No menu items!
4.6 C
Munich
Friday, April 17, 2026

ಯುವಿ ವಿರುದ್ಧ ಎಫ್​ಐಆರ್​ ದಾಖಲಿಸಿದ ಹರಿಯಾಣ ಪೊಲೀಸ್,

Must read

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ಗೆ ಸಂಕಷ್ಟ ಎದುರಾಗಿದ್ದು, ಹರಿಯಾಣ ಪೊಲೀಸರು ಯುವಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ರೋಹಿತ್​ ಶರ್ಮಾ ಜತೆಗಿನ ಇನ್​ಸ್ಟಾಗ್ರಾಂ ಲೈವ್​ ಚರ್ಚೆಯಲ್ಲಿ ಯುವರಾಜ್​ ಜಾತಿವಾದಿ ಕಾಮೆಂಟ್​ ಮಾಡಿರುವ ಆರೋಪವಿದೆ. ಅಲ್ಲದೆ, ಕ್ಷಮೆಯನ್ನು ಕೇಳಿರುವ ಯುವಿ, ನಾನೆಂದಿಗೂ ಅಸಮಾನತೆಯನ್ನು ನಂಬುವುದಿಲ್ಲ ಎಂದಿದ್ದಾರೆ.

ಉದ್ಧೇಶಪೂರ್ವಕವಲ್ಲದೆ ಒಂದು ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಈ ಹಿಂದೆಯೇ ಯುವಿ ಟ್ವೀಟ್​ ಮಾಡಿದ್ದರು. ಯಾವುದೇ ರೀತಿಯ ಅಸಮಾನತೆಯನ್ನು ನಾನು ನಂಬುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ. ಬಣ್ಣ, ಜಾತಿ, ಧರ್ಮ ಅಥವಾ ಲಿಂಗ ಯಾವುದೇ ಇರಲಿ ತಾರತಮ್ಯ ಮಾಡುವುದಿಲ್ಲ. ಜನರ ಕಲ್ಯಾಣಕ್ಕಾಗಿ ನನ್ನ ಜೀವನವನ್ನು ನಿರಂತರವಾಗಿ ಮುಡಿಪಾಗಿಡುತ್ತೇನೆ ಎಂದಿದ್ರು ಯುವಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article