No menu items!
15 C
Munich
Sunday, April 19, 2026

ರಾಜ್ಯದಲ್ಲಿ ಮುಂದುವರೆದ ಕೊರೊನಾ ರಣಕೇಕೆ!

Must read

ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಮುಂದುವರಿದ್ದು, ಇಂದು ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಆರು ಸಾವಿರದ ಗಡಿ ದಾಟಿದೆ. ಇಂದು 6,570 ಹೊಸ ಪ್ರಕರಣಗಳು ವರದಿಯಾಗಿದ್ದು, 36 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿಯೂ ಕೊರೊನಾ ಮಹಾಸ್ಫೋಟವಾಗಿದ್ದು, ಒಂದೇ ದಿನ 4,422 ಜನಕ್ಕೆ ಸೋಂಕು ದೃಢವಾಗಿದೆ.

ಸದ್ಯ ರಾಜ್ಯದಲ್ಲಿ 53,395 ಸಕ್ರಿಯ ಪ್ರಕರಣಗಳಿದ್ದು, 357 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ 10,40,130ಕ್ಕೇರಿಕೆಯಾಗಿದ್ದು, ಇದುವರೆಗೂ 12,767 ಜನರನ್ನ ಹೆಮ್ಮಾರಿ ಬಲಿ ಪಡೆದುಕೊಂಡಿದೆ.

2,393 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.6.04 ಮತ್ತು ಮರಣ ಪ್ರಮಾಣ ಶೇ.0.54ಕ್ಕೇರಿಕೆಯಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,08,757 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 21, ಬಳ್ಳಾರಿ 126, ಬೆಳಗಾವಿ 92, ಬೆಂಗಳೂರು ಗ್ರಾಮಾಂತರ 54, ಬೆಂಗಳೂರು ನಗರ 4,422, ಬೀದರ್ 129, ಚಾಮರಾಜನಗರ 56, ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 40, ಚಿತ್ರದುರ್ಗ 24, ದಕ್ಷಿಣ ಕನ್ನಡ 145, ದಾವಣಗೆರೆ 28, ಧಾರವಾಡ 96, ಗದಗ 14, ಹಾಸನ 94, ಹಾವೇರಿ 15, ಕಲಬುರಗಿ 240, ಕೊಡಗು 19, ಕೋಲಾರ 66, ಕೊಪ್ಪಳ 27, ಮಂಡ್ಯ 29, ಮೈಸೂರು 216, ರಾಯಚೂರು 40, ರಾಮನಗರ 10, ಶಿವಮೊಗ್ಗ 70, ತುಮಕೂರು 183, ಉಡುಪಿ 63, ಉತ್ತರ ಕನ್ನಡ 142, ವಿಜಯಪುರ 60 ಮತ್ತು ಯಾದಗಿರಿಯಲ್ಲಿ 26 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article