ಡಿ.ಕೆ.ಶಿವಕುಮಾರ್ ತಹಾರ್ ಜೈಲಿನಲ್ಲಿ ಇದ್ದಾರೆ ಆದರೆ ದಿನೆ ದಿನೆ ಅವರ ಜಾಮೀನು ದಿನ ಮುಂದುಡುತ್ತಿದೆ ಇಂದು ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿ ವರದಿಯನ್ನು ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಅಂಶಗಳ ಆಧಾರದ ಮೇಲೆ ವಾದ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಡಿಕೆಶಿ ಪರ ವಕೀಲರು ಇದರ ಪ್ರತಿಯನ್ನು ಪಡೆಯಬೇಕಾಗಿದೆ.ತನಿಖೆಯ ವರದಿಯ ಪ್ರತಿಯನ್ನು ಪಡೆದು ಅದರ ಆಧಾರದ ಮೇಲೆ ಡಿಕೆಶಿ ಪರ ವಕೀಲರು ನಾಳೆ ವಾದ ಮಂಡಿಸುವ ಸಾದ್ಯತೆ ಇದೆ. ನಂತರ ಇಡಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ಬಳಿಕ ಡಿ.ಕೆ.ಶಿವಕುಮಾರ್ ಅವರ ಜಾಮೀನಿನ ಬಗ್ಗೆ ನಿರ್ಧಾರವಾಗಲಿದೆ.