ಪಾನಿಪೂರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡನ ಮೇಲಿನ ಹಲ್ಲೆ ಪ್ರಕರಣ ದುನಿಯಾ ವಿಜಿಗೆ ಜೈಲಿನ ದರ್ಶನ ಮಾಡಿಸಿತ್ತು. ಕೊನೆಗೆ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು, 1 ಲಕ್ಷ ರುಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದ್ದಾರೆ. ಅಲ್ಲದೆ ತನಿಖೆಗೆ ಸಹಕರಿಸುವಂತೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಸದ್ಯ ದುನಿಯಾ ವಿಜಯ್ ನಿರಾಳ. ಆದ್ರೆ ಮುಂದೇನ್ ಮಾಡ್ತಾರೆ..?
ವಿಜಯ್ ಸುಖಾಸುಮ್ನೇ ಏನೋ ಮಾಡೋಕೆ ಹೋಗಿ ಇನ್ನೇನೋ ಮಾಡಿಕೊಂಡಿದ್ರು. ನಿಜ ಹೇಳಬೇಕು ಅಂದ್ರೆ, ವಿಜಯ್ ಸಿಕ್ಕಾಪಟ್ಟೆ ಬ್ಯುಸಿ ಶೆಡ್ಯೂಲ್ನಲ್ಲಿದ್ದವರು. ಅವರ ಅಪ್ಕಮಿಂಗ್ ಕುಸ್ತಿ ಸಿನಿಮಾ ಶೂಟಿಂಗ್ ನಡೀತಾ ಇತ್ತು. ಕೋಬ್ರಾ ಚಿತ್ರದ ಕಥೆ ರೆಡಿ ಆಗ್ತಾ ಇದೆ. ಇದರ ಜೊತೆಗೆ ಮೊದಲ ಪತ್ನಿ ನಾಗರತ್ನ ಹಾಗೂ ಇತ್ತೀಚೆಗಷ್ಟೇ ವಿವಾಹವಾದ ಕೀರ್ತಿಯ ಜಡೆ ಜಗಳವೂ ಜೋರಾಗಿದೆ. ಇದೆಲ್ಲದರ ಜೊತೆಗೆ ಮಾರುತಿ ಗೌಡನ ಮೇಲಿನ ಹಲ್ಲೆ ಪ್ರಕರಣ ಸೇರ್ಪಡೆಯಾಗಿದೆ.
ಹೀಗಿರುವಾಗ ದುನಿಯಾ ವಿಜಯ್ ತಮ್ಮ ಚಿತ್ರಗಳ ಬಗ್ಗೆ ಗಮನ ಹರಿಸುತ್ತಾರೋ..? ಪತ್ನಿಯರ ಗಲಾಟೆ ಬಗೆಹರಿಸುತ್ತಾರೋ..? ಅಥವಾ ಪಾನಿಪುರಿ ಕಿಟ್ಟಿ ಜೊತೆಗಿನ ಗಲಾಟೆಯನ್ನ ಬಗೆಹರಿಸಿಕೊಳ್ತಾರೋ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.