ದೇವರಿಗೆ ಪ್ರಿಯವಾದ ತುಳಸಿಯ ಮಹತ್ವವೇನು..? ತುಳಸಿಯ ಬೆಳೆಸಿದರೆ ಪಾಲಿಸಬೇಕಾದ ನಿಯಮಗಳೇನು..?

0
622

ತುಳಸಿ ಅಂದ್ರೆ ಸಾಕ್ಷಾತ್ ಮಹಾಲಕ್ಷ್ಮೀ ದೇವಿಯ ಸ್ವರೂಪ.‌ ಯಾವ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆದಿರತ್ತೋ ಅಂಥ ಮನೆಯಲ್ಲೂ ಕೂಡ ಸುಖ ಸಮೃದ್ಧಿಯೂ ನೆಲೆಸಿರುತ್ತದೆ.‌ ನಿತ್ಯವೂ ತುಳಸಿಯ ಪೂಜೆ ಮಾಡಿದರೆ‌ ಶುಭಫಲ ದೊರೆಯುವುದು. ‌

ಹೌದು, ನಮ್ಮಲ್ಲಿ ತುಳಸಿಗೆ ದೇವಿ ಸ್ಥಾನ ನೀಡಲಾಗಿದೆ. ತುಳಸಿಯ ಇನ್ನೊಂದು ಹೆಸರೇ ವೃಂದ.‌ ಎಲ್ಲಿ ತುಳಸಿಗಿಡಗಳು ಅಧಿಕವಾಗಿ ಬೆಳೆದಿರುತ್ತವೋ ಆ ಪ್ರದೇಶ ವೃಂದಾವನದಂತಿರುತ್ತೆ ಅನ್ನೋದು ನಮ್ಮ ನಂಬಿಕೆ.

ಇನ್ನೂ ಶ್ರೀ ವಿಷ್ಣು ತುಳಸಿಪ್ರಿಯ.‌ಹೀಗಾಗಿ‌ ನಾರಾಯಣನಿಗೆ ಭಕ್ತಿಯಿಂದ ‌ಒಂದು ತುಳಸಿ ಎಲೆ‌ಯನ್ನು ಅರ್ಪಿಸಿದರೆ ಒಲಿಯುತ್ತಾರೆ. ತುಳಸಿಯ ಕಡ್ಡಿಯಿಂದ ಮಾಡಿದ ಸರ ವನ್ನು ವಿಷ್ಣು ದೇವರಿಗೆ ಅರ್ಪಿಸಿ ಪೂಜೆ ಮಾಡಿದ ನಂತರ ಧರಿಸಿದರೆ ಒಳ್ಳೆಯದು ಎಂಬ ನಂಬಿಕೆ ‌ಇದೆ.

ದಿನ ಸಾಯಂಕಾಲ ತುಳಸಿ ಗಿಡಕ್ಕೆ ಪೂಜೆ ಮಾಡಿ ತುಪ್ಪ ದೀಪ ಹಚ್ಚಿಡಬೇಕು. ಇದರಿಂದ ದಾಂಪತ್ಯ ಸುಖದ ಪ್ರಾಪ್ತಿಯಾಗುತ್ತದೆ. ಹಾಗೆ ಮಂಗಳವಾರ ಸಿಂಧೂರವನ್ನು ಅರ್ಪಿಸಬೇಕು.

ತುಳಸಿಯ ಎಲೆಯನ್ನು ಆಹಾರದಲ್ಲಿ ಹಾಕಿದರೆ ಆಹಾರ ಸಂಪೂರ್ಣವಾಗುತ್ತದೆ ಅಂತಹ ಆಹಾರ ದೇವರಿಗೆ ಪ್ರಸಾದವಾಗುತ್ತದೆ.

ಶನಿ ದೇವರ ಪೂಜೆ ಮಾಡುವಾಗ ತುಳಸಿಯನ್ನು ಅರ್ಪಿಸಿ “ಓಂ ಶಂ ಶನೇಶ್ವರಾಯ ನಮಃ”ಎಂದು 108 ಬಾರಿ ಜಪಿಸಿ ಪೂಜೆ ಮಾಡಿದರೆ ಒಳಿತು. ಇನ್ನೂ ಆಂಜನೇಯ ‌ಸ್ವಾಮಿ ಗೂ ತುಳಸಿ‌‌‌ ಎಂದರೆ ಪ್ರಿಯವಾಗಿದ್ದು, ಪ್ರತಿ ‌ಮಂಗಳವಾರ ಮತ್ತು ಶನಿವಾರ ವಾಯುಪುತ್ರನಿಗೆ ತುಳಸಿ ಅರ್ಪಿಸಿದರೆ ಶುಭ.ಬೆಳ್ಳಗೆ ಸ್ನಾನ ಮಾಡಿದ ನಂತರ ಹೂ, ಗಂಧ,ಬಟ್ಟೆ, ಇವೆಲ್ಲವನ್ನು ಅರ್ಪಿಸಿ ಸೂರ್ಯೋದಯಕ್ಕೆ ಮುಂಚೆ ಪೂಜೆ ಮಾಡಬೇಕು. ಹೇಗೆ ಪ್ರತಿದಿನ ಪೂಜೆ ಸಲ್ಲಿಸಿದರೆ ದಾಂಪತ್ಯ ದೋಷ ಅಂದರೆ ಮನೆಯಲ್ಲಿ ಗಂಡ ಹೆಂಡತಿ ಜಗಳ ದೂರವಾಗುತ್ತದೆ.

