ಬೆಂಗಳೂರು: ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬರಲು ಇಚ್ಛಿಸುವವರಿಗೆ ಸ್ವಾಗತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಟಿಕೆಟ್ ಸಿಗದವರು ರೊಚ್ಚಿಗೆದ್ದು ತಮ್ಮ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗೋದು ಸಾಮಾನ್ಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಯನೂರು ಮಂಜುನಾಥ್ ಮತ್ತು ಎಂಪಿ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡದೆ ಹೋದಾಗ ಜೆಡಿಎಸ್ ಪಕ್ಷ ನೀಡಿತು. ಹಾಗೆಯೇ ಬಿಜೆಪಿ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೊಡದಿದ್ದಾಗ ಕಾಂಗ್ರೆಸ್ ಕೊಟ್ಟಿತು.
ಚುನಾವಣೆ ಸಮಯದಲ್ಲಿ ಇದೆಲ್ಲ ಮಾಮೂಲು, ಮೊದಲಿಂದ ನಡೆದುಕೊಂಡು ಬಂದಿರುವ ಸಂಗತಿ, ತಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬರಲು ಇಚ್ಛಿಸುವವರಿಗೆ ಸ್ವಾಗತ ಎಂದು ಶಿವಕುಮಾರ್ ಹೇಳಿದರು. ಅಂದರೆ ಬಂಡಾಯವೆದ್ದಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಾಗಿಲು ತೆರೆದಿವೆಯೇ ಅಂತ ಕೇಳಿದಾಗ ಶಿವಕುಮಾರ್, ಪಕ್ಷದ ರಣನೀತಿಯನ್ನು ಬಹಿರಂಗಗೊಳಿಸುವುದು ತಮಗಿಷ್ಟವಿಲ್ಲ ಎಂದರು.
ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬರಲು ಇಚ್ಛಿಸುವವರಿಗೆ ಸ್ವಾಗತ !
Date: