ದಾಖಲೆಯ ಬೆಲೆಗೆ ಯುವರತ್ನ ಮಾರಾಟ!

Date:

ಬಹುನಿರೀಕ್ಷಿತ ಯುವರತ್ನ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿತ್ತು. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಇದ್ದ ಕಾರಣ ಕುಟುಂಬ ಸಮೇತರಾಗಿ ಬಂದು ವೀಕ್ಷಕರು ಸಿನಿಮಾವನ್ನು ವೀಕ್ಷಿಸುತ್ತಿದ್ದರು. ಎಷ್ಟೋ ಜನ ಇದು ಎಲ್ಲರೂ ನೋಡಬೇಕಾದ ಸಿನಿಮಾ ಇದು ಎರಡನೇ ರಾಜಕುಮಾರ ಆಗುವುದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಸಿನಿಮಾವನ್ನು ಹೊಗಳಿದ್ದರು.

 

ಇಷ್ಟೆಲ್ಲಾ ಪ್ರಶಂಸೆ ಪಡೆದುಕೊಂಡ ಯುವರತ್ನ ಸಿನಿಮಾವನ್ನು ಇದೀಗ ಎಂಟೇ ದಿನಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ತಂಡ ರೆಡಿ ಇದೆ. ಹೌದು ಇಂದು ಮಧ್ಯರಾತ್ರಿಯಿಂದಲೇ ಅಮೆಜಾನ್ ಪ್ರೈಮ್ ನಲ್ಲಿ ಯುವರತ್ನ ಚಿತ್ರ ಪ್ರದರ್ಶನಗೊಳ್ಳಲು ಆರಂಭವಾಗಲಿದೆ. ಬಿಡುಗಡೆಯಾಗಿ ಕೇವಲ ಎಂಟೇ ದಿನಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಯುವರತ್ನ ಚಿತ್ರ ಬಂದಿದ್ದಕ್ಕೆ ಅಭಿಮಾನಿಗಳು ಮತ್ತು ಪ್ರೇಕ್ಷಕವರ್ಗದಲ್ಲಿ ಬೇಜಾರೂ ಇದೆ.

 

 

.ಆದರೆ ವ್ಯವಹಾರದ ದೃಷ್ಟಿಯಿಂದ ನೋಡಿದರೆ ಯುವರತ್ನ ಹೊಸ ದಾಖಲೆಯನ್ನು ಬರೆದಿದೆ. ಹೌದು ಅಮೆಜಾನ್ ಪ್ರೈಮ್ ಗೆ ಹಿಂದೆಂದೂ ಮಾರಾಟವಾಗದ ದೊಡ್ಡ ಮಟ್ಟದ ಬೆಲೆಗೆ ಯುವರತ್ನ ಚಿತ್ರವನ್ನು ಮಾರಾಟ ಮಾಡಲಾಗಿದೆ. ಬರೋಬ್ಬರಿ 23 ಕೋಟಿ ರೂಪಾಯಿಗೆ ಯುವರತ್ನ ಚಿತ್ರವನ್ನು ಅಮೆಜಾನ್ ಪ್ರೈಮ್ ಖರೀದಿಸಿದ್ದು ಇದುವರೆಗೂ ಇಷ್ಟು ದೊಡ್ಡ ಮೊತ್ತಕ್ಕೆ ಯಾವ ಕನ್ನಡ ಚಿತ್ರವನ್ನು ಅಮೆಜಾನ್ ಪ್ರೈಮ್ ಖರೀದಿಸಿರಲಿಲ್ಲ ಹೀಗಾಗಿ ಇದು ಯುವರತ್ನ ಸಿನಿಮಾ ಬರೆದ ಹೊಸ ದಾಖಲೆಯಾಗಿದೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...