No menu items!
11.1 C
Munich
Wednesday, April 29, 2026

ಪಾಕ್ ನಾಯಕ ಬಾಬರ್ ಅಜಮ್ ನಿಂದ ಯುವತಿಗೆ ವಂಚನೆ!

Must read

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅವರ ‘ಗೆಳತಿ’ ಕುರಾನ್ ಮೇಲೆ ಕೈ ಇಡುವ ಮೂಲಕ ಪ್ರಮಾಣ ಮಾಡಿದ್ದು,, ಪಾಕಿಸ್ತಾನದ ಕ್ಯಾಪ್ಟನ್ 10 ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದಾಗಿ ಆರೋಪ ಹೊರಿಸಿದ್ದಾರೆ.

ಭಾರತದ ಸೋಲಿಗಿಂತ ಪಾಕಿಸ್ತಾನದ ಗೆಲುವು ಪ್ರಸ್ತುತ ಸುದ್ದಿಯಲ್ಲಿದೆ. ಇಡೀ ಪಾಕಿಸ್ತಾನವು ಪ್ರಸ್ತುತ ನಾಯಕ ಬಾಬರ್ ಅಜಮ್ ಅವರನ್ನು ತನ್ನ ನಾಯಕನನ್ನಾಗಿ ಪರಿಗಣಿಸುತ್ತಿದೆ. ಆದಾಗ್ಯೂ, ಬಾಬರ್ ಅಜಮ್ ತಮ್ಮ ವೈಯಕ್ತಿಕ ಜೀವನದಲ್ಲಿ (personal life) ಹಲವಾರು ಬಾರಿ ವಿವಾದಕ್ಕೊಳಗಾಗಿದ್ದಾರೆ. ತನ್ನನ್ನು ಬಾಬರ್ ಅಜಮ್ ಗೆಳತಿ ಎಂದು ಬಣ್ಣಿಸಿಕೊಳ್ಳುವ ಹಮೀದ ಮುಖ್ತಾರ್ ಈ ಮಧ್ಯೆ ಹೊಸ ಆರೋಪ ಹೊರಿಸುವ ಮೂಲಕ ಬಾಬರ್ ವಿಜಯೋತ್ಸವವನ್ನು ಮುರಿದಿದ್ದಾರೆ.

ಬಾಬರ್ ಮದುವೆಯ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಬರ್ ಗೆಳತಿ ಹೇಳಿಕೊಂಡಿದ್ದು, ಈಗ ಪಾಕಿಸ್ತಾನದ ಕ್ಯಾಪ್ಟನ್ ನಿಕಾಹ್ ನಿಂದ ವಿಮುಖರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಪತ್ರಿಕೆ ಡೈಲಿ ಪಾಕಿಸ್ತಾನ್ (daily pakistan) ವರದಿ ಮಾಡಿದೆ. ತಾನು ಬಾಬರ್ ಅಜಮ್ ನ ಮಗುವಿನ ತಾಯಿ ಆಗಲಿದ್ದೇನೆ ಎಂದು ಮಹಿಳೆ ಹೇಳಿದರು.

ಬಾಬರ್ ಅವರ ಕುಟುಂಬವು ಪ್ರಕರಣವನ್ನು ಮುಚ್ಚಿಹಾಕಲು 20 ಲಕ್ಷ ರೂ.ಗಳನ್ನು ನೀಡಿತ್ತು ಎಂದು ಸಹ ತಿಳಿದು ಬಂದಿದೆ.

ಪತ್ರಿಕೆಯ ವರದಿಯ ಪ್ರಕಾರ, ಹಮೀಡಾ ಬಾಬರ್ ಅಜಮ್ ವಿರುದ್ಧ ಪಾಕಿಸ್ತಾನದ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ, ಅಲ್ಲಿ ಅವರು ಪಾಕಿಸ್ತಾನದ ಕ್ಯಾಪ್ಟನ್ ವಿರುದ್ಧ ಚಿತ್ರಹಿಂಸೆ ಪ್ರಕರಣ ದಾಖಲಿಸಿದ್ದಾರೆ. ಇಡೀ ವಿವಾದವನ್ನು ಬಗೆಹರಿಸಲು ಬಾಬರ್ ಅವರ ಕುಟುಂಬವು 20 ಲಕ್ಷ ರೂ.ಗಳನ್ನು ನೀಡಿದೆ ಎಂದು ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಬಾಬರ್ ಅವರ ವಿರುದ್ಧದ ಬ್ಲ್ಯಾಕ್ ಮೇಲ್ (black mail) ಮತ್ತು ಕಿರುಕುಳ ಪ್ರಕರಣ ಲಾಹೋರ್ ಹೈಕೋರ್ಟ್ ನಲ್ಲಿ (High Court) ಬಾಕಿ ಇರುವ ಸಮಯದಲ್ಲಿ ಬಾಬರ್ ಅವರಿಂದ ಈ ಪ್ರಸ್ತಾಪ ಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article