ಪ್ರತಿ ಅಡುಗೆ ಮನೆಯಲ್ಲಿಯೂ ಮೊಸರಿಗೆ ಒಂದು ಸ್ಥಾನ ಇದ್ದೇ ಇರುತ್ತದೆ.ಕೆಲವರಿಗೆ ಊಟದ ಮುಗಿಸಲು ಕೊನೆಯಲ್ಲಿ ಮೊಸರು ಬೇಕೇ ಬೇಕು. ಅಂದರೆ ಮೊಸರಿಲ್ಲದೆ ಅವರ ಭೋಜನ ಪೂರ್ಣವಾಗುವುದೇ ಇಲ್ಲ. ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ.ಇದು ದೇಹವನ್ನು ಡಿಹೈಡ್ರೆಟ್ ಆಗದಂತೆ ತಡೆಯುತ್ತದೆ. ಮೊಸರು ತಿನ್ನಲು ಇಂಥದ್ದೇ ಕಾಲ ಎಂದೇನಿಲ್ಲ. ಯಾವ ಕಾಲದಲ್ಲಿ ಬೇಕಾದರೂ ಮೊಸರು ಸೇವಿಸಬಹುದು. ಅದು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಿರಿಯರು ಕಿರಿಯರು ಎನ್ನದೆ ಪ್ರತಿಯೊಬ್ಬರೂ ನಿತ್ಯ ಒಂದು ಕಪ್ ಮೊಸರು ತಿಂದರೆ ಒಳ್ಳೆಯದು.
ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಸಿಗಲಿದೆ. ಮೊಸರಿನಲ್ಲಿ ರಾಸಾಯನಿಕ ಪದಾರ್ಥಗಳಿವೆ. ಹಾಗಾಗಿ ದಿನ ನಿತ್ಯ ಮೊಸರು ತಿನ್ನುವುದರಿಂದ ಹಲವು ಸಮಸ್ಯೆಯಿಂದ ದೂರವಿರಬಹುದು.
ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು.
ಮೊಸರಿನಲ್ಲಿ ರಿಬೋಫ್ಲಾವಿನ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಇತ್ಯಾದಿ ಪೋಷಕಾಂಶಗಳಿವೆ. ಮತ್ತೊಂದು ಅಂಶವೆಂದರೆ ಮೊಸರು ತಿಂದರೆ ದೀರ್ಘಕಾಲದವರೆಗೆ ಮೂಳೆಗಳು ಮತ್ತು ಹಲ್ಲುಗಳು ಸದೃಢವಾಗಿರುತ್ತವೆಯಂತೆ
ಮೊಸರು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಮೊಸರು ಸಹಾಯಕ
ಹೊಟ್ಟೆಯನ್ನು ತಂಪಾಗಿಡಲು ಸಹಾಯಕ: ಬೇಸಿಗೆ ಕಾಲದಲ್ಲಿ ತಂಪು ಪಾನೀಯವನ್ನು ಕುಡಿಯುವ ಬದಲು ಮೊಸರಿನಿಂದ ತಯಾರಿಸಲಾದ ಲಸ್ಸಿ ಕುಡಿದರೆ ಹೊಟ್ಟೆಯನ್ನು ತಂಪಾಗಿಡಬಹುದು. ಕಡೆದ ಮಜ್ಜಿಗೆ ಕೂಡ ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ.
ಅನೇಕರು ಮೊಸರನ್ನು ಅನ್ನದೊಂದಿಗೆ ಬೆರೆಸಿ ತಿನ್ನುತ್ತಾರೆ. ಇದು ಹೊಟ್ಟೆಯನ್ನು ಆರೋಗ್ಯವಾಗಿರಿಸುತ್ತದೆ, ಜೀರ್ಣ ಕ್ರೀಯೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಅತಿಸಾರದ ಸಮಸ್ಯೆಯಿಂದ ದೂರವಿರಿಸುತ್ತದೆ.
ಹೃದಯವನ್ನು ಆರೋಗ್ಯವಾಗಿಡುತ್ತದೆ: ಮೊಸರು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಇನ್ನು ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಮೊಸರು ನಮ್ಮನ್ನು ರಕ್ಷಿಸುತ್ತದೆ.
ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ
ಮೊಸರಿನಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಅಂಶವಿದೆ. ಮಾನವನ ಮೂಳೆಗಳು ಆರೋಗ್ಯವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ. ಹಾಗಾಗಿ ಮೊಸರು ಸೇವಿಸುದರಿಂದ ಅಲ್ಪ ಪ್ರಮಾಣದ ಕ್ಯಾಲ್ಸಿಯಂ ಸಿಗುತ್ತದೆ. ಇದರಿಂದ ಮೂಳೆಗಳ ಬೆಳವಣಿಗೆಗೂ ಕಾರಣವಾಗುತ್ತದೆ
ಮೊಸರು ತಿನ್ನುವುದರಿಂದ ಹಲ್ಲು, ಉಗುರುಗಳು, ಸ್ನಾಯುಗಳನ್ನು ಆರೋಗ್ಯವಾಗಿರಿಸುತ್ತದೆ. ದಿನನಿತ್ಯ ಮೊಸರು ಸೇವಿಸುವುದರಿಂದ ಕೀಲು ನೋವಿನಿಂದ ದೂರವಿರಬಹುದು.