No menu items!
8.6 C
Munich
Wednesday, April 15, 2026

ಭಾರತ vs ನ್ಯೂಜಿಲೆಂಡ್‌ ದ್ವಿತೀಯ ಟಿ20 ಅನುಮಾನ!

Must read

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದ ಮೇಲೆ ಕಾರ್ಮೋಡ ಕವಿದಿದೆ.

ನವೆಂಬರ್ 19ರಂದು ಅಂದರೆ ನಾಳೆ ಶುಕ್ರವಾರ ರಾಂಚಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಮುಂದೂಡಬೇಕೆಂಬ ಆಗ್ರಹ ಕೇಳಿಬಂದಿದೆ.

ಪಂದ್ಯವನ್ನು ಮುಂದೂಡುವಂತೆ ಅಥವಾ ಕ್ರೀಡಾಂಗಣದಲ್ಲಿ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕೆಂದು ಕೋರಿ ಜಾರ್ಖಂಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ನಾಳಿನ ಪಂದ್ಯದಲ್ಲಿ ಪ್ರೇಕ್ಷಕರಿಗೆ ಶೇಕಡಾ 100ರಷ್ಟು ಸೀಟುಗಳ ಭರ್ತಿಗೆ ವಿರೋಧಿಸಿ ವಕೀಲ ಧೀರಜ್ ಕುಮಾರ್ ಜಾರ್ಖಂಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯದ ದೇವಾಲಯಗಳು, ನ್ಯಾಯಾಲಯಗಳು ಮತ್ತು ಇತರ ಕಚೇರಿಗಳಲ್ಲಿ ಕರೊನಾದಿಂದಾಗಿ ಶೇಕಡಾ 50ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ನಿಯಮದ ಅಡಿಯಲ್ಲಿ ರಾಜ್ಯ ಸರ್ಕಾರವು ಶೇ.100 ರಷ್ಟು ಬಳಸಲು ಅನುಮತಿ ನೀಡಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ವಕೀಲರು, ನಾಳಿನ ಪಂದ್ಯವನ್ನು ಅಮಾನತುಗೊಳಿಸಬೇಕು. ಅಥವಾ ಕ್ರೀಡಾಂಗಣವನ್ನು ಶೇಕಡಾ 100 ರಷ್ಟು ಸಾಮರ್ಥ್ಯದಲ್ಲಿ ಬಳಸುವುದನ್ನು ನಿಷೇಧಿಸಬೇಕು ಎಂದು ಕೋರಿದ್ದಾರೆ.

2 ದಿನಗಳ ಹಿಂದೆ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಕ್ರಿಕೆಟ್ ಪಂದ್ಯಕ್ಕಾಗಿ ಸ್ಟೇಡಿಯಂನ ಶೇಕಡಾ 50 ರಷ್ಟು ಸೀಟುಗಳನ್ನು ಮಾತ್ರ ಕಾಯ್ದಿರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು, ಆದರೆ ನಂತರ ಈ ನಿರ್ಧಾರವನ್ನು ಹಿಂಪಡೆದು ಸದ್ಯ ಆಯೋಜಕರಿಗೆ ಎಲ್ಲಾ ಆಸನಗಳನ್ನು ಒದಗಿಸಿರುವುದನ್ನು ವಿರೋಧಿಸಲಾಗುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article