No menu items!
13.3 C
Munich
Thursday, April 30, 2026

ಈಗಿನ ಅಸಮಾಧಾನದ ಬಗ್ಗೆ ನಾವು ನೀವು ಮಾತಾಡುವುದು ತಪ್ಪು !

Must read

ಬೆಂಗಳೂರು: ಈಗಿನ ಅಸಮಾಧಾನದ ಬಗ್ಗೆ ನಾವು ನೀವು ಮಾತಾಡುವುದು ತ̧ಪ್ಪು ಗೊಂದಲಗಳೆಲ್ಲವೂ ಸುಖಾಂತ್ಯ ಕಾಣಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಈಗಿನ ಅಸಮಾಧಾನದ ಬಗ್ಗೆ ನಾವು ನೀವು ಮಾತಾಡುವುದು ತಪ್ಪು. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಜೆಡಿಎಸ್ ಮತ್ತು ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಈಗಿನ ಗೊಂದಲಗಳೆಲ್ಲವೂ ಸುಖಾಂತ್ಯ ಕಾಣಲಿದೆ ಎಂದ ವಿಜಯೇಂದ್ರ, ಮಾಜಿ ಸಿಎಂ ಡಿವಿ ಸದಾನಂದ ಗೌಡ ಬಗ್ಗೆ ಸಚಿವ ಎಂಬಿ ಪಾಟೀಲ್ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ನಾಯಕರಿಗೆ ಅವರ ನಾಯಕರಿಗಿಂತ ನಮ್ಮ ಪಕ್ಷದ ನಾಯಕರ ಮೇಲೆಯೇ ಪ್ರೀತಿ ಹೆಚ್ಚಾಗಿದೆ. ಕಳೆದೊಂದು ವಾರದ ಎಂಬಿ ಪಾಟೀಲ್ ಹಾಗೂ ಇತರ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಬಿಜೆಪಿ ನಾಯಕರ ಮೇಲೆ ಅವರಿಗೆ ವಿಶ್ವಾಸ ಬಂದಂತಿದೆ. ಸದಾನಂದ ಗೌಡ ಪಕ್ಷ ಬಿಡಲ್ಲ, ಬಿಜೆಪಿಯಲ್ಲೇ ಇರುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿ, ಅವರ ಮನವೊಲಿಕೆ ಪ್ರಯತ್ನ ಕೈಬಿಡಲ್ಲ. ಅವರು ಹಿರಿಯರು, ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿದೆ. ಅವರಿಗೆ ಸತ್ಯ ಅರ್ಥ ಆದ ಮೇಲೆ ಎಲ್ಲವೂ ಸರಿಯಾಗಲಿದೆ. ಇವತ್ತು, ನಾಳೆ ದೆಹಲಿಯಲ್ಲಿ ಸಭೆ ಇದೆ. ಬಾಕಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮವಾಗಲಿದೆ ಎಂದರು.

- Advertisement -spot_img

More articles

- Advertisement -spot_img

Latest article