ಧೋನಿ ನಿವೃತ್ತಿ ಬೆನ್ನಲ್ಲೇ ಮತ್ತೆ ಆಡಿ ಅಂತ ಯುವಿಗೆ ಆಹ್ವಾನ..!

0
215

ಧೋನಿ ನಿವೃತ್ತಿ ಬೆನ್ನಲ್ಲೇ ಮತ್ತೆ ಆಡಿ ಅಂತ ಯುವಿಗೆ ಆಹ್ವಾನ..!

ಸ್ವಾತಂತ್ರ್ಯ ದಿನಾಚರಣೆ ದಿನ ರಾತ್ರಿ 7 .29 ನಿಮಿಷಕ್ಕೆ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದರು .

Instagram ನಲ್ಲಿ ಕೂಲ್ ಆಗಿ ನಿವೃತ್ತಿ ಪ್ರಕಟಿಸಿದ  ಮಿಸ್ಟರ್ ಕೂಲ್ ನಿರ್ಧಾರದಿಂದ ಅಭಿಮಾನಿಗಳಿಗೆ ಬಹಳ ಬೇಜಾರಾಗಿದೆ. ಮಹಿ ಇನ್ನೊಂದಿಷ್ಟು ಕಾಲ ಟೀಮ್ ಇಂಡಿಯಾ ಪರ ಆಡ್ಬೇಕು ಎಂದು ಅಭಿಮಾನಿಗಳ ಆಸೆ..  ವೃತ್ತಿ ಬದುಕಿಗೊಂದು ಆರಂಭವಿದ್ದಂತೆ ನಿವೃತ್ತಿ ಎನ್ನುವುದು ಕೂಡ ಇರಬೇಕಲ್ಲವೇ? ಹಾಗೆಯೇ ಧೋನಿ ಕೂಡ ಅಂತಾರಾಷ್ಟ್ರೀಯ ಕ್ರಿಕೆಟಿಂದ ವಿರಮಿಸಿದ್ದಾರೆ .

ಧೋನಿ ನಿವೃತ್ತಿ ಬೆನ್ನಲ್ಲೇ ಮತ್ತೆ ಆಡುವಂತೆ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಗೆ ಆಹ್ವಾನ ಬಂದಿದೆ..! ಯುವಿ ಕಳೆದ ವರ್ಷ ನಿವೃತ್ತಿ ಘೋಷಿಸಿದ್ದಾರೆ ಮತ್ತೆ ಬಿಸಿಸಿಐ ಯುವಿಗೆ ಆಹ್ವಾನ ನೀಡಿತೇ ಎಂಬ ಪ್ರಶ್ನೆಯೇ..?

ಯುವಿಗೆ ಆಡುವಂತೆ ಆಫರ್ ಬಂದಿರುವುದು ಪಂಜಾಬ್ ಕ್ರಿಕೆಟ್ ಸಂಸ್ಥೆಯಿಂದ‌..

ಯುವಿ ಮತ್ತೆ ಪಂಜಾಬ್ ರಾಜ್ಯದ ಪರ ಆಡುವಂತೆ ಪಂಜಾಬ್​ ಕ್ರಿಕೆಟ್​ ಸಂಸ್ಥೆ (ಪಿಸಿಎ) ಮನವಿ ಮಾಡಿದೆ. ಆಟಗಾರ ಹಾಗೂ ಮೆಂಟರ್ ಆಗಿ ರಾಜ್ಯ ತಂಡದಲ್ಲಿರುವಂತೆ ಪಿಸಿಎ ಕಾರ್ಯದರ್ಶಿ ತಿಳಿಸಿದೆ.
ಒಂದು ಕಾರಣ ಪಂಜಾಬ್ ರಾಜ್ಯ ತಂಡದಲ್ಲಿ ಪ್ರಮುಖ ಆಟಗಾರರು ಇರದಿರುವುದು ಎಂದು ತಿಳಿದು ಬಂದಿದೆ. ತಂಡದಲ್ಲಿ ಅನುಭವಿ ಆಟಗಾರರಾದ ಮನನ್ ವೊಹ್ರಾ ಹಾಗೂ ಬರಿಂದರ್ ಸ್ರಾನ್ ಛತ್ತೀಸ್​​ಗಢ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.
ಯುವ ಬ್ಯಾಟ್ಸ್​ಮನ್​ಗಳಾದ ಜೀವನ್​ಜೋತ್​ ಸಿಂಗ್​ ಮತ್ತು ತರುವರ್​ ಕೊಹ್ಲಿ ಕೂಡ ಕ್ರಮವಾಗಿ ಛತ್ತೀಸ್​ಗಢ ಮತ್ತು ಮೇಘಾಲಯ ಪರ ಬ್ಯಾಟ್ ಬೀಸಲಿದ್ದಾರೆ. ಹೀಗಾಗಿ ಪಂಜಾಬ್ ತಂಡಕ್ಕೆ ಅನುಭವಿ ಆಟಗಾರರ ಕೊರತೆ ಪಂಜಾಬ್ ತಂಡವನ್ನು ಕಾಡಲಿದೆ. ಹಾಗಾಗಿ ಯುವಿ ವಾಪಸ್ಸು ಬಂದರೆ ತಂಡಕ್ಕೆ ಆನೆಬಲ ಸಿಕ್ಕಂತಾಗುತ್ತದೆ ಎಂಬುದು ಪಿಸಿಎ ಚಿಂತನೆ.

ಹಾಗಾಗಿ ನೀವು ಮತ್ತೆ ಪಂಜಾಬ್ ಪರ ಕಣಕ್ಕಿಳಿಯುವ ಮೂಲಕ ಯುವ ಆಟಗಾರಿಗೆ ಮಾರ್ಗದರ್ಶನ ನೀಡಬೇಕೆಂದು ಪಿಸಿಎ ಕಾರ್ಯದರ್ಶಿ ಪುನೀತ್​ ಬಾಲಿ ಯುವರಾಜ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ಯುವಿ ಇನ್ನೂ ಕೂಡ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ ಕಳೆದ ತಿಂಗಳು ಐಪಿಎಲ್ ಆಡುತ್ತಿರುವ ಪಂಜಾಬ್​ನ ಯುವ ಆಟಗಾರಾದ ಶುಭ್​ಮನ್​ ಗಿಲ್​, ಪ್ರಭಸಿಮ್ರನ್​ ಸಿಂಗ್​, ಅನ್ಮೋಲ್​ಪ್ರೀತ್​ ಸಿಂಗ್​, ಅಭಿಷೇಕ್​ ಶರ್ಮ ಮತ್ತು ಹರ್​ಪ್ರೀತ್​ ಬ್ರಾರ್​ ಜೊತೆಗೆ ಅಭ್ಯಾಸ ನಡೆಸಿದ್ದರೆನ್ನುವುದನ್ನು ನೆನೆಯ ಬಹುದು .
ಭಾರತ 2007 ಟಿ20 ವಿಶ್ವಕಪ್ ಮತ್ತು‌ 2011 ರ ಏಕದಿನ ವಿಶ್ವಕಪ್ ಗೆಲ್ಲಲು ಯುವರಾಜ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು . ಎರಡೂ ಟೂರ್ನಿಯಲ್ಲಿ ಸರಣಿ ಶ್ರೇಷ್ಠರಾಗಿದ್ದರು.

ಯುವಿ ಭಾರತದ  ಪರ 40 ಟೆಸ್ಟ್​, 304 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಪಿಸಿಎ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸ್ತಾರಾ ಕಾದು ನೋಡಬೇಕು .

LEAVE A REPLY

Please enter your comment!
Please enter your name here