ನಟ ಪವನ್ ಕಲ್ಯಾಣ್ ಹತ್ಯೆಗೆ ಸ್ಕೆಚ್..!
ಆಂಧ್ರಪ್ರದೇಶದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಪವರ್ ಸ್ಟಾರ್ ಪವನ್ ಕಲ್ಯಾಣ್ ಹತ್ಯಗೆ ಸ್ಕೆಚ್ ಹಾಕಿದ್ದಾರಾ..? ಇಂಥಾದ್ದೊಂದು ಆತಂಕವನ್ನ ಸ್ವತಃ ಪವನ್ ಕಲ್ಯಾಣ್ ಅವರೇ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪಶ್ಚಿಮ ಗೋಧಾವರಿ ಜಿಲ್ಲೆಯಲ್ಲಿ ನಡೆದ ಜನಸೇನಾ ಯಾತ್ರೆಯಲ್ಲಿ ಅವರು ಇಂಥಾದ್ದೊಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಮಂಗಳವಾರ ಪಶ್ಚಿಮ ಗೋದಾವರಿಯಲ್ಲಿ ಜನಸೇನಾ ಪಕ್ಷದ ವತಿಯಿಂದ ಪ್ರಜಾ ಹೋರಾಟ ಯಾತ್ರೆಯನ್ನ ಆಯೋಜಿಸಲಾಗಿತ್ತು. ಪವನ್ ಕಲ್ಯಾಣ್ ಆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ನೂಕು ನುಗ್ಗಲು ಉಂಟಾಗುತ್ತೆ. ಅಷ್ಟೇ ಅಲ್ಲದೇ, ನಾಲ್ಕು ಯುವಕರು ಅನುಮಾನಾಸ್ಪದವಾಗಿ ಪವನ್ ಕಲ್ಯಾಣ್ ಅವರ ಸುತ್ತ ಓಡಾಡಿದ್ದರು. ಕೂಡಲೇ ಕಾರ್ಯಕರ್ತರು ಪವನ್ ಅವರನ್ನ ಸುರಕ್ಷಿತವಾಗಿ ಕರೆದೊಯ್ದಿದ್ದರು. ಈ ನೂಕು ನುಗ್ಗಲಿನ ಬಳಿಕ ಮಾತನಾಡಿದ ಪವನ್, ಚುನಾವಣೆಗೂ ಮುನ್ನ ತಮ್ಮ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನುವ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೇ, ಇದು ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದವರ ಸಂಚಾಗಿರಬಹುದು ಎನ್ನುವ ಅನುಮಾನವನ್ನ ಕೂಡ ವ್ಯಕ್ತಪಡಿಸಿದ್ದರು. ಜೊತೆಗೆ ಪೊಲೀಸ್ ಭದ್ರತೆಯ ಬಗ್ಗೆಯೂ ಪ್ರಶ್ನೆ ಮಾಡಿದ್ದರು.
ಪವನ್ ಕಲ್ಯಾಣ್ ಇಂಥಾದ್ದೊಂದು ಆರೋಪ ಮಾಡುತ್ತಿದ್ದಂತೆ ಸಿಸಿಟಿವಿ ಕ್ಯಾಮರಾಗಳನ್ನ ಪರಿಶೀಲನೆ ಮಾಡಿದ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ಕು ಯುವಕರನ್ನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಅವರೆಲ್ಲಾ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಎನ್ನುವ ಸಂಗತಿ ತಿಳಿದು ಬಂದಿದೆ. ಒಟ್ಟಾರೆ ಈ ಘಟನೆಯ ಬಳಿಕ ಜನಸೇನಾ ನಾಯಕ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ.