯನ್ನು ಕೊಟ್ಟಿದ್ದು ನಟ ವಿಜಯ್ ಅವರ ಸ್ಟಾರ್ ಗಿರಿಯನ್ನು ಎತ್ತಿ ಹಿಡಿಯುತ್ತಿದೆ..

 

 

 

1 COMMENT

LEAVE A REPLY

Please enter your comment!
Please enter your name here