ನಿಮ್ಮ Life ಬಿಂದಾಸ್ ಆಗಿರಬೇಕೇ? ಈ ಟಿಪ್ಸ್ ಫಾಲೋ ಮಾಡಿ…

0
180

ಜೀವನ ಅಂದರೆ ಸುಖ-ದುಃಖ ,‌ನೋವು-ನಲಿವುಗಳ ಸಮಾಗಮ. ಬಯಸಿದ್ದೆಲ್ಲವೂ ಸಿಗುವಂತಿದ್ದರೆ ಜೀವನ ಇಷ್ಟೊಂದು ಸುಂದರ ಮತ್ತು ಅರ್ಥಗರ್ಭಿತವಾಗಿ ಇರುತ್ತಿರ್ಲಿಲ್ವೇನೋ?


ಅದಿರಲಿ ಜೀವನದ ಬಗ್ಗೆ ಬುದ್ಧ ಹೇಳಿದ ಕೆಲವೊಂದು‌ ವಿಚಾರಗಳನ್ನು ನಾವು ಸದಾ ನೆನಪಿಟ್ಟುಕೊಂಡರೆ ನಿಜಕ್ಕೂ ಚೆನ್ನಾಗಿರ್ತೀವಿ‌.
ಅತಿಯಾದ ನಿರೀಕ್ಷೆಗಳಿದ್ದಲ್ಲಿ ಮುಂದೊಂದು ದಿನ ಅದರಿಂದಲೇ ನಾವು ನೋವು ಅನುಭವಿಸಬೇಕಾಗಬಹುದು.


ಯಾರ ಜೊತೆಗೂ ಯಾವತ್ತೂ ಕೂಡ ಅತಿಯಾದ ಬಾಂಧವ್ಯ ಇಟ್ಟುಕೊಳ್ಳಬಾರದು. ಈ ಅತಿಯಾರ ಬಾಂಧವ್ಯ ಹೆಚ್ಚು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತವೆ. ಅವುಗಳು ಸುಳ್ಳಾದಾಗ ತುಂಬಾ ನೋವು ಅನುಭವಿಸಬೇಲಾಗುತ್ತೆ. ಹಾಗೆಯೇ ಅತಿಯಾದ ಯೋಚನೆ ಕೂಡ ಒಳ್ಳೇದಲ್ಲ. ಅದು ನಮ್ಮ ಜೀವನದ ಖುಷಿಯ ಕ್ಷಣಗಳನ್ನು ಹಾಳು ಮಾಡುತ್ತದೆ.


ನೀವು ಒಳ್ಳೆಯವರೇ ಆಗಿರಿ. ಯಾರಿಗೂ ಕೆಟ್ಟದ್ದನ್ನು ಮಾಡದಿರಿ. ನೀವು ಒಳ್ಳೆಯರೆಂದು ಸಾಭೀತುಪಡಿಸಲು ನಿಮ್ಮ ಜೀವನ ಹಾಗೂ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ.


ನಿಮ್ಮ ಜೀವನದ ಚಾಲಕರು ನೀವೇ….ಅದರ ಚಾಲನಾ ಅಧಿಕಾರವನ್ನು‌ ಇನ್ನೊಬ್ಬರ ಕೈಗೆ ಕೊಡಬೇಡಿ. ಯಾರಿಗೂ ಕ್ಷಮೆ ಕೇಳುವ ಅಗತ್ಯವಿಲ್ಲ.‌ ನಿಮ್ಮ ಮಾತನ್ನು ಬೇರೆ ಯಾರೋ ತಪ್ಪಾಗಿ ಅರ್ಥ ಮಾಡಿಕೊಂಡರೆ ನೀವ್ಯಾಕೆ ಕ್ಷಮೆ ಕೇಳ್ಬೇಕು…?


ನೀವು ನಿಮ್ಮ ಜೀವನದಲ್ಲಿ ಒಂಟಿಯಾಗಿದ್ದೀರಿ ಅಂತಾದ್ರೆ ಆ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳಬೇಡಿ.‌ ನೀವು ಒಂಟಿಯಾಗಿದ್ದೀರಿ ಅಂತಾದ್ರೆ ನಿಮಗೊಬ್ಬರಿಗೇ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಳ್ಳೋ ಸಾಮಾರ್ಥ್ಯ ಇದೆ ಎಂದು.


ನೀವು ನಿಮ್ಮ ವ್ಯಕ್ತಿತ್ವವನ್ನು ಯಾವತ್ತಿಗೂ ಕಳೆದುಕೊಳ್ಳದಿರಿ. ಎಷ್ಟೇ ಕಠಿಣವಾಗಿದ್ದರೂ ಸತ್ಯವನ್ನೇ ನುಡಿಯಿರಿ.
ಗಿಣಿಯಂತಿರಬೇಡಿ, ಹದ್ದಾಗಿರಿ. ಗಿಣಿ ತುಂಬಾ ಮಾತಾಡುತ್ತದೆ. ಹದ್ದು ಶಾಂತವಾಗಿದ್ದು, ಆಕಾಶವನ್ನು ಮುಟ್ಟುವ ಯೋಚನೆ ಮಾಡ್ತಿರುತ್ತದೆ.
ಹೀಗೆ ಆಗಾಗ ಇಂಥಾ ವಿಚಾರಗಳ ಬಗ್ಗೆ ನಿಮ್ಮ ಜೊತೆ ಅಕ್ಷರ ರೂಪದಲ್ಲಿ ಮಾತಾಡ್ತೀರ್ತೀವಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

 

  

LEAVE A REPLY

Please enter your comment!
Please enter your name here