ಇಡೀ ಕರ್ನಾಟಕದಾದ್ಯಂತ ಬಹುದೊಡ್ಡ ಹೆಸರುಗಳಿಸಿದ ಹನುಮಂತ . ಕೇವಲ ಸಿಂಗಿಂಗ್ ಶೋ ಕಾರ್ಯಕ್ರಮ ಮಾತ್ರವಲ್ಲದೇ, ಡಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿ ಜನಮೆಚ್ಚಿಗೆ ಪಡೆದಿದ್ದ ಆದರೆ ಹನುಮಂತನಿಗೆ ಹೆಸರು, ಖ್ಯಾತಿ ಮಾತ್ರ ಬಂದಿದೆ. ಆದರೆ ಅಂದು ಬಹುಮಾನದ ರೂಪದಲ್ಲಿ ಕೊಟ್ಟ ಮನೆಯೂ ಕೂಡ ತನ್ನ ಹೆಸರಿಗೆ ಇನ್ನುಬಂದಿಲ್ಲ. ಕ್ಯಾಮರಾ ಮುಂದೆ ಮಾತ್ರ ಎಲ್ಲವನ್ನು ಕೊಟ್ಟಂತೆ ಮಾಡುತ್ತಾರೆ, ಆರ್ಥಿಕವಾಗಿ ಯಾವುದೇ ಸಹಾಯ ಆಗಿಲ್ಲ, ಎಂದೆಲ್ಲಾ ಹನುಮಂತನೇ ಹೇಳಿದ ಹಾಗೇ ದೊಡ್ಡ ಸುದ್ದಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದು ಸಖತ್ ವೈರಲ್ ಆಗಿದೆ ಈ ವಿಚಾರ ನಿಜಾನಾ ಸುಳ್ಳ ಎಂಬ ಪ್ರಶ್ನೆ ಜನರಲ್ಲಿ ಮುಡುತ್ತಿತ್ತು .
ಆದರೆ ಈಗ ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಹನುಮಂತ, ನನ್ನ ಬಗ್ಗೆ ಸಾಮಾಜಿಕ ಜಾಲತಾಣದ್ಲಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಕೇಳಿದೆ. ಆದರೆ ನೀವೆಂದುಕೊಂಡಂತೆ ಅದೆಲ್ಲಾ ಸತ್ಯ ಅಲ್ಲ. ಆ ಕಾರ್ಯಕ್ರಮದಲ್ಲಿ ನಾನು ಗೆದ್ದ ಹಣ ಹಾಗೂ ಮನೆ ಇಲ್ಲ ನನಗೆ ಸಿಕ್ಕಿದೆ ಜೀ ವಾಹಿನಿಯಲ್ಲಿ ನಿಂಗಪ್ಪ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ, ಈ ರೀತಿ ಸುಮ್ಮನೆ ಸುಳ್ಳು ಸುದ್ದಿ ಮಾಡಬೇಡಿ ಎಂದು ಹನುಮಂತ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.