ಜೊತೆ ಜೊತೆಯಲಿ ಧಾರಾವಾಹಿ ಸ್ವಂತ ಕಥೆಯಲ್ಲ..! ಇದು ಕೂಡ ರಿಮೇಕ್ ಧಾರಾವಾಹಿ.. ಯಾವ ಧಾರಾವಾಹಿಯ ರಿಮೇಕ್ ಗೊತ್ತಾ?

Must read

ಜೊತೆ ಜೊತೆಯಲ್ಲಿ ಸದ್ಯಕ್ಕೆ ಕಿರುತೆರೆಯಲ್ಲಿ ಹೆಚ್ಚಾಗಿ ಸೌಂಡ್ ಮಾಡುತ್ತಿರುವ ಧಾರಾವಾಹಿ. ಬಹಳ ವರ್ಷಗಳ ನಂತರ ಪ್ರೇಕ್ಷಕರನ್ನು ರಂಜಿಸಲು ಅನಿರುದ್ಧ್ ಅವರು ಬಣ್ಣ ಹಚ್ಚಿರುವ ಧಾರಾವಾಹಿ ಇದಾಗಿದೆ. ಸಿನಿಮಾದಲ್ಲಿ ನಟನೆ ಮಾಡಿ ಕೆಲ ವರ್ಷಗಳ ಗ್ಯಾಪ್ ತೆಗೆದುಕೊಂಡು ಕಿರುತೆರೆ ಮೂಲಕ ಜನರನ್ನು ರಂಜಿಸಲು ಅನಿರುದ್ಧ ಅವರು ಜೊತೆಜೊತೆಯಲ್ಲಿ ಧಾರಾವಾಹಿಯ ನಾಯಕರಾಗಿ ಮಿಂಚುತ್ತಿದ್ದಾರೆ. ಇನ್ನು ಈ ಧಾರಾವಾಹಿ ಶುರುವಾಗಿ ಕೇವಲ ಮೂರು ವಾರಗಳು ಕಳೆದಿದ್ದು ಪ್ರಸ್ತುತ ಕಿರುತೆರೆಯ ಎಲ್ಲಾ ಧಾರಾವಾಹಿಗಳ ಟಿಆರ್ಪಿ ಗಳನ್ನು ಬದಿಗೆ ತಳ್ಳಿ ನಂಬರ್ ಒನ್ ಪಟ್ಟಕ್ಕೇರಿದೆ. ಇಷ್ಟು ಸೌಂಡ್ ಮಾಡುತ್ತಿರುವ ಈ ಧಾರಾವಾಹಿ ಸ್ವಂತ ಕಥೆಯಲ್ಲ ಎಂಬುದು ಮತ್ತೊಂದು ವಿಚಾರ.

ಹೌದು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರಾವಾಹಿ ಸ್ವಮೇಕ್ ಅಲ್ಲ ಬದಲಾಗಿ ಮರಾಠಿಯಲ್ಲಿ ಜನಪ್ರಿಯತೆಯನ್ನು ಗಳಿಸಿರುವ “ತುಲ ಪಹತೆ ರೆ” ಎಂಬ ಧಾರಾವಾಹಿಯ ರಿಮೇಕ್. ಹೌದು ಕನ್ನಡದ ಜೊತೆ ಜೊತೆಯಲ್ಲಿ ಧಾರಾವಾಹಿ ಮರಾಠಿಯ ತುಲ ಪಹತೆ ರೆ ಎಂಬ ಧಾರಾವಾಹಿಯ ರಿಮೇಕ್ ಆಗಿದೆ. ಇನ್ನು ತುಲ ಪಹತೆ ರೆ ಸಹ ಮರಾಠಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ಸೌಂಡ್ ಮಾಡಿದ್ದು ಈಗಾಗಲೇ 300 ಗೂ ಹೆಚ್ಚು ಎಪಿಸೋಡ್ಗಳನ್ನು ಪೂರೈಸಿ ಭರ್ಜರಿಯಾಗಿ ಸಾಗುತ್ತಿದೆ.

- Advertisement -spot_img

More articles

- Advertisement -spot_img

Latest article