ದಿನಕ್ಕೆ ಮೊಬೈಲ್ ಫೋನ್ ಎಷ್ಟು ಬಾರಿ ಚಾರ್ಜ್ ಮಾಡಬೇಕು?: ನೀವೂ ಈ ತಪ್ಪು ಮಾಡಲೇಬೇಡಿ

Date:

ದಿನಕ್ಕೆ ಮೊಬೈಲ್ ಫೋನ್ ಎಷ್ಟು ಬಾರಿ ಚಾರ್ಜ್ ಮಾಡಬೇಕು?: ನೀವೂ ಈ ತಪ್ಪು ಮಾಡಲೇಬೇಡಿ

ಸಾಮಾನ್ಯವಾಗಿ ನಾವು ನಾವು ಹೊಸ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ, ಆದರೆ ಫೋನ್ ಸ್ವಲ್ಪ ಹಳೆಯದಾಗಲು ಪ್ರಾರಂಭಿಸಿದಾಗ ಅದನ್ನು ಬೇಕಾಬಿಟ್ಟಿ ಉಪಯೋಗಿಸಿ ಅದರ ಕಾಳಜಿಯನ್ನು ಮರೆತುಬಿಡುತ್ತೇವೆ. ಇದರಲ್ಲಿ ಮುಖ್ಯವಾಗಿ ಚಾರ್ಜ್ ಮಾಡುವುದು. ಜನರು ಸಾಮಾನ್ಯವಾಗಿ ಕಡಿಮೆ ಬ್ಯಾಟರಿ ಇದ್ದಾಗ ಫೋನ್ ಅನ್ನು ಚಾರ್ಜ್ ಮಾಡಲು ಮುಂದಾಗುತ್ತಾರೆ. ಹಾಗಾದರೆ ಫೋನ್ ಅನ್ನು ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡಬೇಕು?.

ಫೋನ್ ವಿಚಾರದಲ್ಲಿ ಅನೇಕರು ಹಲವು ರೀತಿಯ ತಪ್ಪುಗಳನ್ನು ಮಾಡುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು ಚಾರ್ಜ್ ಮಾಡುವುದು. ಒಂದು ದಿನದಲ್ಲಿ ಎಷ್ಟು ಬಾರಿ ಚಾರ್ಜ್ ಮಾಡಬೇಕು? ಎಷ್ಟು ಪರ್ಸೆಂಟೇಜ್ ಚಾರ್ಜ್ ಮಾಡಬೇಕೆಂದು ಅನೇಕರಿಗೆ ತಿಳಿದಿಲ್ಲ

ಫೋನ್ ಚಾರ್ಜ್ ಮಾಡುವಾಗ ಕೆಲವೊಂದು ಟಿಪ್ಸ್ ಪಾಲಿಸಿದರೆ ಬ್ಯಾಟರಿ ಹಾಳಾಗುವುದಿಲ್ಲ ಮತ್ತು ಫೋನ್ ಹೆಚ್ಚು ಕಾಲ ಕೆಲಸ ಮಾಡುತ್ತದೆ. ಜೊತೆಗೆ ಎಷ್ಟು ವರ್ಷವಾದ್ರೂ ಮೊಬೈಲ್ ಹಾಳಾಗುವುದಿಲ್ಲ.

ಅನೇಕ ಜನರು ಮೊಬೈಲ್ ಚಾರ್ಜ್ ಕಂಪ್ಲೀಟ್ ಖಾಲಿ ಆಗುವವರೆಗೆ ಮೊಬೈಲ್ ಯೂಸ್ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು 5 ಪರ್ಸೆಂಟ್ ಇರುವವರೆಗೆ ಮೊಬೈಲ್ ಬಳಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಫೋನಿನ ಬ್ಯಾಟರಿ ಬೇಗ ಹಾಳಾಗುತ್ತದೆ.

ಇನ್ನು 100 ಪರ್ಸೆಂಟ್ವರೆಗೂ ಮೊಬೈಲ್ ಚಾರ್ಜ್ ಆದ್ರೂ ಜನ ಇನ್ನೂ ಮೊಬೈಲನ್ನು ಚಾರ್ಜ್ನಲ್ಲೇ ಇಟ್ಟಿರುತ್ತಾರೆ. ಆದರೆ ಈ ರೀತಿ ಚಾರ್ಜ್ ಇಟ್ಟರೆ ಮತ್ತು ಪದೇ ಪದೇ ಚಾರ್ಜ್ ಮಾಡುತ್ತಿದ್ದರೆ ಫೋನ್ ಬ್ಯಾಟರಿ ಹಾಳಾಗುತ್ತದೆ. ಹಾಗಿದ್ರೆ ಫೋನನ್ನು ದಿನದಲ್ಲಿ ಎಷ್ಟು ಬಾರಿ ಚಾರ್ಜ್ ಮಾಡ್ಬೇಕು ಗೊತ್ತಾ?

ಮೊಬೈಲ್ ಚಾರ್ಜ್ 20 ಪರ್ಸೆಂಟ್ಗಿಂತ ಕಡಿಮೆಯಾದ ನಂತರ ಮೊಬೈಲ್ ಯೂಸ್ ಮಾಡಲು ಹೋಗ್ಬೇಡಿ. ಇದರಿಂದ ಬ್ಯಾಟರಿ ಮೇಲೆ ಒತ್ತಡ ಜಾಸ್ತಿಯಾಗುತ್ತದೆ. ಮೊಬೈಲ್ ಚಾರ್ಜ್ 20 ಪರ್ಸೆಂಟ್ಗಿಂದ ಇಳಿದ ತಕ್ಷಣ ಚಾರ್ಜ್ಗೆ ಇಡಿ.

ಫೋನ್ ಬ್ಯಾಟರಿಯನ್ನು ಶೇಕಡಾ 80 ರಿಂದ 90 ರಷ್ಟು ಚಾರ್ಜ್ ಮಾಡಬೇಕು. ಒಂದು ವೇಳೆ 100 ಪರ್ಸೆಂಟ್ನಷ್ಟು ಚಾರ್ಜ್ ಮಾಡಿದ್ರೆ ಬ್ಯಾಟರಿ ಮೇಲಿನ ಒತ್ತಡ ಜಾಸ್ತಿಯಾಗುತ್ತದೆ

ಫೋನ್ ಚಾರ್ಜಿಂಗ್ ವಿಚಾರದಲ್ಲಿ 20-80 ನಿಯಮವನ್ನು ಫಾಲೋ ಮಾಡಿ ಎಂದು ಹಲವು ಟೆಕ್ ತಜ್ಞರು ಹೇಳುತ್ತಾರೆ. ಇದರರ್ಥ 20 ಪರ್ಸೆಂಟ್ಗೆ ಚಾರ್ಜ್ ಇಳಿದಾಗ ಚಾರ್ಜ್ ಮಾಡ್ಬೇಕು ಮತ್ತು 80 ಪರ್ಸೆಂಟ್ ಚಾರ್ಜ್ ಆದಾಗ ಚಾರ್ಜ್ ತೆಗಿಬೇಕು ಎಂದರ್ಥ.

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...