ಕೆಲವರ ತಲೆಯಲ್ಲಿ ಹೆಚ್ಚಿನ ವಿಷಯಗಳೇನು ಇರಲ್ಲ..! ಆದ್ರೂ ಸ್ಟೇಜ್ ಮೇಲೆ ಹೋಗಿ ಆರಾಮಾಗಿ ಗಂಟಗಟ್ಟಲೆ ಮಾತಾಡ್ತಾರೆ..! ಇನ್ನು ಕೆಲವರಿಗೆ ತುಂಬಾ ವಿಷಯಗಳು ಗೊತ್ತಿರುತ್ತವೆ..! ಬಟ್ ಸ್ಟೇಜ್ ಮೇಲೆ ಹೋಗಿ ಮಾತಾಡೋಕೆ ತುಂಬಾ ಭಯ ಪಡ್ತಾರೆ..! ಏನೇನೋ ಮಾತಾಡ್ಬೆಕು ಅಂತ ಅನ್ಕೊಂಡು ಹೋಗಿರ್ತಾರೆ..! ಬಟ್, ವೇದಿಕೆ ಹತ್ತಿದ ತಕ್ಷಣ ಎಲ್ಲವನ್ನೂ ಮರೆತು ಬಿಡ್ತಾರೆ..! ವಿಷಯ ಗೊತ್ತಿದ್ರೂ ಎದುರು ಕುಳಿತ ಜನರನ್ನು ಕಂಡು ಗಲಿಬಿಲಿಗೆ ಒಳಗಾಗಿ ಮಾತನಾಡದೇ ಸ್ಟೇಜಿನಿಂದ ಇಳಿದು ಬರೋರೂ ಇದ್ದಾರೆ..! ನಿಮಗೂ ಅಂಥಾ ಸ್ಟೇಜ್ ಫಿಯರ್ ಇದೆಯಾ..?! ತಲೆಕೆಡಿಸಿಕೊಳ್ಳಬೇಡಿ.., ಭಯ ಅಂತ ಸಿಕ್ಕ ಅವಕಾಶದಿಂದ ವಂಚಿತರಾಗಬೇಡಿ..! ಸ್ಟೇಜ್ ಫಿಯರ್ ಇದ್ರೆ ಈ ಕೆಳಗಿನ ಟ್ರಿಕ್ಸ್ ಗಳನ್ನು ಅನುಸರಿಸಿ..! ಹೆದರ ಬೇಡಿ ಹೋಗಿ ಮಾತಾಡಿ..!
1 ಮಾತನಾಡಬೇಕಾದ ವಸ್ತುವಿಷಯ ಗೊತ್ತಿರಲಿ..!
ನೀವು ಯಾವುದೇ ವೇದಿಕೆಗೆ ಆಗಿರಬಹುದು.., ಮಾತನಾಡಲು ಹೋಗುವಾಗ ಏನನ್ನು ಮಾತನಾಡಬೇಕೆಂಬುದನ್ನು ತಿಳಿದುಕೊಂಡು ಒಮ್ಮೆ ಪ್ರಿಪೇರ್ ಆಗಿ ಹೋಗಿ..! ಹಾಗೆ ಮಾಡದೇ ಸುಮ್ಮನೇ ನನಗೆ ಆ ವಿಷಯಗೊತ್ತು.. ಏನು ಮಾತನಾಡಬೇಕೆಂಬುದನ್ನು ಚೆನ್ನಾಗಿ ಬಲ್ಲೆ ಅಂತ ಏನೇನೂ ಸಿದ್ಧತೆ ಮಾಡಿಕೊಳ್ಳದೆ ಯಾವತ್ತೂ ಸ್ಟೇಜಿಗೆ ಹೋಗಲೇ ಬೇಡಿ..! ನೀವು ತಯಾರಿ ನಡೆಸಿಲ್ಲದೇ ಇದ್ದರೆ.. ಮೊದಲೇ ಸ್ಟೇಜ್ ಫಿಯರ್ ಇರೋ ನೀವು ಆ ವೇದಿಕೆ ಹತ್ತಿದೊಡನೆ ಮತ್ತಷ್ಟು ಗಲಿಬಿಲಿಗೆ ಒಳಗಾಗ್ತೀರ..! ಆದ್ದರಿಂದ ನೀವು ಮೊದಲು ನೀವು ಮಾತನಾಡಬೇಕೆಂದಿರುವ ವಿಷಯವನ್ನು ತಿಳಿದುಕೊಳ್ಳಿ. ಆಗ ನಿಮಗೆ ಆತ್ಮವಿಶ್ವಾಸ ಮೂಡುತ್ತದೆ.
