ದಾಂಪತ್ಯಕ್ಕೆ ಕಾಲಿಟ್ಟ ಲವ್ ಮಾಕ್ಟೇಲ್ ಜೋಡಿ

Date:

ಬೆಂಗಳೂರು: ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮದುವೆ ಇಂದು (ಫೆ, 14, 2021) ಬೆಳಗ್ಗೆ ನಡೆದಿದೆ. ನಗರದ ಭವ್ಯ ರೆಸಾರ್ಟ್‌ನಲ್ಲಿ ಮದುವೆ ನಡೆದಿದೆ. ‘ಲವ್ ಮಾಕ್ಟೇಲ್’ ಸಿನಿಮಾ ರಿಲೀಸ್ ವೇಳೆ ಈ ಜೋಡಿ ಪ್ರೀತಿ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು.

ಆರು ವರ್ಷಗಳ ಕಾಲ ಪ್ರೀತಿಸಿದ ನಂತರದಲ್ಲಿ ಮಿಲನಾ ಹಾಗೂ ಕೃಷ್ಣ ಮದುವೆ ವಿಚಾರವನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ. ಸ್ಯಾಂಡಲ್‌ವುಡ್‌ನ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವಜೋಡಿಗಳಿಗೆ ಶುಭಾಶಯ ತಿಳಿಸಲಿದ್ದಾರೆ.


ಟೀಂ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಇಂದು ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ದಂಪತಿಯನ್ನು ಭೇಟಿಯಾಗಿದ್ದಾರೆ. ಸ್ಟಾರ್ ದಂಪತಿಗಳ ಅಪರೂಪದ ಭೇಟಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಚಾಹಲ್ ದಂಪತಿ ಸದ್ಯ ಬೆಂಗಳೂರಿನಲ್ಲಿದ್ದು ಯಶ್ ಮತ್ತು ರಾಧಿಕಾ ಅವರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಮದುವೆ ಬಳಿಕ ಚಾಹಲ್ ಪತ್ನಿ ಜೊತೆ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕೆಜಿಎಫ್ ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಯಶ್ ಅವರನ್ನು ಚಾಹಲ್ ಭೇಟಿಯಾಗಿದ್ದಾರೆ.
ಯಶ್ ದಂಪತಿ ಖಾಸಗಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅದಾದ ಬಳಿಕ ಈ ಕ್ರಿಕೆಟ್ ತಾರೆ ಹಾಗೂ ಸಿನಿ ತಾರೆಯರು ಬೇಟಿಯಾಗಿದ್ದಾರೆ. ಯಶ್ ಮತ್ತು ರಾಧಿಕಾ ಜೊತೆ ಚಾಹಲ್ ಮತ್ತು ಧನಶ್ರೀ ಜೋಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋವನ್ನು ಚಹಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಚಹಲ್ ಶೇರ್ ಮಾಡುತ್ತಿದ್ದಂತೆ ಕ್ರಿಕೆಟಿಗ ಹಾಗೂ ನಟ ಇಬ್ಬರ ಅಭಿಮಾನಿಗಳೂ ಪ್ರತಿಕ್ರಿಯಿಸುತ್ತಿದ್ದಾರೆ.
ಟೀಂ ಇಂಡಿಯಾದ ಸ್ಪಿನ್ನರ್ ಚಾಹಲ್ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಮುಗಿಸಿ ತವರಿಗೆ ವಾಪಾಸಾದ ನಂತರ ಡಿಸೆಂಬರ್ ನಲ್ಲಿ ಗೆಳತಿ ಡ್ಯಾನ್ಸರ್ ಧನಶ್ರೀ ವರ್ಮ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗುರುಗ್ರಾಮದ ಕರ್ಮ ಲೇಕ್ ರೆಸಾರ್ಟ್ ನಲ್ಲಿ ಇಬ್ಬರು ಹಿಂದೂ ಸಂಪ್ರದಾಯದಂತೆ ವಿವಾಹ ಬಂಧನಕ್ಕೆ ಒಳಗಾಗಿದ್ದರು.
ಸದ್ಯ ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಖಾಯಂ ಸದಸ್ಯನಾಗಿರುವ ಚಾಹಲ್ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ. ಅದಾದ ಬಳಿಕ ಐಪಿಎಲ್ 2021 ಆವೃತ್ತಿಯೂ ಆರಂಭವಾಗಲಿರುವ ಕಾರಣ ಮುಂದಿನ ದಿನಗಳಲ್ಲಿ ಸಾಕಷ್ಟು ಬ್ಯುಸಿ ಇರಲಿದ್ದಾರೆ. ಆದರೆ ಸದ್ಯ ಟೆಸ್ಟ್ ಸರಣಿ ನಡೆಯುತ್ತಿರುವ ಕಾರಣ ಕುಟುಂಬದ ಜೊತೆಗೆ ಕಾಲ ಕಳೆಯಲು ಉತ್ತಮ ಸಮಯ ದೊರೆತಿದೆ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...