No menu items!
5.3 C
Munich
Wednesday, September 23, 2026

ಇಂದು ಕೋರ್ಟ್‌ʼಗೆ ಹಾಜರಾಗಲಿರುವ ಡಿ ಗ್ಯಾಂಗ್: ದರ್ಶನ್ ಮತ್ತು ಪವಿತ್ರಾಗೌಡ ಮುಖಾಮುಖಿ!?

Must read

ಇಂದು ಕೋರ್ಟ್‌ʼಗೆ ಹಾಜರಾಗಲಿರುವ ಡಿ ಗ್ಯಾಂಗ್: ದರ್ಶನ್ ಮತ್ತು ಪವಿತ್ರಾಗೌಡ ಮುಖಾಮುಖಿ!?

ಬೆಂಗಳೂರು: ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿ ಇಂದು ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಮುಖಾಮುಖಿಯಾಗುತ್ತಾರಾ? ಎನ್ನುವ ಅನುಮಾನವಿದೆ.ಯಾಕಂದ್ರೆ ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಲ್ಲಾ ಆರೋಪಿಗಳು ಕೋರ್ಟ್ ಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ 17 ಆರೋಪಿಗಳ ವಿಚಾರಣೆ ನಡೆಯಲಿದೆ. ಜಡ್ಜ್ ಎದುರು ಆರೋಪಿಗಳು ತಮ್ಮ ಹೇಳಿಕೆ ನೀಡಲಿದ್ದಾರೆ. ಜಾಮೀನು ನೀಡುವಾಗ ಆರೋಪಿಗಳಿಗೆ ಹೈಕೋರ್ಟ್ ಷರತ್ತು ವಿಧಿಸಿತ್ತು.
ಪ್ರತಿ ತಿಂಗಳು ವಿಚಾರಣೆಗೆ ಹಾಜರಾಗಬೇಕು ಎಂದು ಆರೋಪಿಗಳಿಗೆ ಸೂಚಿಸಿತ್ತು. ಹೀಗಾಗಿ ಬೆಳಿಗ್ಗೆ 11 ಗಂಟೆಗೆ ನಡೆಯುವ ವಿಚಾರಣೆಯಲ್ಲಿ ಆರೋಪಿಗಳು ಹಾಜರಿ ಹಾಕಲಿದ್ದಾರೆ. ಕೋರ್ಟ್ ಗೆ ಹಾಜರು ಆಗುವಾಗ ಇಂದೇ ದರ್ಶನ್ ಮತ್ತು ಪವಿತ್ರಾಗೌಡ ಮುಖಾಮುಖಿಯಾಗುವ ಸಾಧ್ಯತೆ ಕೂಡಾ ಇದೆ ಎನ್ನಲಾಗಿದೆ.
ಕೆಲವೊಮ್ಮೆ ಆರೋಪಿಗಳು ಕೋರ್ಟ್ಗೆ ಹಾಜರಾಗಲು ಸಾಧ್ಯ ಆಗದೆ ಇರಬಹುದು. ಈ ವೇಳೆ ಎಲ್ಲಾ ಆರೋಪಿಗಳು ಸೂಕ್ತ ಕಾರಣ ನೀಡಿ ವಿನಾಯಿತಿ ಪಡೆಯಬೇಕು. ಇಲ್ಲದಿದ್ದರೆ ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

- Advertisement -spot_img

More articles

- Advertisement -spot_img

Latest article