ನಿಖಿಲ್ ಕುಮಾರಸ್ವಾಮಿ ಹೆಂಡ್ತಿ ಯಾರಂತ ರಿವೀಲ್ ಆಯ್ತು..!

Date:

ನಿಖಿಲ್​ ಕುಮಾರಸ್ವಾಮಿ ಹೆಂಡ್ತಿ ಯಾರು ಅಂತ ರಿವೀಲ್ ಆಗಿದೆ..! ಅರೆ, ನಿಖಿಲ್​ಗೆ ಮದುವೆಯಾಗಿ ಬಿಡ್ತಾ ಎಂದು ಕೇಳಬೇಡಿ. ಇದು ರಿಯಲ್ ಅಲ್ಲ ರೀಲ್ ಸ್ಟೋರಿ..!
ಎಲ್ಲರಿಗೂ ಗೊತ್ತೇ ಇರುವಂತೆ ನಿಖಿಲ್ ಕುಮಾರಸ್ವಾಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ತಾರಾಗಣದ ಚಿತ್ರ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದಾರೆ. ಆಗಸ್ಟ್ 9ಕ್ಕೆ ಕುರುಕ್ಷೇತ್ರ ರಿಲೀಸ್ ಆಗುತ್ತಿದೆ. ದರ್ಶನ್, ನಿಖಿಲ್ ಅಲ್ಲದೆ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್ ಮತ್ತಿತರರು ನಟಿಸಿದ್ದಾರೆ. ಮುನಿರತ್ನ ಸಿನಿಮಾವನ್ನು ನಿರ್ಮಿಸಿದ್ದು, ನಾಗಣ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ.


ಅರ್ಜುನ​ ಮತ್ತು ಸುಭದ್ರೆಯ ಮಗನಾದ ಅಭಿಮನ್ಯುಯು ಅಪ್ರತಿಮ ವೀರ. ಈತ ಚಕ್ರವ್ಯೂಹ ಭೇದಿಸಿದ್ದ. ಮೋಸದಿಂದಲೇ ಕೊನೆಯುಸಿರು ಎಳೆದಿದ್ದ. ವಿರಾಟರಾಜನ ಮಗಳಾದ ಉತ್ತರೆಯನ್ನು ಅಭಿಮನ್ಯು ವಿವಾಹವಾಗಿದನ್ನು ಎನ್ನುವುದು ಮಹಾಭಾರತ. ಈ ಕಥೆಯೇ . ‘ಕುರುಕ್ಷೇತ್ರ’ ಸಿನಿಮಾದಲ್ಲೂ ಇದೆ. ಅಭಿಮನ್ಯು- ಉತ್ತರೆಯ ಸ್ಟೋರಿ ಇಲ್ಲಿದೆ. ಅಭಿಮನ್ಯು ನಿಖಿಲ್​ಗೆ ನಾಯಕಿಯಾಗಿ ಬಾಲಿವುಡ್ ನಟಿ ಅದಿತಿ ಆರ್ಯ ಅಭಿನಯಿಸಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.
ಜಾಗ್ವಾರ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಗೆ ಎಂಟ್ರಿಕೊಟ್ಟ ನಿಖಿಲ್ ನಂತರ ಸೀತಾರಾಮ ಕಲ್ಯಾಣ ಮಾಡಿದ್ದರು. ಕುರುಕ್ಷೇತ್ರ ನಿಖಿಲ್ ಅವರ ಮೂರನೇ ಸಿನಿಮಾ. ಈ ನಡುವೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸೋತಿದ್ದರು.

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ – ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ -...

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ...

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...