ಧೋನಿ ನಾಯಕತ್ವವನ್ನ ರೋಹಿತ್ ಮಣಿಸಿದ್ದು ಹೇಗೆ ಗೊತ್ತಾ..?

Date:

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2019ರ ಐಪಿಎಲ್ ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಹೈದರಾಬಾದ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು 1 ರನ್‌ನಿಂದ ಮಣಿಸಿ ಮುಂಬೈ ಇಂಡಿಯನ್ಸ್ 4ನೇ ಬಾರಿಗೆ ಟ್ರೋಫಿಗೆ ಎತ್ತಿ ಹಿಡಿದಿದೆ.

ಟಾಸ್ ಸೋತು ಬ್ಯಾಟಿಂಗ್‌ ಮಾಡಿ ಮುಂಬೈ ಇಂಡಿಯನ್ಸ್ ನೀಡಿದ 149 ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ಪರ ಬ್ಯಾಟಿಂಗ್ ಆರ್ಭಟ ನಡೆಸಿದ ಶೇನ್ ವ್ಯಾಟ್ಸನ್ 80 ರನ್ ಬಾರಿಸಿ ತಂಡದ ಗೆಲುವಿನ ಹೀರೋ ಎನಿಸುವುದರಲ್ಲಿದ್ದರು ಅಂತಿಮ ಓವರ್‌ನಲ್ಲಂತೂ ಪಂದ್ಯ ರೋಚಕ ಘಟ್ಟವನ್ನು ತಲುಪಿತ್ತು. ಕೊನೆಯ ಎಸೆತಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್ ಗೆಲುವಿಗೆ 2 ರನ್‌ಗಳ ಅಗತ್ಯವಿತ್ತು ಆಗ ಮುಂಬೈ ವೇಗಿ ಲಸಿತ್ ಮಾಲಿಂಗಾ ಅಂತಿಮ ಎಸೆತಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಎಲ್‌ಬಿಡಬ್ಲ್ಯೂಮೂಲಕ ಔಟ್ ಮಾಡಿದ್ದರಿಂದ ಮುಂಬೈ ರೋಚಕ ಗೆಲುವಿನ ಸಂಭ್ರಮಾಚರಿಸುವಂತಾಯ್ತು.

ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ 29, ರೋಹಿತ್ ಶರ್ಮಾ 15, ಕೀರನ್ ಪೊಲಾರ್ಡ್ 41, ಇಶಾನ್ ಕಿಶಾನ್ 23 ರನ್ ನೆರವಿನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಪೇರಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 4ನೇ ಬಾರಿ ಕಪ್‌ ಗೆದ್ದ ಹಿರಿಮೆ ಮುಂಬೈ ಇಂಡಿಯನ್ಸ್ ಪಡೆದುಕೊಂಡರೆ ಚೆನ್ನೈ ಸೂಪರ್‌ ಕಿಂಗ್ಸ್ 3 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

 

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...