No menu items!
12.1 C
Munich
Thursday, May 7, 2026

ಎರಡೇ ಎರಡು ಬಾಳೆಹಣ್ಣಿಗೆ 442 ರೂ..! ಅಂಥಾ ಕೆಲಸ ಮಾಡಿದ್ದಕ್ಕೆ ಬಿತ್ತು 25 ಸಾವಿರ ದಂಡ..!

Must read

ಒಂದು ಬಾಳೆ ಹಣ್ಣಿಗೆ ಅಮ್ಮಮ್ಮ ಅಂದ್ರೆ ಎಷ್ಟಿರಬಹುದು? 10 ರೂ..? ಹೋಗ್ಲಿ…ಇನ್ನೂ ಜಾಸ್ತಿ ಅಂದ್ರೆ 15 ರೂ..! ಅದಕ್ಕಿಂತ 1 ರೂ ಕೂಡ ಹೆಚ್ಚು ಇರೋಕೆ ಸಾಧ್ಯ ಇಲ್ಲ. ಒಂದಕ್ಕೆ 15ರಂತೆ 2 ಬಾಳೆಹಣ್ಣಿಗೆ 30 ರೂ ಆಗುತ್ತೆ..! ಆದರೆ, ಚಂಡಿಗಢದ ಹೋಟೆಲ್ ಒಂದರಲ್ಲಿ ಎರಡೇ ಎರಡು ಬಾಳೆಹಣ್ಣುಗಳಿಗೆ ಬರೋಬ್ಬರಿ 442 ರೂ..!
ಏನ್ ಗುರು ಇದು,.. ಅಂತ ನಂಬಲು ಕಷ್ಟ ಆದ್ರೂ ನಂಬ್ಲೇ ಬೇಕು. ನಟ ರಾಹುಲ್ ಬೋಸ್‌ ತಂಗಿದ್ದಂತಹ ಜೆಡಬ್ಲ್ಯೂ ಮ್ಯಾರಿಯಟ್ ಹೊಟೇಲ್‌ನಲ್ಲಿ ಎರಡೇ ಎರಡು 2 ಬಾಳೆಹಣ್ಣಿಗೆ 442 ರೂ. ಬಿಲ್‌ ಮಾಡಿದ್ದಾರೆ..! ಆ ತಪ್ಪಿಗೆ ತೆರಿಗೆ ಇಲಾಖೆಯ ಅಧಿಕಾರಿಗಳು 25,000 ರೂ ದಂಡ ವಿಧಿಸಿದ್ದಾರೆ. ವಿನಾಯಿತಿ ಇರುವ ವಸ್ತುವಿನ ಮೇಲೆ ತೆರಿಗೆ ಸಂಗ್ರಹಿಸಿ ನಿಯಮ ಉಲ್ಲಂಘಿಸಿದ್ದ ತಪ್ಪಿಗಾಗಿ ಹೋಟೆಲ್​ನವರು 25 ಸಾವಿರ ದಂಡ ಕಟ್ಟಿದ್ದಾರೆ.,.!

ರಾಹುಲ್ ಬೋಸ್​ ಫ್ರೂಟ್​ ಪ್ಲಾಟರ್​ ಆರ್ಡರ್​​ ಮಾಡಿದ್ದರಂತೆ. ಹೋಟೆಲ್ ಅವರು 2 ಬಾಳೆ ಹಣ್ಣಯ ಕೊಟ್ಟು 442ರೂ ಬಿಲ್ ಮಾಡಿದ್ದರು..ಇದನ್ನು ಫೋಟೋ ತೆಗೆದು ರಾಹುಲ್ ಟ್ವೀಟ್ ಮಾಡಿದ್ದರು. ಟ್ವಿಟರ್​ನಲ್ಲಿ ಪೋಸ್ಟ್ ವೈರಲ್ ಆಗಿದೆ. ತೆರಿಗೆ ಇಲಾಖೆಯವರ ಗಮನಕ್ಕೆ ಬಂದೊಡನೆ ಅವರು ಹೋಟೆಲ್​ಗೆ ವಿಸಿಟ್ ಮಾಡಿ ವಿಚಾರಿಸಿ 25 ಸಾವಿರ ರೂ ದಂಡ ಹಾಕಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article