ದಾಖಲೆ ಮೊತ್ತಕ್ಕೆ ಸೇಲ್ ಆಯ್ತು ಪುಷ್ಪ ಕನ್ನಡ ಟಿವಿ ರೈಟ್ಸ್!

Date:

ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಡಿಸೆಂಬರ್ 17 ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಕಾಣುತ್ತಿದೆ. ಅಭಿಮಾನಿಗಳು ಯಾವಾಗ ಸಮಯ ಆಗುತ್ತೆ, ಯಾವಾಗ ಡಿಸೆಂಬರ್ 17 ಬರುತ್ತೆ, ಯಾವಾಗ ತಮ್ಮ ನೆಚ್ಚಿನ ನಟನ ಸಿನಿಮಾ ನೋಡುತ್ತೇವೆ ಎಂದು ಕಾದು ಕುಳಿತಿದ್ದಾರೆ.

ಪುಷ್ಪ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸಖತ್ ಸೌಂಡ್ ಮಾಡಿಕೊಂಡೇ ಬಂದಿದೆ. ಟೀಸರ್, ಸಾಂಗ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಐದು ಭಾಷೆಗಳಲ್ಲೂ ಈ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗ ಹೊಸ ವಿಷಯ ಏನಪ್ಪಾ ಅಂದರೆ. ಪುಷ್ಪ ಕನ್ನಡ ಸಿನಿಮಾದ ಹಕ್ಕನ್ನು ಸುವರ್ಣ ಪಡೆದುಕೊಂಡಿದೆ.

ಅದು ಈ ಹಿಂದೆ ಎಂದೂ ಕೊಡದ ದಾಖಲೆ ಮೊತ್ತವನ್ನು ನೀಡಿ ಪುಷ್ಪ ಕನ್ನಡ ಸಿನಿಮಾದ ಹಕ್ಕನ್ನು ಪಡೆದುಕೊಂಡಿದೆ.ಇದೆ ಮೊದಲ ಬಾರಿಗೆ ಬೇರೆ ಭಾಷೆಯ ಚಲನಚಿತ್ರದ ಹಕ್ಕನ್ನು ಕನ್ನಡ ಚಾನಲ್‌ ಒಂದು ಇಷ್ಟು ಮೊತ್ತದ ಹಣ ನೀಡಿ ಖರೀದಿ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಅಲ್ಲು ಅರ್ಜುನ್ ಹಾಗೂ ಸೌತ್ ಇಂಡಿಯಾ ಕ್ರಶ್ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

Share post:

Subscribe

spot_imgspot_img

Popular

More like this
Related

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್ ದೇವನಹಳ್ಳಿ:...

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...