No menu items!
12.4 C
Munich
Wednesday, April 29, 2026

ಫಾರ್ಮ್ ನಲ್ಲಿ ಇಲ್ಲದವರನ್ನು ಆಡಿಸೋಕೆ ಧಮ್ ಬೇಕು..! ಇದೇ ಮುಂಬೈ ತಂಡದ ಗೆಲುವಿನ ಸಿಕ್ರೆಟ್..!

Must read

ಸಾಕಷ್ಟು ಏಳು ಬೀಳಿನ ನಡುವೆಯೂ ಈ ಬಾರಿ ಫೈನಲ್‌ಗೆ ಕಾಲಿಟ್ಟ ಮೊದಲ ತಂಡವಾಗುವ ಮೂಲಕ ಫೈನಲ್ ನಲ್ಲಿ ಚೆನೈ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದು ಕಪ್ ಗೆ ಮುತ್ತಿಕ್ಕುವ ಮೂಲಕ ಇತಿಹಾಸ ಸೃಷ್ಟಿಸಿರುವ ಮುಂಬೈ ತಂಡದ ಗೆಲುವಿನ ಗುಟ್ಟೇನು ಎಂಬುದನ್ನು ಮುಂಬೈ ಇಂಡಿಯನ್ಸ್ ನ ಕೋಚ್ ಮಹೇಲಾ ಜಯವರ್ಧನೆ ತಿಳಿಸಿದ್ದಾರೆ.


ದಾಖಲೆಯ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದು ಬೀಗುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಅಗತ್ಯದ ಸಂದರ್ಭಗಳಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವುದೇ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿನ ಮಂತ್ರ ಎಂದು ಹೇಳಿದ್ದಾರೆ.


“2018ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಿಂಚಿದ್ದ ಲೆಗ್‌ ಸ್ಪಿನ್ನರ್‌ ಮಯಾಂಕ್ ಮಾರ್ಕಂಡೆ ಅವರನ್ನು ಬದಿಗಿರಿಸಿ ಮತ್ತೊಬ್ಬ ಅನನುಭವಿ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್ ಅವರನ್ನು ಆಡಿಸಿದ್ದು,

ಹಾಗೂ ಶ್ರೇಷ್ಠ ಲಯದಲ್ಲಿ ಇಲ್ಲದಿದ್ದರೂ ಲಸಿತ್ ಮಾಲಿಂಗ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸಿದ್ದು ತಂಡದ ದಿಟ್ಟ ನಿರ್ಧಾರಗಳಿಗೆ ಹಿಡಿದ ಕೈಗನ್ನಡಿ,

ತಮ್ಮ ತಂಡ ತೆಗೆದುಕೊಂಡ ಇಂತಹ ದಿಟ್ಟ ನಿರ್ಧಾರಗಳಿಂದಲೆ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯವಾಯ್ತು ಎಂದು ಹೇಳಿಕೊಂಡಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article