ತುಳಸಿಯ ಗಿಡವನ್ನು ಬೆಳೆಸಿ ಪೂಜೆ ಮಾಡಿದರೆ ಬುಧ ಗ್ರಹದ ದೋಷ ನಿವಾರಣೆಯಾಗುತ್ತದೆ. ತುಳಸಿ ಗಿಡಕ್ಕೆ ತುಪ್ಪದ ದೀಪ ಹಚ್ಚಿಡಬೇಕು ಇದರಿಂದ ನಮ್ಮ ಕಷ್ಟಗಳು ಪರಿಹಾರವಾಗಿ ನಾವು ಮನಸ್ಸಿ‌ನಲ್ಲಿ ಅಂದುಕೊಂಡದ್ದು ನೆರವೇರುತ್ತದೆ.

ಇನ್ನೂ ತುಳಸಿಯನ್ನು ಮನೆಯಲ್ಲಿ ಇಡುವವರು ಒಂದಷ್ಟು ನಿಯಮಗಳನ್ನು ಪಾಲಿಸಬೇಕು.

ಮುಟ್ಟಿನ ದಿನಗಳಲ್ಲಿ ತುಳಸಿ ಗಿಡವನ್ನ ಮುಟ್ಟಬಾರದು. ಅಲ್ಲದೇ ಬೇರೆಯವರ ಮನೆಯಲ್ಲಿ ಸೂತಕವಿದ್ದಾಗ ಅಲ್ಲಿ ಹೋಗಿ ಬಂದು ತುಳಸಿ ಗಿಡವನ್ನು ಮುಟ್ಟಬಾರದು. ನಿಮ್ಮ ಮನೆಯಲ್ಲಿ ಸೂತಕವಿದ್ದರೂ ಕೂಡ ಈ ನಿಯಮ ಪಾಲಿಸಬೇಕು. ಮತ್ತು ತುಳಸಿ ಗಿಡದ ಬಳಿ ಕಾಲು ತೊಳೆಯಬಾರದು.

ಮತ್ತು ಪ್ರತಿದಿನ ಸ್ನಾನವಾದ ಬಳಿಕವೇ ತುಳಸಿ ಗಿಡವನ್ನು ಮುಟ್ಟಬೇಕು. ಅಲ್ಲದೇ ಸ್ನಾನ ಮಾಡಿ ಒಂದು ತಂಬಿಗೆ ತುಂಬ ನೀರು ಹಾಕಿ ಅದರಲ್ಲಿ ಚಿಟಿಕೆ ಅರಿಷಿನ ಹಾಕಿ ಆ ನೀರನ್ನು ತುಳಸಿ ಗಿಡಕ್ಕೆ ಹಾಕಬೇಕು. ಇನ್ನು ತುಳಸಿ ಗಿಡ ನೆಟ್ಟ ಆವರಣವನ್ನ ಸ್ವಚ್ಛವಾಗಿ ಇಡಬೇಕು. ಇದರಿಂದ ನಿಮಗೆ ನೆಮ್ಮದಿ ಮನಶಾಂತಿ ಸಿಗುತ್ತದೆ.

ತುಳಸಿಗಿಡವನ್ನು ಪೂರ್ವ ಭಾಗದಲ್ಲಿಟ್ರೆ ಆ ಮನೆಯ ಮಹಿಳೆ ಸುಮಂಗಲಿಯಾಗಿರುತ್ತಾಳೆ. ಆಕೆಯ ಪತಿಯ ಆರೋಗ್ಯ ಅಭಿವೃದ್ಧಿಯಾಗುತ್ತದೆ. ತುಳಸಿ ಗಿಡವನ್ನ ಪಶ್ಚಿಮ ದಿಕ್ಕಿನಲ್ಲಿ ನೆಟ್ಟರೆ ಮನೆಯಲ್ಲಿ ಧನ ಧಾನ್ಯ ಹೆಚ್ಚುತ್ತೆ. ಉತ್ತರ ದಿಕ್ಕಿನಲ್ಲಿ ಇಟ್ಟರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ತುಳಸಿ ನೆಡಬಾರದು. ಇನ್ನೂ ಶ್ರಾವಣ ಮಾಸದಲ್ಲಿ ತುಳಸಿ ಗಿಡವನ್ನು ನೆಡವುದರಿಂದ ಶುಭ ಉಂಟಾಗುತ್ತದೆ. ವಾಸ್ತು ಪ್ರಕಾರ ತುಳಸಿ ಗಿಡವನ್ನು ಉತ್ತರ ದಿಕ್ಕಿನಲ್ಲಿ ನೆಡುವುದು ಒಳ್ಳೆಯದು.

ಇದು ಮನೆಯನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಮಾಡುತ್ತದೆ. ತುಳಸಿ ಗಿಡದ ಅಕ್ಕ ಪಕ್ಕ ಬಾಳೆ ಗಿಡ ನೆಟ್ಟರೆ, ಮತ್ತಷ್ಟು ಒಳ್ಳೆಯದು ಎಂಬ ನಂಬಿಕೆಯಿದೆ. ಇದರಿಂದ ಸಂಪತ್ತು, ಧಾನ್ಯ ವೃದ್ಧಿಯಾಗುವುದು. ತುಳಸಿ ಗಿಡ ಮನೆ ಮುಂದೆ ಇದ್ದರೆ ಶುಭ ಉಂಟಾಗುತ್ತದೆ.

LEAVE A REPLY

Please enter your comment!
Please enter your name here