ನಿತ್ಯ ಭವಿಷ್ಯ : ಪ್ರೇಮ ಸಂಬಂಧಗಳಲ್ಲಿ ಈ ರಾಶಿಯವರಿಗೆ ಆಹ್ಲಾದಕರ ದಿವಸ
ಮೇಷ : ವೃತ್ತಿರಂಗದಲ್ಲಿ ಸ್ಪರ್ಧಾತ್ಮಕ ಪೈಪೋಟಿ. ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕಾದ ಒತ್ತಡ. ದಾಂಪತ್ಯದಲ್ಲಿ ಸ್ವಲ್ಪಮಟ್ಟಿಗೆ ಕಿರಿಕಿರಿ. ಕುಟುಂಬಸ್ಥರ ಹಿತಾಸಕ್ತಿ ಕಡೆ ಸ್ವಲ್ಪ ಗಮನಕೊಡಿ. ಹಣಕಾಸಿನ ವಿಚಾರ ನೋಡುವುದಾದರೆ ಶುಭದಾಯಕವಾಗಿದೆ. ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ.
ವೃಷಭ : ವಿವಾಹ ಮಾತುಕತೆ, ಆಸ್ತಿಯ ವಿಚಾರದಲ್ಲಿ ಸಹೋದರ ಸಂಬಂಧಿ ನಡೆಯಿಂದ ಸಂತೋಷ ಮೊದಲಾದ ಫಲಗಳು ಗೋಚರವಾಗುತ್ತಿವೆ. ಗುರುವನ್ನು ಪ್ರಾರ್ಥಿಸಿ.
ಮಿಥುನ : ಕೃಷಿಕರಿಗೆ, ದ್ರವ ವ್ಯಾಪಾರಿಗಳಿಗೆ ಶುಭ ದಿವಸ. ಯಶಸ್ಸಿನ ಬಗ್ಗೆ ಯೋಚಿಸುತ್ತಿರುವ ನೀವು ಸೋಗಿನ ಮಾತುಗಳಿಗೆ ಮರುಳಾಗಬೇಡಿ. ಅಪರಿಚಿತರ ಮಾತಿಗೆ ಕಳೆದುಹೋಗದಿರಿ. ವಿಘ್ನೇಶ್ವರನನ್ನು ಅನನ್ಯ ಭಾವದಿಂದ ಪ್ರಾರ್ಥಿಸಿ.
ಕರ್ಕಾಟಕ : ಕಚೇರಿ ಕೆಲಸ ಕಾರ್ಯಗಳಲ್ಲಿ ಜಯ. ನೀವು ಕೆಲಸ ಮಾಡುವ ಸ್ಥಳದಲ್ಲಿ ಪ್ರಶಂಸೆ. ಆದರೆ ಮಾತಿಗೆ ಮುನ್ನ ಗಡಿಬಿಡಿ ಬೇಡ. ನಿಮ್ಮ ಮುಖ್ಯಸ್ಥರ ಮಾತನ್ನು ಸಾವಧಾನದಿಂದ ಆಲಿಸಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಸಹೋದರನ ಸಹಕಾರ ದೊರೆಯಲಿದೆ. ಸಾಲಬಾಧೆಯಿಂದ ಮುಕ್ತಿ. ಶಿವನನ್ನು ಪ್ರಾರ್ಥಿಸಿ.
ಸಿಂಹ : ನಿಮ್ಮ ನಿಜವಾದ ಅರ್ಹತೆಯನ್ನು ಮೇಲಾಧಿಕಾರಿಗಳು ಅಳೆಯುವರು. ವ್ಯಾಪಾರ-ವ್ಯವಹಾರಗಳಲ್ಲಿ ಲಾಭ. ಕುಟುಂಬದವರಿಗೆ ನೆರವಾಗುತ್ತೀರಿ. ಎಂಜಿನಿಯರ್ಸ್, ವೈದ್ಯ ವೃತ್ತಿಯವರಿಗೆ ಮಹತ್ವದ ದಿನವಾಗಿರಲಿದೆ. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥನೆ ಮಾಡಿ.