2. ಆರಂಭದಲ್ಲೇ ಕ್ಷಮೆ ಕೇಳ್ಬೇಡಿ..!
ಕೆಲವರು ಸ್ಟೇಟ್ ಹತ್ತಿದ ತಕ್ಷಣ `ಓಹ್ ಸಾರಿ’ ನನ್ನ ಕ್ಷಮಿಸಿ, ನಾನು ಯಾವುದೇ ತಯಾರಿ ನಡೆಸಿಕೊಂಡಿಲ್ಲ..! ಎಂದೇ ಮಾತನ್ನು ಆರಂಭಿಸ್ತಾರೆ..! ನೀವು ಯಾವತ್ತೂ ಈ ರೀತಿ ಮಾಡಲೇ ಬೇಡಿ. ಆಗ ನಿಮ್ಮ ಮಾತನ್ನು ಕೇಳಲು ಕುಳಿತಿರುವವರಿಗೆ ನಿಮ್ಮ ಬಗ್ಗೆ ತಪ್ಪು ಯೋಚನೆ ಮೂಡಬಹುದು..! ಆಗ ಕೇಳುಗರಿಗೆ ಆಸಕ್ತಿ ಆರಂಭದಲ್ಲೇ ಇಲ್ಲದೇ ಹೋದರೆ.., ನೀವೇನು ಮಾತನಾಡಲು ಸಾಧ್ಯ..! ಯಾವತ್ತೂ ಸ್ಟೇಜ್ ಹತ್ತೋ ಮೊದಲು ವಿಷಯ ತಿಳಿದುಕೊಂಡು, ಗೊತ್ತು ಅಂತಾನೇ ಹೋಗಿರ್ಬೇಕು..! ಸಾರಿ ಎಂದು ಆರಂಭದಲ್ಲೇ ನೀವು ಕೇಳಿ ಬಿಟ್ರೆ ನೀವೇ ನರ್ವಸ್ ಆಗೋ ಚಾನ್ಸ್ ಕೂಡ ಇರುತ್ತೆ..!
3. ನಿಮ್ಮ ಅನುಭಗಳನ್ನು ಹೇಳಿಕೊಳ್ಳಿ..!
ನೀವು ಮಾತನಾಡುತ್ತಿರೋ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಸ್ವಂತ ಅನುಭವಗಳೇನಾದರು ಇದ್ದರೆ ಅದನ್ನು ಆಗಾಗ ಸೇರಿಸಿಕೊಳ್ತಾ ಮಾತನಾಡಿ..! ಬೇರೆ ಕತೆಯೊಡನೆ ನಿಮ್ಮಕತೆಯನ್ನೂ ವೀಕ್ಷಕರೊಡನೆ ಹಂಚಿಕೊಂಡಾಗ, ಅವರನ್ನು ಭಾವನಾತ್ಮಕವಾಗಿ ನಿಮ್ಮತ್ತ ಸೆಳೆದುಕೊಳ್ಳಲು ಸಾಧ್ಯ..! ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದರೆ ನೀವು ಸ್ಟೇಜಿನಲ್ಲಿ ಎಷ್ಟು ಹೊತ್ತು ಬೇಕಾದ್ರೂ ಮಾತನಾಡ್ತಾ ಹೋಗಬಹದು..!
ನಿರ್ಮಾಪಕ
4. ನಗಿಸಿ, ಅಚ್ಚರಿಗೊಳಿಸಿ……..!
ಮೊದಲೇ ಹೇಳಿರುವಂತೆ ಪ್ರೇಕ್ಷಕರನ್ನು ನಿಮ್ಮತ್ತ ಸೆಳೆಯುವುದು ಮುಖ್ಯವಾಗಿರುತ್ತೆ..! ನೀವು ಅವರನ್ನು ನಗಿಸಿ..,ಆಶ್ಚರ್ಯಚಕಿತರನ್ನಾಗಿಸಿ, ಭಯಬೀಳಿಸಿ.. ಹೀಗೆ ಬೇರೆ ಬೇರೆ ರೀತಿಯ ಭಾವನೆಗಳ ಮೂಲಕ ಅವರನ್ನು ನಿಮ್ಮತ್ತ ಸೆಳೆಯಿರಿ..!
5. ಹೊಸದನ್ನು ಹೇಳಿ..!
