ಸೋಮವಾರ ವಿಶ್ವಾಸಮತಯಾಚನೆ ಮಾಡುವುದಾಗಿ ಹೇಳಿ ಗೂಟ ಹೊಡೆದುಕೊಂಡು ಕುಳಿತಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಸ್ಪೀಕರ್ ರಮೇಶ್ ಕುಮಾರ್ ಸೋಮವಾರ ವಿಶ್ವಾಸ ಮತಯಾಚನೆ ಮತಕ್ಕೆ ಹಾಕುವುದಾಗಿ ಹೇಳಿದ್ದಾರೆ. ಸದನದಲ್ಲಿ ಮತ್ತೆ ಕಾಲಹರಣ ಮಾಡಿದರೆ ಅವರೆಲ್ಲಾ ವಚನ ಭ್ರಷ್ಟರಾಗುತ್ತಾರೆ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರದ ಉದ್ದೇಶವೇ ನಮ್ಮನ್ನು ಪ್ರಚೋದನೆ ಮಾಡುವುದಾಗಿದೆ. ನಾವು ಶಿಸ್ತಿನಿಂದ ಇದ್ದೇವೆ. ಅಧಿಕಾರಕ್ಕೆ ಅಂಟಿಕೊಂಡಿಲ್ಲ, ಅಧಿಕಾರ ನಮ್ಮಪ್ಪನ ಆಸ್ತಿಯಲ್ಲ ಅಂತಾರೆ ಕುಮಾರಸ್ವಾಮಿ. ಆದರೆ ಯಾಕೆ ಗೂಟ ಹೊಡೆದುಕೊಂಡು ಕುಳಿತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡಿದೆ. ಬಹುಮತ ಸಾಬೀತುಪಡಿಸಿ. ಇಲ್ಲವೇ ರಾಜೀನಾಮೆ ಕೊಟ್ಟು ತೊಲಗಿ ಎಂದು ಕಿಡಿಕಾರಿದ್ದಾರೆ.