ನಾಳೆ ರಾಜ್ಯದ ಈ 8 ಜಿಲ್ಲೆಗಳಲ್ಲಿ ಭಾರೀ ಮಳೆ

0
40

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 27 ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ.

ಇನ್ನು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರಿನಲ್ಲಿ ಒಣಹವೆ ಇರಲಿದೆ.

ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಗೆ ಜಿಲ್ಲಾ ಕೇಂದ್ರದ ಜನತೆಯನ್ನು ಅಕ್ಷರಶಃ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದ್ದು ನಗರದ ಹೊರ ವಲಯದ ರಂಗಸ್ಥಳ ಸಮೀಪ ಇರುವ ರಂಗಧಾಮ ಕೆರೆ ಮಳೆಗೆ ತುಂಬಿ ಕೋಡಿ ಹರಿದ ಪರಿಣಾಮ ಮಳೆ ನೀರು ಉಕ್ಕಿ ಹರಿದು ನಾಲೆ, ರಾಜಕಾಲುವೆಗಳ ಒತ್ತುವರಿ ಕಾರಣಕ್ಕೆ ನಗರದ ಪ್ರತಿಷ್ಠಿತ ಡಿವೈಎನ್‌ ಸಿಟಿಗೆ ನುಗ್ಗಿ ಜನರ ನಿದ್ದೆಗೆಡಿಸಿದೆ.

ಇದೇ ಮೊದಲ ಬಾರಿಗೆ ಭಾರಿ ಮಳೆಗೆ ನಗರದ ಹೊರ ವಲಯದ ಗೌರಿಬಿದನೂರು ರಸ್ತೆಯಲ್ಲಿ ಬರೋಬ್ಬರಿ 1 ಕಿ.ಮೀನಷ್ಟುರಸ್ತೆಯೆ ಮಳೆಯಿಂದ ಜಲಾವೃತಗೊಂಡಿದ್ದು ವಾಹನ ಸವಾರರು ಹಾದಿಯಾಗಿ ಸಾರ್ವಜನಿಕರು ಸುತ್ತಮುತ್ತಲಿನ ಜನ ಗಂಟೆಗಟ್ಟಲೇ ಮಳೆಯಿಂದಾಗಿ ರಸ್ತೆಯಲ್ಲಿ ಸಂಚರಿಸಲಾಗದೇ ಗೌರಿಬಿದನೂರು ಸೇರಿದಂತೆ ಪೋಶೆಟ್ಟಿಹಳ್ಳಿ, ಮಂಚೇನಹಳ್ಳಿ ಕಡೆಗೆ ಸಂಚರಿಸಬೇಕಾಗಿದ್ದ ವಾಹನ ಸವಾರರು ಇನ್ನಿಲ್ಲದಂತೆ ಪರದಾಡಿದರು.

ರಾಜ್ಯಕ್ಕೆ ಅಕ್ಟೋಬರ್‌ 26ರಿಂದ ಈಶಾನ್ಯ ಮಾರುತಗಳು ಪ್ರವೇಶವಾಗಲಿದ್ದು, ಹಿಂಗಾರು ಮಳೆ ಸುರಿಯಲಿದೆ. ಹಿಂಗಾರು ಮಾರುತಗಳು ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆಗೆ ಕಾರಣವಾಗಲಿವೆ.

ಕರಾವಳಿಯಲ್ಲಿ ಸಾಧಾರಣ ಮಳೆ ಸುರಿಸುತ್ತವೆ. ಉತ್ತರ ಒಳನಾಡಿನ ಜಿಲ್ಲೆಗಳ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

LEAVE A REPLY

Please enter your comment!
Please enter your name here