ದ್ರಾಕ್ಷಿ ರಸವನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.!
ರಸಭರಿತವಾದ ದ್ರಾಕ್ಷಿಹಣ್ಣು ಯಾರಿಗೆ ಇಷ್ಟವಿಲ್ಲವೇಳಿ? ದ್ರಾಕ್ಷಿ ಹಣ್ಣಿನಿಂದ ತಯಾರಿಸಿದ ಜ್ಯೂಸ್ ನಿಮ್ಮ ಚರ್ಮಕ್ಕೆ ಅದ್ಭುತವನ್ನು ಮಾಡುತ್ತದೆ. ನಾವೆಲ್ಲರೂ ಹಸಿರು, ಕಪ್ಪು ಮತ್ತು ಕೆಂಪು ದ್ರಾಕ್ಷಿಯನ್ನು ನೋಡಿದ್ದೇವೆ. ನಿಮ್ಮ ದೈನಂದಿನ ಊಟದಲ್ಲಿ ದ್ರಾಕ್ಷಿಯನ್ನು ಅನೇಕ ವಿಧಗಳಲ್ಲಿ ಸೇರಿಸಬಹುದು. ಇದು ದೇಹಕ್ಕೆ ತುಂಬಾ ಒಳ್ಳೆಯದು. ದ್ರಾಕ್ಷಿ ಹಣ್ಣನ್ನು ಹಾಗೆ ತಿಂದರೆ ಅದರಲ್ಲಿನ ನಾರಿನಾಂಶಗಳು ನಮಗೆ ಸಿಗುತ್ತದೆ. ಆದರೆ ಜ್ಯೂಸ್‌ನಲ್ಲಿ ಇದು ಲಭ್ಯವಾಗುವುದಿಲ್ಲ. ಆದರೆ ಜ್ಯೂಸ್‌ನಿಂದ ಸಿಗುವ ಇತರ ಲಾಭಗಳು ಏನು ಎಂದು ಇಲ್ಲಿ ತಿಳಿದುಕೊಳ್ಳುವ.
ದ್ರಾಕ್ಷಿಯಲ್ಲಿ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುವ ಕಿಣ್ವಗಳಿವೆ. ದ್ರಾಕ್ಷಿಯ ಜ್ಯೂಸ್ ಸೇವಿಸುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೂಕ ಇಳಿಕೆಗೆ ದ್ರಾಕ್ಷಿ ಜ್ಯೂಸ್ ಕುಡಿಯುವುದು ತುಂಬಾ ಸಹಕಾರಿ.
ದ್ರಾಕ್ಷಿ ಜ್ಯೂಸ್ ಸೇವಿಸುವುದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಅನೇಕ ಜನರು ಕೂದಲು ಬೆಳವಣಿಗೆಯ ಸಮಸ್ಯೆಗಳನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಅನುಭವಿಸುತ್ತಾರೆ. ನಿತ್ಯವೂ ದ್ರಾಕ್ಷಿಯ ಜ್ಯೂಸ್ ಕುಡಿದರೆ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ.
ಒಂದು ನಿರ್ದಿಷ್ಟ ವಯಸ್ಸಿನ ನಂತರ ಮಹಿಳೆಯರ ಮೂಳೆ ಶಕ್ತಿ ಕಡಿಮೆಯಾಗುತ್ತದೆ. ಈ ಸಮಸ್ಯೆ ಪುರುಷರನ್ನೂ ಬಾಧಿಸುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಲು ದ್ರಾಕ್ಷಿ ಜ್ಯೂಸ್ ಕುಡಿಯಬೇಕು.
ದ್ರಾಕ್ಷಿ ಜ್ಯೂಸ್ ಉತ್ತಮ ನಿದ್ರೆಗೆ ಸಹಕಾರಿ. ನಿಯಮಿತವಾಗಿ ದ್ರಾಕ್ಷಿ ರಸವನ್ನು ಕುಡಿಯುವುದು ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ.
ಕೆಂಪು ಅಥವಾ ನೀಲಿ ದ್ರಾಕ್ಷಿ ಹಣ್ಣುಗಳ ರಸ ವೈನ್ ನೀಡುವಷ್ಟೇ ಹೃದಯ ಸಂಬಂಧಿ ತೊಂದರೆಗಳಿಗೆ ಲಾಭವನ್ನು ನೀಡುತ್ತವೆ. ಈ ಹಣ್ಣಿನ ಜ್ಯೂಸ್ ಗಳು ರಕ್ತ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವುದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ನಿಮ್ಮ ಹೃದಯದಲ್ಲಿರುವ ರಕ್ತನಾಳಗಳು ಘಾಸಿಗೊಳ್ಳದಂತೆ ಕಾಪಾಡುವುದು, ಉತ್ತಮವಾದ ರಕ್ತದೊತ್ತಡವನ್ನು ಕಾಪಾಡುವುದು ಹೀಗೆ ಹಲವಾರು ರೀತಿಯ ಉಪಯೋಗಗಳನ್ನು ನೀಡುತ್ತವೆ.
ಕೇವಲ ಚರ್ಮಕ್ಕೆ ಅಷ್ಟೇ ಅಲ್ಲದೆ ಕೂದಲಿಗೂ ಸಹ ಹಲವಾರು ಉಪಯೋಗಗಳಿವೆ. ಕೂದಲು ಉದುರುವುದನ್ನು ಕಡಿಮೆ ಮಾಡುವುದರಿಂದ ಹಿಡಿದು ಕೂದಲಿನ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸಿ ಕಪ್ಪನೆ, ಸೊಂಪಾಗಿ ಬೆಳೆಯುವಂತೆ ಸಹಾಯಮಾಡುತ್ತದೆ. ಕೂದಲಿನ ಸಾಮಾನ್ಯ ಸಮಸ್ಯೆಯಾದ ಹೊಟ್ಟನ್ನು ಕೂಡ ಇದು ನಿವಾರಿಸಬಲ್ಲದು.