ನಿಮ್ಮ ಪ್ರೇಕ್ಷಕರು ಹೊಸದನ್ನು ಕೇಳೋಕೆ ಅಂತ ಬಂದಿರ್ತಾರೆ..! ನೀವು ಅವರಿಗೆ ಹೊಸ ಹೊಸ ಸಂಗತಿಗಳನ್ನೇ ಹೇಳಿ..! ನಿಮ್ಮ ಮಾತು ಮುಗಿದ ಮೇಲೂ ಅವರು ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಮಾತುಗಳನ್ನಾಡಿ..!
6. ಪಠ್ಯದೊಡನೆ ಸರಿದೂಗುವ ಚಿತ್ರವೂ ಇರಲಿ..!
ನೀವು ಪವರ್ ಪಾಯಿಂಟ್ ಬಳಸಿ ಮಾತನಾಡುವುದಾದರೆ ಅಲ್ಲಿ ಬಳಸುವ ಟೆಕ್ಸ್ಟ್ಗೆ ಸಂಬಂಧಿಸಿದ ಚಿತ್ರಗಳೂ ಇರಲಿ..! ಅದು ಪ್ರೇಕ್ಷಕರನ್ನು ಬೇಗ ತಲುಪುತ್ತದೆ.
7. ಮೊದಲೇ ಭೇಟಿಕೊಡಿ..!
ನೀವು ಮಾತನಾಡ ಬೇಕಿರುವ ಸ್ಥಳಕ್ಕೆ ಮುಂಚಿತವಾಗಿಯೇ ಭೇಟಿಕೊಟ್ಟರೆ ಒಳ್ಳೆಯದು..! ಆಗ ನಿಮಗೆ ಭಯ ಆಗಲ್ಲ..! ಮಾನಸಿಕವಾಗಿ ತಯಾರಾಗಿರುತ್ತೀರಿ..!
8. ಸುತ್ತಲೂ ಕಣ್ಣಾಡಿಸಿ..!
ವೇದಿಕೆಯಲ್ಲಿ ನಿಂತು ಮಾತನಾಡುವಾಗ ನೀವು ನಿಮ್ಮಪಾಡಿಗೆ ಎತ್ತಲೋ ನೋಡ್ತಾ ಮಾತಾಡಬೇಡಿ..! ಆಗ ನೀವು ಪ್ರೇಕ್ಷಕರನ್ನು ತಲುಪಲ್ಲ..! ನೀವು ಎಲ್ಲಾ ಪ್ರೇಕ್ಷಕರತ್ತ ಕಣ್ಣಾಡಿಸುತ್ತಾ ನಗುಮೊಗದಿ ಮಾತನಾಡಿ..! ಆಗ ನಿಮಗೆ ಸ್ಟೇಜ್ ಫಿಯರ್ ಇದ್ದಕ್ಕಿದ್ದಂತೆ ಮಾಯವಾಗುತ್ತೆ..!
ಸ್ಟೇಜ್ ಫಿಯರ್ ಇದ್ರೆ ಅಂತಲ್ಲ.. ಎಲ್ಲರೂ ಈ ಭಾಷಣದ ಟ್ರಿಕ್ಸ್ ಗಳನ್ನು ತಿಳಿದುಕೊಂಡಿರ್ಬೇಕು..! ಸಮಯದ ಮಿತಿಯೂ ಬಹಳ ಮುಖ್ಯ..! ಎಲ್ಲದಕ್ಕಿಂತ ಹೆಚ್ಚಾಗಿ ಸ್ನೇಹಿತರೆ ಸ್ಟೇಜ್ ಹತ್ತೋಕೆ, ಮಾತನಾಡೋಕೆ ನಿಮಗೆ ಹೆದರಿಕೆ ಯಾಕೆ..? ಆರಾಮಾಗಿ ಮಾತನಾಡಿ.. ಹೆದರ ಬೇಡಿ..! ನಿಮಗೆ ಸ್ಟೇಜ್ ಹತ್ತಿ ಮಾತಾಡೋ ಯೋಗ್ಯತೆ ಇಲ್ಲ ಅಂತಾಗಿದ್ರೆ ಆ ಸ್ಟೇಜ್ ನಿಮಗೆ ಸಿಗ್ತಾ ಇತ್ತಾ..!? ನೀವು ಯೋಗ್ಯರೇ ಆಗಿದ್ದೀರಿ ಅದಕ್ಕೆ ವೇದಿಕೆ ಸಿಕ್ಕಿದೆ ಭಯದ ಮುಂದೆ ಜಯವಿದೆ.. ಡೋಂಟ್ವ ರಿ ಮಾತಾಡಿ ಮಾತಾಡಿ ಮಾತಾಡಿ..! ಮಾತಿದ್ರೆ ಜಗತ್ತನ್ನೇ ಗೆಲ್ಲಬಹುದು..!