ಮೊದಲ ಭೇಟಿಗೂ ಮುನ್ನ ಇದನ್ನು ಓದಿಕೊಂಡು ಹೋಗಿ..!

0
557

ನೀವು ನಿಮ್ಮ ಕನಸಿನ ರಾಜ/ರಾಣಿಯನ್ನು ಮೊದಲ ಸಲ ಹೋಗಲು ಹೋಗುತ್ತಿದ್ದೀರಾ? ಹಾಗಾದ್ರೆ ಇದನ್ನು ಓದಿಕೊಂಡು ಹೋಗಿ. ನಿಮ್ಮದು ಎಲ್ಲಾ ಸಕ್ಸಸ್​ ಆಗಿದ್ರೆ ಖುಷಿ… ಇನ್ನೂ ಕೂಡ ಮೊದಲ ಭೇಟಿ ಉತ್ಸಾಹದಲ್ಲಿ ಇರುವ ಸ್ನೇಹಿತರಿಗೆ ಇದನ್ನುನ ತಿಳಿಸಿಕೊಡಿ..

 

ಓಕೆ .. ಡೈರೆಕ್ಟ್ ಆಗಿ ಮ್ಯಾಟ್ರಿ ಬರ್ರೀ ರೀ ಅಂತಿದ್ದೀರಾ..? ಓಕೆ ಓಕೆ.. ಮೊದಲ ಭೇಟಿ ಉತ್ಸಾಹದಲ್ಲಿ ಕೆಲವೊ0ದು ಯಡವಟ್ಟು ಮಾಡಿಕೊಳ್ಳೋರು ಹೆಚ್ಚು. ಮೊದಲ ಭೇಟಿಯ ವೇಳೆ ಈ ತಪ್ಪುಗಳನ್ನು ಮಾಡಲೇ ಬೇಡಿ..

ಮೊದಲನೆಯದಾಗಿ ಮೊದಲ ಭೇಟಿಯಲ್ಲಿಯೇ ನಿಮ್ಮ ಸಂಗಾತಿ ಏನೆಲ್ಲ ಮಾಡಬೇಕು, ಏನು ಮಾಡಬಾರದು ಎಂಬುದನ್ನು ಹೇಳಿಬಿಡಬೇಡಿ. ನಿಮ್ಮಿಷ್ಟದಂತೆಯೇ ಅವರು ಬದಲಾಗಬೇಕು ಎನ್ನುವ ಕಂಡೀಷನ್‌ ಹಾಕುವುದು ಬೇಡ. ಆದರೆ ನಿಮ್ಮ ಇಷ್ಟವನ್ನು ಹೇಳಿ ಅಷ್ಟೆ. ನಿಮ್ಮ ಮನಸ್ಥಿತಿ ಅಥವಾ ಲೈಫ್​ ಸ್ಟೈಲ್​ನೊಂದಿಗೆ ಹೊಂದಾಣಿಕೆ ಸಾಧ್ಯವಾ ಇಲ್ಲವಾ ಎಂಬುದು ಅವರಿಗೆ ಅರ್ಥವಾಗುತ್ತೆ.
ಮಹಿಳೆ ಅಥವಾ ಪುರುಷ ಯಾರೇ ಆಗಿರಲಿ, ಸಂಗಾತಿ ತನ್ನಿಷ್ಟದಂತೆಯೇ ಇರಬೇಕು ಎನ್ನುವ ಹಿಡಿತ ಸಾಧುಸುವಂಥ ಮಾತುಗಳನ್ನು ಮಾತ್ರ ಆಡಲು ಹೋಗಬೇಡಿ. ಏಕೆಂದರೆ ಅದು ಮೊದಲ ಭೇಟಿ. ನಿಮ್ಮ ವ್ಯಕ್ತಿತ್ವದ ಬಗ್ಗೆ ಅವರಿಗೇನೂ ತಿಳಿದಿಲ್ಲ. ಆದರೆ ನಿಮ್ಮ ಮಾತಲ್ಲೇ ಮುಂದಿನ ನಡೆ ನಿಂತಿದೆ.

ಸಂಬಂಧವೊಂದಕ್ಕೆ ಕಮೀಟ್‌ ಆಗುವಾಗ ನಿಜವಾಗಿಯೂ ಆರ್ಥಿಕ ಪರಿಸ್ಥಿತಿ ಮುಖ್ಯ. ಹಾಗಂತ ಮೊದಲ ಭೇಟಿಯಲ್ಲಿ ಇದನ್ನೆಲ್ಲ ಕೇಳಲೇಬೇಡಿ. ಎಷ್ಟು ಆಸ್ತಿ ಇದೆ, ಸಾಲದ ಮೊತ್ತ, ತಿಂಗಳ ಸಂಬಳವನ್ನೆಲ್ಲ ಕೇಳಲು ಇದು ಸೂಕ್ತ ಸಮಯವಲ್ಲ. ಅದರಲ್ಲೂ ಹುಡುಗಿಯ ಆರ್ಥಿಕ ಸ್ಥಿತಿಯ ಬಗ್ಗೆ ಕೇಳಲು ಹೋಗಬೇಡಿ.

ಇನ್ನು ಮುಖ್ಯವಾಗಿ ನಿಮಗೆ ಇದಕ್ಕು ಮೊದಲು ಲವ್​ ಬ್ರೇಕಪ್ ಆಗಿದ್ರೆ ಆ ಪ್ರೇಮ ವೈಫಲ್ಯದ ಕಥೆಯನ್ನು ಮರೆತು ಬಿಡಿ. ಹೊಸ ಬದುಕು ಆರಂಭಿಸಲು ಹೊರಟಿದ್ದರೆ ಆ ಬಗ್ಗೆ ಸಂಗಾತಿಯಾಗುವವರಿಗೆ ಖಂಡಿತವಾಗಲೂ ಹೇಳಿ. ಆದರೆ ಹಳೆ ಪ್ರೇಮಿಯ ಜತೆಗೆ ಕಳೆದ ಎಲ್ಲಾ ಕ್ಷಣಗಳ ವಿವರ ಬೇಡ. ಅವರ ನೆನಪಿನಲ್ಲೇ ಇರುವ ಅಥವಾ ಹೋಲಿಕೆಯ ಮಾತುಗಳನ್ನು ಮಾತ್ರ ಹೇಳಲು ಹೋಗಬೇಡಿ.

LEAVE A REPLY

Please enter your comment!
Please enter your name here