ಕನ್ಯಾ : ಪ್ರೇಮ ಸಂಬಂಧದಲ್ಲಿ ಆಹ್ಲಾದಕರದಿನ. ಆಸ್ತಿ-ಪಾಸ್ತಿ ವಿಚಾರದಲ್ಲಿ ಮಹತ್ವದ ಸುದ್ದಿ ಕೇಳುತ್ತೀರಿ. ಸ್ನೇಹತರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಹಣದ ಸಮಸ್ಯೆ ಬಗೆಹರಿಯುತ್ತದೆ. ಪೋಷಕರು ಸಹಕಾರ ನೀಡುತ್ತಾರೆ. ವಾಹನ ಸೌಖ್ಯ ಮೊದಲಾದ ಫಲಗಳಿವೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.
ತುಲಾ : ಆರೋಗ್ಯದಲ್ಲಿ ಏರುಪೇರು, ಸಹೋದರಿಯಿಂದ ಸಹಕಾರ, ನಿಮ್ಮವರಿಂದಲೇ ಅವಮಾನ, ಕಠಿಣ ಶ್ರಮದಿಂದ ಲಾಭ, ಯಶಸ್ಸಿಗೆ ದಾರಿ ಕಂಡುಕೊಳ್ಳುವ ಸಮಯ ಮೊದಲಾದ ಮಿಶ್ರಫಲಗಳು ಗೋಚರವಾಗುತ್ತಿವೆ. ಧನ್ವಂತರಿಯನ್ನು ಪೂಜಿಸಿ.
ವೃಶ್ಚಿಕ : ಹೆಸರು, ಸಾಧನೆ, ಕೀರ್ತಿ ಸಂಪಾದನೆಗೆ ದಾರಿ. ಬಯಸಿದ ಕೆಲಸ ಕಾರ್ಯಗಳಲ್ಲಿ ಜಯ. ಘನತೆ ಕಾಪಾಡಿಕೊಳ್ಳಿ ಯಶಸ್ಸು ಸದ್ಯದಲ್ಲೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನೀವು ಕೂಡ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ.
ಧನು : ಕಾರ್ಯಸಾಧನೆಯ ದಿನ. ಆದರೆ ಪ್ರಯಾಣದಲ್ಲಿ ಎಚ್ಚರವಿರಲಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಸುಬ್ರಹ್ಮಣ್ಯನನ್ನು ಅನನ್ಯಭಾವದಿಂದ ಪ್ರಾರ್ಥಿಸಿ.
ಮಕರ : ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಕೆಲಸದ ಸ್ಥಳದಲ್ಲಿ ಜವಬ್ದಾರಿ ಹೆಚ್ಚಲಿದೆ. ಹಣಕಾಸಿನ ಸುಧಾರಣೆ, ಬಾಕಿ ಬಿಲ್ ಗಳನ್ನೆಲ್ಲಾ ಪಾವತಿಸಲು ಅನುಕೂಲಕರವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಗಣೇಶ ಹಾಗೂ ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ.
ಕುಂಭ : ನಿಮ್ಮ ದೌರ್ಬಲ್ಯ ಸರಿಪಡಿಸಿಕೊಳ್ಳಿ. ಬೇರೆಯವರನ್ನು ಟೀಕಿಸುವ ಕೆಲಸ ಬೇಡವೇ ಬೇಡ. ಆರೋಗ್ಯದತ್ತ ಗಮನಕೊಡಿ. ಕೆಲವರನ್ನು ನಿಮ್ಮ ಸಂಘ ಬೆಳೆಸಲು ಇಷ್ಟಪಡುತ್ತಾರೆ. ನಿಮ್ಮೊಂದಿಗೆ ಬೆರೆಯಲು ಪ್ರಯತ್ನ ಪಡುತ್ತಾರೆ. ಮಹೇಶ್ವರ, ನಾಗ ದೇವರು, ಆಂಜನೇಯನನ್ನು ಭಕ್ತಿ ಭಾವದಿಂದ ಪ್ರಾರ್ಥಿಸಿ.
ಮೀನ : ವ್ಯಾಪಾರ –ವ್ಯವಹಾರಗಳಲ್ಲಿ ಯಶಸ್ಸು. ಆಭರಣ, ಬಟ್ಟೆ ವ್ಯಾಪಾರಿಗಳಿಗೆ ಲಾಭದಾಯಕ ದಿನ. ಆರೋಗ್ಯದಲ್ಲಿ ಸುಧಾರಣೆ. ಮಾತಿನಲ್ಲಿ ಸಂಯಮವಿರಲಿ. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ.